ಬಿಲ್ಲವ ಟ್ರೋಫಿ -2016 ಕ್ರಿಕೆಟ್ ಪಂದ್ಯಾಟ

ಮುಲ್ಕಿ : ಬಿಲ್ಲವ ಸಮಾಜ ಜಾತಿ ಧರ್ಮಗಳ ಸಂಕೋಲೆಯಿಂದ ಹೊರಬಂದು ಎಲ್ಲಾ ಸ್ಥರಗಳಲ್ಲಿ ಚಿಂತನೆ ನಡೆಸಿ ಒಗ್ಗಟನ್ನು ಪ್ರದರ್ಶಿಸಿದಾಗ ಸಮಾಜ ಉನ್ನತಿ ಹೊಂದಲು ಸಾಧ್ಯ ಎಂದು ರಾಷ್ಟ್ರೀಯ ಬಿಲ್ಲವ ಮಹಾಮಂಡಲ ಅಧ್ಯಕ್ಷ ಹಾಗೂ ಬಿಲ್ಲವ ಕ್ರೀಡಾ ಸಮಿತಿ ಗೌರವಾಧ್ಯಕ್ಷ ಜಯ ಸಿ.ಸುವರ್ಣ ಹೇಳಿದರು.
ಮುಲ್ಕಿ ವಿಜಯ ಕಾಲೇಜಿನ ಕ್ರೀಡಾಂಗಣದಲ್ಲಿ ಶನಿವಾರ ಬಿಲ್ಲವ ಟ್ರೋಫಿ -2016 ಕ್ರಿಕೆಟ್ ಪಂದ್ಯಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಂಗಳೂರು ದೀಪಾ ಕಂಫರ್ಟ್ಸ್‌ನ ರಮೇಶ್‌ಕುಮಾರ್ ಕ್ರೀಡಾ ಕೂಟ ಉದ್ಘಾಟಿಸಿ ನಾರಾಯಣ ಗುರುಗಳ ಸಂದೇಶ ಪಾಲಿಸಬೇಕು. ಬಿಲ್ಲವ ಸಮಾಜವು ಶೈಕ್ಷಣಿಕವಾಗಿ ಮುಂದುವರಿಯಬೇಕು ಎಂದರು.
ವಾಸುದೇವ ಆರ್, ಕೋಟ್ಯಾನ್ ಮತ್ತು ಚಂದ್ರಶೇಖರ್ ಪೂಜಾರಿ ಕ್ರೀಡಾ ಧ್ವಜಾರೋಹಣಗೈದರು. ಅಖಿಲ ಭಾರತ ಬಿಲ್ಲವರ ಯೂನಿಯನ್ ಅಧ್ಯಕ್ಷ ನವೀನಚಂದ್ರ ಡಿ. ಸುವರ್ಣ, ಮಂಗಳೂರು ಜೆ.ಬಿ. ಕನ್ಸ್‌ಟ್ರಕ್ಷನ್‌ನ ಗಣೇಶ್ ಎ. ಬಂಗೇರ, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಅಧ್ಯಕ್ಷ ಸಾಯಿರಾಮ್, ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದ ಅಧ್ಯಕ್ಷ ಅಶೋಕ್ ಎಂ.ಸುವರ್ಣ, ಗುಜರಾತ್ ಬಿಲ್ಲವ ಸಂಘದ ಸ್ಥಾಪಕಾಧ್ಯಕ್ಷ ಮೋಹನ್ ಸಿ.ಪೂಜಾರಿ, ಬಿಲ್ಲವ ಜಾಗೃತಿ ಬಳಗದ ಅಧ್ಯಕ್ಷ ಎನ್.ಟಿ.ಪೂಜಾರಿ, ಎಲ್.ವಿ.ಅಮೀನ್, ವಿಜಯ ಕಾಲೇಜು ವಿಶ್ವಸ್ಥ ಮಂಡಳಿ ಅಧ್ಯಕ್ಷೆ ಶಮಿನಾ ಜಿ.ಆಳ್ವ, ಬಿಪಿನ್‌ಪ್ರಸಾದ್, ಎಲ್.ವಿ. ಅಮೀನ್‌ಮತ್ತಿತರರು ಉಪಸ್ಥಿತರಿದ್ದರು.
ಬಿಲ್ಲವ ಕ್ರೀಡಾ ಸಮಿತಿಯ ಅಧ್ಯಕ್ಷ ಹಾಗೂ ಚಲನಚಿತ್ರ ನಟ-ನಿರ್ದೇಶಕ ರಾಜಶೇಖರ್ ಆರ್.ಕೋಟ್ಯಾನ್ ಸ್ವಾಗತಿಸಿದರು. ಕಾರ್ಯಾಧ್ಯಕ್ಷ ಚಂಧ್ರಶೇಖರ್ ಸುವರ್ಣಸ್ತಾವನೆಗೈದರು. ಸಹಸಂಚಾಲಕ ನರೇಂದ್ರ ಕರೆಕಾಡು ಕಾರ್ಯಕ್ರಮ ನಿರ್ವಹಿಸಿ, ಬಿಲ್ಲವರ ಅಸೋಸಿಯೇಶನ್ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್ ವಂದಿಸಿದರು.
ಪಂದ್ಯಾಟದಲ್ಲಿ ದುಬೈ, ಮಸ್ಕತ್ ,ಕುವೈಟ್, ದೆಹಲಿ, ಗುಜರಾತ್, ಮುಂಬೈ, ಬೆಂಗಳೂರು ಸಹಿತ 16 ತಂಡಗಳು ಸ್ಪರ್ಧೆಯಲ್ಲಿವೆ.

Mulki-28021602 Mulki-28021603 Mulki-28021604 Mulki-28021605 Mulki-28021606 Mulki-28021607 Mulki-28021608 Mulki-28021609

 

Comments

comments

Comments are closed.

Read previous post:
Mulki-26021606
ಬ್ರಹ್ಮಕಲಶೋತ್ಸವ – ಪೂರ್ವಭಾವಿ ಸಭೆ

ಮೂಲ್ಕಿ: ಶಿಮಂತೂರು ಶ್ರೀ ಆದಿಜನಾರ್ಧನ ದೇವಸ್ಥಾನದಲ್ಲಿ ಮೇ 4 ರಿಂದ 9 ರವರೆಗೆ ಶ್ರೀ ದೇವರಿಗೆ ಬ್ರಹ್ಮಕಲಶೋತ್ಸವ ನಡೆಸುವ ಬಗ್ಗೆ ಪೂರ್ವಭಾವಿ ಸಭೆ ಹಾಗೂ ಮುಷ್ಠಿ ಕಾಣಿಕೆ...

Close