ಪಡುಪಣಂಬೂರು ಬಸದಿಯ ಜೀರ್ಣೋದ್ಧಾರ

ಮುಲ್ಕಿ : ನೂತನ ದೇವಾಲಯಗಳನ್ನು ನಿರ್ಮಿಸುವ ಬದಲು ಜೀರ್ಣಾವಸ್ಥೆಯಲ್ಲಿರುವ ದೈವ, ದೇವಳಗಳನ್ನು ಜೀರ್ಣೋದ್ಧಾರಗೊಳಿಸಿದಾಗ ಪುಣ್ಯ ಲಭಿಸುತ್ತದೆ. ೧೨೦೦ ವರ್ಷಗಳ ಹಿಂದೆಯೇ ಅಹಿಂಸಾ ಪರಮೋಧರ್ಮ ಎಂಬ ತತ್ವವನ್ನು ವಿಶ್ವಕ್ಕೆ ಪರಿಚಯಿಸಿ ಅನುಷ್ಠಾನಗೊಳಿಸಿದ ಕೀರ್ತಿ ಸಾವಂತ ಅರಸರಿಗೆ ಸಲ್ಲುತ್ತದೆ. ಎಂದು ವಿಧ್ವಾನ್ ಪಂಜ ಭಾಸ್ಕರ್ ಭಟ್ ಹೇಳಿದರು.
ಪಡುಪಣಂಬೂರು ಭಗವಾನ್ ಶ್ರೀ ಅನಂತನಾಥ ಸ್ವಾಮಿ ಮತ್ತು ಪಧ್ಮಾವತಿ ಅಮ್ಮನವರ ಬಸದಿಯ ಜೀರ್ಣೋದ್ಧಾರ ಮತ್ತು ಧಾಮ ಸಂಪ್ರೋಕ್ಷಣಾ ಪೂರ್ವಕ ಪುನರ್ ಪ್ರತಿಷ್ಠಾ ಮಹೋತ್ಸವದ ನಿಮಿತ್ತ ನಡೆದ ಧಾರ್ಮಿಕ ಸಭಾ ಸಭಾಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಾಹಿತಿ ಎಂ.ಕೆ. ನಿರ್ಮಲ್ ಕುಮಾರ್ ಧಾರ್ಮಿಕ ಉಪನ್ಯಾಸ ನೀಡಿ ಆಧುನಿಕ ಜೀವನ ಶೈಲಿ, ಹಿಂಸಾತ್ಮಕ ದಿನಚರಿಗೆ ಮಾರುಹೋಗಿರುವ ನಮ್ಮ ಮನಸ್ಸು ವಿಕೃತವಾಗಿದೆ. ಅಹಿಂಸಾ ತತ್ವ ಪಾಲನೆಯಿಮದ ಸಂಸಾರಿಗೂ ಅತ್ಮೋನ್ನತಿಯಿಂದ ಭಗವತ್ ಕಲ್ಯಾಣ ಸಾಧ್ಯ ಎಂದರು.
ಮೂಡಬಿದ್ರೆ ಜೈನ ಮಠದ ಜಗದ್ಗುರು ಪರಮ ಪೂಜ್ಯ ಭಾರತ ಭೂಷಣ ಸ್ವಸ್ತಿ ಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಯವರ ಪಾವನಸಾನಿಧ್ಯದಲ್ಲಿ ನಡೆದ ಸಮಾರಂಭದ ಅಧ್ಯಕ್ಷತೆಯನ್ನು ಧರ್ಮಸ್ಥಳ ರಾಜೇಂದ್ರ ಪ್ರಸಾದ್ ವಹಿಸಿದ್ದರು. ಕರ್ನಾಟಕ ಬ್ಯಾಂಕ್‌ನ ಡಿಜಿಎಂ ವಿಜಯ ಶಂಕರ ರೈ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದರು.
ಪಂಜದ ಗುತ್ತು ಶಾಂತರಾಮ ಶೆಟ್ಟಿ, ಮುಲ್ಕಿ ಸೀಮೆಯ ಅರಸರಾದ ದುಗ್ಗಣ್ಣ ಸಾವಂತರು, ಉದ್ಯಮಿ ರಘುರಾಮ ಶೆಟ್ಟಿ, ಪಾವಂಜೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರರದ ಶಶೀಂದ್ರ ಕುಮಾರ್, ಪಡುಪಣಂಬೂರು ಗ್ರಾಮ ಪಂಚಾಯತ್ ಅಧ್ಯಕ್ಷ ಮೋಹನ್ ದಾಸ್, ಪಡುಪಣಂಬೂರು ಉಮಾಮಹೇಶ್ವರ ದೇವಾಲಯದ ಅರ್ಚಕ ಎಚ್. ರಂಗನಾಥ ಭಟ್, ತೋಕೂರು ಶ್ರೀ ಸುಬ್ರಹ್ಮಣ್ಯ ದೇವಾಲಯದ ಆಡಳಿತ ಮೊಕ್ತೇಸರರಾದ ತೋಕೂರು ಗುತ್ತು ಭಾಸ್ಕರ ಶೆಟ್ಟಿ, ಚಂದ್ರ ಮೌಲೇಶ್ವರ ದೇವಾಲಯದ ಆಡಳಿತ ಮೊಕ್ತೇಸಸರಾದ ಪಾದೆಮನೆ ಜಯಂತ್ ರೈ, ಜೀರ್ಣೊದ್ಧಾರ ಸಮಿತಿಯ ಕೋಶಾಧಿಕಾರಿ ರತ್ನಾಕರ ಜೈನ್, ಜೈನ್ ಮಿನ್ ೮ರ ಕಾರ್ಯಾಧ್ಯಕ್ಷ ಪ್ರಸನ್ನ ಕುಮಾರ್, ಪುಷ್ಫರಾಜ ಜೈನ್ ಮೊದಲಾದವರು ಉಪಸ್ಥಿತರಿದ್ದರು.

Mulki-28021601

 

Comments

comments

Comments are closed.