ಕಿನ್ನಿಗೋಳಿ: ಮತದಾನ ಫಲಿತಾಂಶ

ಕಲ್ಲಮುಂಡ್ಕೂರು: ಒಟ್ಟು ಮತದಾರರು 6964, ಚಲಾವಣೆಗೊಂಡ ಮತ 4663, ಒಟ್ಟು ಪುರುಷರು 3294, ಮತಚಲಾಯಿಸಿದ ಪುರುಷರು 2216, ಒಟ್ಟು ಮಹಿಳೆಯರು 3670, ಮತ ಚಲಾಯಿಸಿದ ಮಹಿಳೆಯರು 2447, ಶೇ. 66.96.
ಕಲ್ಲಮುಂಡ್ಕೂರು ಗ್ರಾಮ ಪಂಚಾಯಿತಿಯ ಸದಸ್ಯ ಸುಕುಮಾರ ಸನಿಲ್ ಕಾಂಗ್ರೇಸ್‌ನಿಂದ ಸ್ಪರ್ಧಿಸಿ ಬಿಜೆಪಿಯ ಸುಧಾಕರ ನಿಡ್ಡೋಡಿ ವಿರುದ್ದ 136 ಮತಗಳಿಂದ ವಿಜಯ ಗಳಿಸಿದ್ದಾರೆ 2010 ರಲ್ಲಿ ಬಿಜೆಪಿಯ ಭವ್ಯಾ ಗಂಗಾಧರ ಅಲ್ಪ ಮತದ ಅಂತರದಿಂದ ಜಯಶಾಲಿಯಾಗಿದ್ದರು. ಕಲ್ಲಮುಂಡ್ಕೂರು ಗ್ರಾಮ ಪಂಚಾಯಿತಿ ಕಾಂಗ್ರೇಸ್ ಬೆಂಬಲಿತ ಆಡಳಿತವಿದ್ದು ಈಗ ಅಲ್ಪ ಮತದ ಅಂತರದಿಂದ ವಿಜಯಿಯಾಗಿದ್ದಾರೆ.

Kinnigoli-23021603

ಬಳ್ಕುಂಜೆ : ಒಟ್ಟು ಮತದಾರರು 8280, ಚಲಾವಣೆ ಗೊಂಡ ಮತ 5108, ಒಟ್ಟು ಪುರುಷರು 3913, ಮತ ಚಲಾಯಿಸಿದ ಪುರುಷರು 2115, ಒಟ್ಟು ಮಹಿಳೆಯರು 4497, ಮತ ಚಲಾಯಿಸಿದ ಮಹಿಳೆಯರು 2793, ಶೇ. 60.95.
ಬಳ್ಕುಂಜೆ ತಾಲೂಕು ಪಂಚಾಯಿತಿ
ಬಿಜೆಪಿಯಿಂದ ರಶ್ಮಿ ಸತೀಶ್ ಆಚಾರ್ಯ ಕಾಂಗ್ರೇಸ್ ನ ಸುಜಾತ ಮೂಲ್ಯರನ್ನು 81 ಮತಗಳ ಅಲ್ಪ ಅಂತರದಿಂದ ಸೋಲಿಸಿದ್ದಾರೆ. 2010 ರ ಚುನಾವಣೆಯಲ್ಲಿ ಕಾಂಗ್ರೇಸ್‌ನ ನೆಲ್ಸನ್ ಲೋಬೋ ಗೆದ್ದಿದ್ದರು. ಕಳೆದ ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲಿ ಬಳ್ಕುಂಜೆ ಹಾಗೂ ಐಕಳ ಗ್ರಾಮ ಪಂಚಾಯಿತಿಗಳಲ್ಲಿ ಬಿಜೆಪಿ ಜಯಬೇರಿ ಬಾರಿಸಿದ್ದು ಗೆಲುವಿಗೆ ಪರೋಕ್ಷ ಕಾರಣವಾಗಿದೆ.

Kinnigoli-23021604

ಕಿನ್ನಿಗೋಳಿ : ಒಟ್ಟು ಮತದಾರರು 8274, ಚಲಾವಣೆ ಗೊಂಡ ಮತ 5369, ಒಟ್ಟು ಪುರುಷರು 3867, ಮತ ಚಲಾಯಿಸಿದ ಪುರುಷರು 2476, ಒಟ್ಟು ಮಹಿಳೆಯರು 4407, ಮತ ಚಲಾಯಿಸಿದ ಮಹಿಳೆಯರು 2893, ಶೇ.64.89.
ಕಿನ್ನಿಗೋಳಿ ತಾ. ಪಂ. ಕ್ಷೇತ್ರದಲ್ಲಿ ಸಾಮಾನ್ಯ ಮೀಸಲಾತಿಗೆ ಬಂದಿದ್ದು ಬಿಜೆಪಿಯ ದಿವಾಕರ ಕರ್ಕೇರ, ಕಾಂಗ್ರೇಸ್‌ನ ಜೊಸ್ಸಿ ಎಡ್ವಿನ್ ಪಿಂಟೊ, ಅವರನ್ನು 89 ಮತಗಳ ಅಂತರದಿಂದ ಸೋಲಿಸಿದ್ದಾರೆ.

Kinnigoli-23021605

ಮೆನ್ನಬೆಟ್ಟು : ಒಟ್ಟು 7932, ಚಲಾವಣೆಗೊಂಡ ಮತ 5229, ಒಟ್ಟು ಪುರುಷರು 3808, ಮತ ಚಲಾ ಯಿಸಿದ ಪುರುಷರು 2439, ಒಟ್ಟು ಮಹಿಳೆಯರು 4124, ಮತ ಚಲಾಯಿಸಿದ ಮಹಿಳೆಯರು 2790, ಶೇ. 65.92.
ಹಿಂದುಳಿದ ಬಿ ವರ್ಗ – (ಮಹಿಳೆ). ಮೀಸಲಾತಿಯ ಈ ಕ್ಷೇತ್ರದಲ್ಲಿ ಬಿಜೆಪಿಯ ಶುಭಲತಾ ಶೆಟ್ಟಿ ಕಾಂಗ್ರೇಸ್ ನ ಮಾಲತಿ ಶೆಟ್ಟಿ ಅವರನ್ನು 294 ಮತಗಳಿಂದ ಸೋಲಿಸಿದ್ದಾರೆ.
2010 ರ ಚುನಾವಣೆಯಲ್ಲಿ ಬಿಜೆಪಿಯಿಂದ ರ್ಸ್ಪಸಿದ್ದ ಬೇಬಿ ಸುಂದರ ಕೋಟ್ಯಾನ್ ವಿಜಯಿಯಾಗಿದ್ದರು. ಈ ವ್ಯಾಪ್ತಿಯ ಮೆನ್ನಬೆಟ್ಟು ಹಾಗೂ ಕಟೀಲು ಗ್ರಾಮ ಪಂಚಾಯಿತಿಗಳು ಬಿಜೆಪಿ ಆಡಳಿತ ಹೊಂದಿದ್ದು ಬಿಜೆಪಿಯ ಭದ್ರಕೋಟೆಯಾಗಿತ್ತು ಆದರೂ ಕಾರ್ಯಕರ್ತರ ಗುಂಪುಗಾರಿಕೆ ಇಲ್ಲಿ ಕಂಡು ಬಂದಿದೆ.

Kinnigoli-23021606

ಕಿಲ್ಪಾಡಿ ; ಒಟ್ಟು ಮತದಾರರು 8717, ಚಲಾವಣೆಗೊಂಡ ಮತ 5656, ಒಟ್ಟು ಪುರುಷರು 4103, ಮತ ಚಲಾಯಿಸಿದ ಪುರುಷರು 2649, ಒಟ್ಟು ಮಹಿಳೆಯರು 4614, ಮತ ಚಲಾಯಿಸಿದ ಮಹಿಳೆಯರು 3007, ಶೇ. 64.88
ಬಿಜೆಪಿಯ ಶರತ್ ಕುಬೆವೂರು ಕಾಂಗ್ರೇಸ್‌ನ ಕಿಶೋರ್ ಶೆಟ್ಟಿ ದೆಪ್ಪಣಿಗುತ್ತು ಅವರನ್ನು 390 ಮತಗಳಿಂದ ಸೋಲಿಸಿದ್ದಾರೆ.
2010 ರ ಚುನಾವಣೆಯಲ್ಲಿ ಬಿಜೆಪಿಯಿಂದ ರ್ಸ್ಪಸಿದ ವನಿತಾ ಉದಯ ಅಮೀನ್ ಆಯ್ಕೆಯಾಗಿದ್ದರು.

Kinnigoli-23021607

ಹಳೆಯಂಗಡಿ : ಒಟ್ಟು ಮತದಾರರು 8088,ಚಲಾವಣೆಗೊಂಡ ಮತ 5658, ಒಟ್ಟು ಪುರುಷರು 3914,ಮತ ಚಲಾಯಿಸಿದ ಪುರುಷರು 2729, ಒಟ್ಟು ಮಹಿಳೆಯರು 4174, ಮತ ಚಲಾಯಿಸಿದ ಮಹಿಳೆಯರು 2929. ಶೇ. 69.96.
ಬಿಜೆಪಿಯ ಜೀವನ್ ಪ್ರಕಾಶ್ ಕಾಂಗ್ರೇಸ್ ನ ಧನರಾಜ್ ಕೋಟ್ಯಾನ್ ಅವರನ್ನು 1294 ಮತಗಳ ಅಂತರದಿಂದ ಸೋಲಿಸಿದ್ದಾರೆ.

Kinnigoli-23021608

ಚೇಳಾರು : ಒಟ್ಟು ಮತದಾರರು 7227, ಚಲಾವಣೆಗೊಂಡ ಮತ 5254, ಒಟ್ಟು ಪುರುಷರು 3446, ಮತ ಚಲಾಯಿಸಿದ ಪುರುಷರು 2437, ಒಟ್ಟು ಮಹಿಳೆಯರು 3781, ಮತ ಚಲಾಯಿಸಿದ ಮಹಿಳೆಯರು 2817, ಶೇ.72.70.
ಬಿಜೆಪಿಯ ವಜ್ರಾಕ್ಷಿ ಶೆಟ್ಟಿ ಕಾಂಗ್ರೇಸಿನ ನಿಶಾ ಎಸ್. ಶೆಟ್ಟಿ ಅವರನ್ನು 287 ಮತಗಳ ಅಂತರದಿಂದ ಸೋಲಿಸಿದ್ದಾರೆ.

Kinnigoli-23021609

ಎಕ್ಕಾರು : ಒಟ್ಟು ಮತದಾರರು 8945, ಚಲಾವಣೆಗೊಂಡ ಮತ 5958, ಒಟ್ಟು ಪುರುಷರು 4364, ಮತ ಚಲಾಯಿಸಿದ ಪುರುಷರು 2850, ಒಟ್ಟು ಮಹಿಳೆಯರು 4581, ಮತ ಚಲಾಯಿಸಿದ ಮಹಿಳೆ ಯರು 3108, ಶೇಕಡಾವಾರು 66.61.
ಕಾಂಗ್ರೇಸ್ ನ ಪ್ರತಿಭಾ ಶೆಟ್ಟಿ ಬಿಜೆಪಿಯ ವೈ.ಲೀಲಾವತಿ ರಾವ್ ಅವರನ್ನು 83 ಮತಗಳಿಂದ ಸೋಲಿಸಿದ್ದಾರೆ.

Kinnigoli-230216010

Comments

comments

Comments are closed.

Read previous post:
Kinnigoli-23021602

ಕಿನ್ನಿಗೋಳಿ: ಕಿನ್ನಿಗೋಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರದಲ್ಲಿ ಸಾಮಾನ್ಯ ಮೀಸಲಾತಿ ಯಲ್ಲಿ ಬಿಜೆಪಿಯಿಂದ ಮಾಜಿ ತಾಲೂಕು ಪಂಚಾಯಿತಿ ಸದಸ್ಯ ವಿನೋದ್ ಕುಮಾರ್ ಬೊಳ್ಳೂರು 1117 ಅಂತರದಿಂದ ಕಾಂಗ್ರೆಸ್‌ನ ಪ್ರಮೋದ್ ಕುಮಾರ್...

Close