ಕಿನ್ನಿಗೋಳಿ: ಕಿನ್ನಿಗೋಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರದಲ್ಲಿ ಸಾಮಾನ್ಯ ಮೀಸಲಾತಿ ಯಲ್ಲಿ ಬಿಜೆಪಿಯಿಂದ ಮಾಜಿ ತಾಲೂಕು ಪಂಚಾಯಿತಿ ಸದಸ್ಯ ವಿನೋದ್ ಕುಮಾರ್ ಬೊಳ್ಳೂರು 1117 ಅಂತರದಿಂದ ಕಾಂಗ್ರೆಸ್‌ನ ಪ್ರಮೋದ್ ಕುಮಾರ್ ಅವರನ್ನು ಸೋಲಿಸಿದರು.
ಇತ್ತೀಚಿನ ವರ್ಷಗಳಲ್ಲಿ ಕಾಂಗ್ರೇಸ್ ಮುಲ್ಕಿ ಹೋಬಳಿಯಲ್ಲಿ ತನ್ನ ಲಯವನ್ನು ಕಳಕೊಂಡಿದ್ದು ಮುಲ್ಕಿ ನಗರ ಪಂಚಾಯಿತಿ ಕೂಡಾ ಬಿಜೆಪಿ ಪಾಲಾಗಿತ್ತು ಕಳೆದ ಸಾಲಿನಲ್ಲಿ ಹಿಂದುಳಿದ ವರ್ಗ ಎ ಮಹಿಳಾ ಮೀಸಲಾತಿಯಲ್ಲಿ ಬಿಜೆಪಿಯಿಂದ ಆಶಾ ರತ್ನಾಕರ ಸುವರ್ಣ ರ್ಸ್ಪಸಿ ಗೆಲುವು ಕಂಡು ರಾಜಕೀಯದಲ್ಲಿ ಅನೀರೀಕ್ಷಿತ ಫಲಿತಾಂಶ ನೀಡಿದ್ದರು ಇಲ್ಲಿ ಬಿಲ್ಲವರ ಮತಗಳು ಹಾಗೂ ಕಾಂಗ್ರೇಸ್ ನ ಸ್ವಲ್ಪ ಮಟ್ಟಿನ ಭಿನ್ನಾಬಿಪ್ರಾಯ ಹಿನ್ನಡೆಗೆ ಕಾರಣ ಹಾಗೂ ಕಡೇ ಗಳಿಗೆಯಲ್ಲಿ ಬಿಜೆಪಿಯ ಒಗ್ಗಟ್ಟಿನ ಮಂತ್ರ ಗೆಲುವಿಗೆ ಕಾರಣವಾಗಿದೆ..
ಕಿನ್ನಿಗೋಳಿ ಜಿಲ್ಲಾ ಪಂಚಾಯಿತಿಯಲ್ಲಿ 33459 ಒಟ್ಟು ಮತದಾರರಿದ್ದರು. 21791 ಮತಗಳು ಚಲಾವಣೆ ಗೊಂಡಿದ್ದು ಒಟ್ಟು ಪುರುಷರು 15797 ರಿದ್ದು 10169 ಮತ ಚಲಾಯಿಸಿದ್ದಾರೆ. 17662 ಒಟ್ಟು ಮಹಿಳೆಯರಿದ್ದು. 11622 ಮತ ಚಲಾಯಿಸಿದ್ದಾರೆ. ಒಟ್ಟು 65.13 ಶೇಕಡ ಮತ ಚಲಾವಣೆಯಾಗಿದೆ.

ಕಟೀಲು ಜಿಲ್ಲಾ ಪಂಚಾಯಿತಿ
ಸಾಮಾನ್ಯ ಮಹಿಳಾ ಮೀಸಲಾತಿಯ ಕಟೀಲು ಜಿಲ್ಲಾ ಪಂಚಾಯಿತಿಯಲಿ ಮಗದೊಮ್ಮೆ ಬಿಜೆಪಿಯಿಂದ ಬಿಜೆಪಿ ಉಪಾಧ್ಯಕ್ಷೆ ಕಸ್ತೂರಿ ಪಂಜ ಕಾಂಗ್ರೆಸ್‌ನ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯೆ ಶೈಲಾ ಸಿಕ್ವೇರಾ ಅವರನ್ನು 857 ಮತಗಳ ಅಂತರದಿಂದ ಸೋಲಿಸಿದರು.
ಇತ್ತಿಚೆಗೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲಿ ಕಟೀಲು ಜಿಲ್ಲಾ ಪಂಚಾಯಿತಿಗೆ ಸೇರಿದ ಕಲ್ಲಮುಂಡ್ಕೂರು, ಕಟೀಲು, ಎಕ್ಕಾರು, ಸೂರಿಂಜೆ, ಚೇಳ್ಯಾರು ಕೆಮ್ರಾಲ್ ಹಾಗೂ ಮೆನ್ನಬೆಟ್ಟು ಗ್ರಾಮ ಪಂಚಾಯಿತಿಗಳಲ್ಲಿ ಬಿಜೆಪಿ ಜಯಬೇರಿಯೊಂದಿಗೆ ಉತ್ತಮ ಸ್ಥಿತಿಯಲ್ಲಿತ್ತು. ಅಲ್ಲದೆ ಕಳೆದ 2010 ರ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಹಿಂದುಳಿದ ವರ್ಗ ‘ಎ’ ಮೀಸಲಾತಿಯಿಂದ ಬಿಜೆಪಿಯ ಈಶ್ವರ್ ಕಟೀಲ್ 8909 ಮತಗಳನ್ನು ಪಡೆದು ಜಯಶಾಲಿಯಾಗಿದ್ದರು. ಕಾಂಗ್ರೆಸ್‌ನ ಪ್ರಮೋದ್ ಕುಮಾರ್ 6956, ಜೆಡಿಎಸ್‌ನ ಕೆ. ಎ. ಅಬ್ದುಲ್ಲಾ 1471 ಮತಗಳನ್ನು ಪಡೆದಿದ್ದರು . ಬಿಜೆಪಿ 1953 ಮತಗಳಿಂದ ಜಯಗಳಿಸಿತ್ತು.
ಬಜೆಪಿಯಲ್ಲಿ ಸಣ್ಣಪುಟ್ಟ ಮನಸ್ತಾಪದ ನಡುವೆಯು ಬಿಜೆಪಿ ಜಯಗಳಿಸಿದೆ.

ಒಟ್ಟು ಮತದಾರರು 31068, ಚಲಾವಣೆಗೊಂಡ ಮತ 2105, ಒಟ್ಟು ಪುರುಷರು
14912, ಮತ ಚಲಾಯಿಸಿದ ಪುರುಷರು 9943, ಒಟ್ಟು ಮಹಿಳೆಯರು 16156, ಮತ ಚಲಾಯಿಸಿದ ಮಹಿಳೆಯರು 11162 ಶೇಕಡಾವಾರು 67.93.

Kinnigoli-23021602 Kinnigoli-23021601

Comments

comments

Comments are closed.

Read previous post:
Kinnigoli-22021604
ಕೆರೆಕಾಡು ಸಾಮೂಹಿಕ ವಿವಾಹ

ಕಿನ್ನಿಗೋಳಿ: ಸಾದಾತ್ ವಲೀ ಮಾಳೂರು ಗೋರಿಹಕ್ಕಲು ಸಹಾಯಾರ್ಥದಿಂದ ನಡೆಸಿಕೊಂಡು ಬರುತ್ತಿರುವ ಸಾದಾತ್ ವಲೀ ೧೧ನೇ ವಾರ್ಷಿಕ ಝಿಕರ್ ಮಜ್ಲಿಸ್, ಸಾಮೂಹಿಕ ವಿವಾಹ ಹಾಗೂ ಸೌಹಾರ್ಧ ಸಂಗಮ ಕಾರ್ಯಕ್ರಮ ಬಹುಮಾನ್ಯ...

Close