ಮೆನ್ನಬೆಟ್ಟು : ವಿಶೇಷ ಜಾಗೃತಿ ಕಾರ್ಯಕ್ರಮ

ಕಿನ್ನಿಗೋಳಿ: ಭಾರತ ಸರ್ಕಾರ ಕ್ಷೇತ್ರ ಪ್ರಚಾರ ನಿರ್ದೇಶನಲಾಯ, ವಾರ್ತಾ ಮತ್ತು ಪ್ರಸಾರ ಸಚಿವಾಲಯ ಮಂಗಳೂರು- ಹಾಸನ, ಕರ್ನಾಟಕ ಸರಕಾರ ಜಿಲ್ಲಾ ಪಂಚಾಯಿತಿ ಸ್ವಚ್ಛಭಾರತ ಮಿಷನ್ ದ.ಕ. ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆ ಮಂಗಳೂರು ಹಾಗೂ ಗ್ರಾಮ ಪಂಚಾಯಿತಿ ಮೆನ್ನಬೆಟ್ಟು ಸಂಯುಕ್ತ ಆಶ್ರಯದಲ್ಲಿ ಸ್ತ್ರೀ ಶಕ್ತಿ ಸ್ವಸಹಾಯ ಗುಂಪುಗಳು, ಸಂಘ ಸಂಸ್ಥೆಗಳ ಮಹಿಳೆಯರು ಮತ್ತು ಗ್ರಾಮಸ್ಥರಿಗಾಗಿ ಕೇಂದ್ರ ಸರ್ಕಾರದ ಯೋಜನೆಗಳು ಕುರಿತು ವಿಶೇಷ ಜಾಗೃತಿ ಕಾರ್ಯಕ್ರಮ ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆಯಿತು. ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರೋಜಿನಿ ಎಸ್. ಗುಜರನ್ ಕಾರ್ಯಕ್ರಮ ಉದ್ಘಾಟಿಸಿದರು.
ಈ ಸಂದರ್ಭ ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮೊರ್ಗನ್ ವಿಲಿಯಂ, ಸದಸ್ಯೆಯರಾದ ಲಕ್ಷ್ಮೀ, ಬೇಬಿ, ಸುಶೀಲ, ವಾರ್ತಾ ಪ್ರಸಾರ ನಿರ್ದೇಶನಾಲಯ ಸಹಾಯಕ ನಿರ್ದೇಶಕ ಕೆ.ಪಿ ರಾಜೀವನ್, ಕ್ಷೇತ್ರ ವಾರ್ತಾ ಪ್ರಸಾರ ನಿರ್ದೇಶನಾಲಯದ ಶ್ರೀಕಾಂತ್, ಮೇಲ್ವಿಚಾರಕಿ ಅಶ್ವಿನಿ, ರಾಜರತ್ನಪುರ ಅಂಗನವಾಡಿ ಶಿಕ್ಷಕಿ ಸಂಧ್ಯಾ ಉಪಸ್ಥಿತರಿದ್ದರು.

Kinnigoli-25021601

Comments

comments

Comments are closed.

Read previous post:
Mulki-23021602
ಶ್ರೀದೇವರ ಪಂಜಿನಡ್ಕ ಸವಾರಿ

ಮೂಲ್ಕಿ:ಶಿಮಂತೂರು ಶ್ರೀ ಆದಿಜನಾರ್ದನ ದೇವಸ್ಥಾನದ ವರ್ಷಾವಧಿ ಮಹೋತ್ಸವದ ಪ್ರಯುಕ್ತ ಶ್ರೀದೇವರ ಪಂಜಿನಡ್ಕ ಸವಾರಿ ವಿಜೃಂಣೆಯಿಂದ ನಡೆಯಿತು.

Close