ಮೂಲ್ಕಿ ಬಿಲ್ಲವ ಮಹಾಮಂಡಲಕ್ಕೆ ಅಂತರಾಷ್ಟ್ರೀಯ ಬಿಲ್ಲವ ಕ್ರಿಕೆಟ್ ಟ್ರೋಫಿ

ಮೂಲ್ಕಿ : ಬಿಲ್ಲವ ಕ್ರೀಡಾ ಸಮಿತಿಯ ಸಂಯೋಜನೆಯಲ್ಲಿ ಮೂಲ್ಕಿ ವಿಜಯಾ ಕಾಲೇಜು ಕ್ರೀಡಾಂಗಣದಲ್ಲಿ ಶನಿವಾರ – ಭಾನುವಾರ ನಡೆದ ಅಂತರಾಷ್ಟ್ರೀಯ ಬಿಲ್ಲವ ಕ್ರಿಕೆಟ್ ಪಂದ್ಯಾಟದಲ್ಲಿ ಮೂಲ್ಕಿ ರಾಷ್ಟ್ರೀಯ ಬಿಲ್ಲವ ಮಹಾಮಂಡಲ ತಂಡವು ಬಿಲ್ಲವ ಟ್ರೋಫಿ 2016 ಜಯಿಸಿದೆ.
ಫೈನಲ್ ಪಂದ್ಯಾಟದಲ್ಲಿ ಕುವೈಟ್ ಬಿಲ್ಲವ ಸಂಘವನ್ನು ೯ ವಿಕೆಟ್‌ಗಳಿಂದ ಸೋಲಿಸಿ ಬಿಲ್ಲವ ಟ್ರೋಪಿ ೨೦೧೬ ಸಹಿತ ನಗದು ರೂ.2 ಲಕ್ಷ ಗಳಿಸಿದೆ. ಕುವೈಟ್ ತಂಡವು ದ್ವಿತೀಯ ಟ್ರೋಫಿ ಸಹಿತ ನಗದು ರೂ.1 ಲಕ್ಷ ಪಡೆಯಿತು. ಫೈನಲ್ ಪಂದ್ಯದಲ್ಲಿ ಕುವೈಟ್ ತಂಡವು ಆರು ಓವರ್‌ಗಳಲ್ಲಿ 7 ವಿಕೆಟ್‌ಗೆ 28 ರನ್ ಗಳಿಸಿದರೆ, ಬಿಲ್ಲವ ಮಹಾಮಂಡಲವು 5.1  ಓವರ್‌ನಲ್ಲಿ 1 ವಿಕೆಟ್‌ಗೆ 33 ರನ್ ಗಳಿಸಿ ಪ್ರಶಸ್ತಿ ಗಳಿಸಿತು.
ಪಂದ್ಯಾಟದ ಉದ್ಧಕ್ಕೂ ಆಲ್‌ರೌಂಡ್ ಆಟ ಆಡಿದ ಬಿಲ್ಲವ ಮಹಾಮಂಡಲದ ಅರ್ಜುನ್ ಫೈನಲ್ ಪಂದ್ಯದ ಪಂದ್ಯಶ್ರೇಷ್ಠ, ಶ್ರೇಷ್ಠ ಬೌಲರ್ ಮತ್ತು ಸರಣಿ ಶ್ರೇಷ್ಠ ಪ್ರಶಸ್ತಿ ಗಳಿಸಿ ಕೂಟದ ಸರ್ವ ಶ್ರೇಷ್ಠ ಆಟಗಾರರಾಗಿ ಪ್ರಶಸ್ತಿ ಗಳಿಸಿದರು. ಕುವೈಟ್ ತಂಡದ ಶೈಲೇಶ್ ಬೆಸ್ಟ್ ಬೌಲರ್ ಪ್ರಶಸ್ತಿ ಪಡೆದರು. ಸೆಮಿ ಫೈನಲ್ ನಲ್ಲಿ ಕುವೈಟ್ ತಂಡವು ಬಿಲ್ಲವಾಸ್ ದುಬೈ ತಂಡವನ್ನೂ, ಮಹಾಮಂಡಲ ತಂಡವು ದೆಹಲಿ ಬಿಲ್ಲವ ಅಸೋಸಿಯೇಷನ್ ತಂಡವನ್ನೂ ಸೋಲಿಸಿ ಫೈನಲ್ ಪ್ರವೇಶಿಸಿತು.
ದೆಹಲಿ ಬಿಲ್ಲವರ ಅಸೋಸಿಯೇಷನ್ ಅಧ್ಯಕ್ಷ ಜಯರಾಮ್ ಬನಾನ್ ವಿಜೇತರಿಗೆ ಬಹುಮಾನ ವಿತರಿಸಿದರು.
ಬಿಲ್ಲವರ ಎಲ್ಲಾ ಸಂಘಟನೆಗಳನ್ನು ಒಂದೇ ಸೂರಿನಡಿ ತರುವ ಮಹತ್ತರ ಉದ್ಧೇಶದೊಂದಿಗೆ ಹಮ್ಮಿಕೊಂಡ ಪಂದ್ಯಾಟದ ಸಮಾರೋಪ ಸಮಾರಂಭದಲ್ಲಿ ಬಿಲ್ಲವರ ತ್ರಿಮೂರ್ತಿ ದಿಗ್ಗಜರಾದ ಭಾರತ್ ಬ್ಯಾಂಕ್ ಚೇಯರ್‌ಮೆನ್ ಜಯ.ಸಿ ಸುವರ್ಣ, ಮುಂಬಾಯಿ ಬಿಲ್ಲವ ಜಾಗೃತಿ ಬಳಗದ ಸ್ಥಾಪಕ ಅಧ್ಯಕ್ಷ ಸೂರು.ಸಿ ಕರ್ಕೇರ ಮತ್ತು ಅಖಿಲ ಭಾರತ ಬಿಲ್ಲವರ ಯೂನಿಯನ್ ಅಧ್ಯಕ್ಷ ನವೀನ್‌ಚಂದ್ರ ಡಿ. ಸುವರ್ಣ ರನ್ನು ಒಂದೇ ವೇದಿಕೆಯಲ್ಲಿ ಒಂದೇ ಹಾರದೊಂದಿಗೆ ವಿಶೇಷವಾಗಿ ಸನ್ಮಾನಿಸುವ ಮೂಲಕ ಸಮಾಜದ ಎಲ್ಲಾ ಸಂಘಟನೆಗಳ ಒಗ್ಗೂಡುವಿಕೆಗೆ ಬುನಾದಿ ಹಾಕಿದರು.
ಈ ದಂದರ್ಭ ಮಾತನಾಡಿದ ನವೀನಚಂದ್ರ ಸುವರ್ಣರು, ಸಂಘಟನೆಗಳು ಭಾವನಾತ್ಮಕ ಸಂಭಂದ ಬೆಸೆದುಕೊಂಡರೆ ಮಾತ್ರ ಸಮಾಜದ ಅಭ್ಯುದಯ ಸಾಧ್ಯ ಈ ನಿಟ್ಟಿನಲ್ಲಿ ಯುವ ಪೀಲೀಗೆಯನ್ನು ಮುಂದೆ ತರಲು ಅವರಿಗೆ ಶಿಕ್ಷಣ ಪೂರಕ ಸವಲತ್ತುಗಳನ್ನು ಕಲ್ಪಿಸುವಲ್ಲಿ ಸಂಘಟನೆಗಳು ಮುಂದೆ ಬರಬೇಕು ಎಂದರು.
ಸೂರು.ಸಿ.ಕರ್ಕೇರಾ ರವರು ಮಾತನಾಡಿ, ಸಮಾಜದ ಉನ್ನತಿಗಾಗಿ ಯುವ ಸಮಾಜದ ಅಭ್ಯುದಯ ಬಹಳ ಮುಖ್ಯವಾಗಿದೆ ಯುವ ಜನತೆ ಸಂಸ್ಕಾರ ಪೂರ್ಣರಾಗಿ ಅಭಿವೃದ್ಧಿ ಹೊಂದಲು ಎಲ್ಲರೂ ಸಹಕರಿಸಬೇಕು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಯ.ಸಿ.ಸುವರ್ಣರು ಮಾತನಾಡಿ, ಸೇವೆ ಜೀವನದ ಅಂಗವಾದರೆ ಮಾತ್ರ ಸಮಾಜದಲ್ಲಿ ಬೆಳೆಯಲು ಸಾಧ್ಯ ಸ್ವಾರ್ಥರಹಿತ ಸೇವೆಗೆ ಸಮಾಜ ಯಾವಕಾಲಕ್ಕೂ ಮನ್ನಣೆ ನೀಡುವುದು ಎಲ್ಲರೂ ಸೇರಿ ಸಡೆಸುವ ಕಾರ್ಯ ಅಭಿನಂದನೀಯ ಎಂದರು.
ಮುಂಬಾಯಿ ಬಿಲ್ಲವರ ಅಸೋಸಿಯೇಷನ್ ಅಧ್ಯಕ್ಷ ನಿತ್ಯಾನಂದ ಡಿ.ಕುಕ್ಯಾನ್, ದುಬೈ ಬಿಲ್ಲವಾಸ್ ಅಧ್ಯಕ್ಷ ಸತೀಶ್ ಪೂಜಾರಿ, ಬಹರೈನ್ ಗುರು ಸೇವಾ ಸಮಿತಿ ಅಧ್ಯಕ್ಷ ರಾಜ್‌ಕುಮಾರ್, ಮಸ್ಕತ್ ಬಿಲ್ಲವಾಸ್ ಅಧ್ಯಕ್ಷ ಎಸ್.ಕೆ ಪೂಜಾರಿ, ಕುವೈಟ್ ಬಿಲ್ಲವ ಸಂಘದ ರಘು ಪೂಜಾರಿ, ಮುಂಬಾಯಿ ಬಿಲ್ಲವ ಜಾಗೃತಿ ಬಳಗದ ಅಧ್ಯಕ್ಷ ಎನ್.ಟಿ ಪೂಜಾರಿ, ಗುಜರಾತ್ ಬಿಲ್ಲವ ಸಂಘದ ಅಧ್ಯಕ್ಷ ದಯಾನಂದ ಬೋಂಟ್ರ, ಬೆಂಗಳೂರು ಬಿಲ್ಲವರ ಅಸೋಸಿಯೇಷನ್ ಅಧ್ಯಕ್ಷ ಎಂ.ವೇದಕುಮಾರ್, ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಸಂತೋಷ್ ಕುಮಾರ್, ಮಂಗಳೂರು ಯುವ ವೇದಿಕೆ ಅಧ್ಯಕ್ಷ ಲೋಹಿತ್ ಕುಮಾರ್, ಉಡುಪಿ ಬಿಲ್ಲವ ಪರಿಷತ್‌ನ ದೀಪಕ್ ಎರ್ಮಾಳ್, ಅಖಿಲ ಭಾರತ ಬಿಲ್ಲವರ ಏಕೀಕರಣ ಸಮಿತಿ ಅಧ್ಯಕ್ಷ ರವಿ ಪೂಜಾರಿ ಚಿಲಿಂಬಿ, ಯುವ ಜಾಗೃತಿ ಬಳಗದ ನಿಲೇಶ್ ಪೂಜಾರಿ ಪಲಿಮಾರು, ಬಿಲ್ಲವ ಕ್ರೀಡಾ ಸಮಿತಿ ಕಾರ್ಯಾಧ್ಯಕ್ಷ ಚಂದ್ರಶೇಖರ್ ಸುವರ್ಣ, ಸಂಚಾಲಕ ಬಿಪಿನ್ ಪ್ರಸಾದ್, ಕಾರ್ಯದರ್ಶಿ ವಿಜಯಕುಮಾರ್ ಕುಬೆವೂರು, ಕೋಶಾಧಿಕಾರಿ ಹರಿಶ್ಚಂದ್ರ ಅಮೀನ್ ಮುಖ್ಯ ಅತಿಥಿಗಳಾಗಿದ್ದರು.
ಸನ್ಮಾನ: ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ ಸದಸ್ಯ ಮನೋಹರ್ ಅಮೀನ್, ಕಟಪಾಡಿ ಕ್ರಿಕೆಟ್ ಅಕಾಡೆಮಿ ಸ್ಥಾಪಕ, ವೈ. ಉದಯಕುಮಾರ್, ಅಂಡರ್22 ಕರ್ನಾಟಕ ತಂಡದ ಆಟಗಾರ್ತಿ ಕವಿತಾ ಪೂಜಾರಿ, ಅಂಡರ್-19 ರಾಜ್ಯ ಕ್ರಿಕೆಟ್ ತಂಡದ ಆಟಗಾರ್ತಿ ಚೈತ್ರ ಡಿ.ಸನಿಲ್, ಸ್ಥಳೀಯ ಪ್ರತಿಭೆ ಯು.ಎ.ಇ ತಂಡದ ಕ್ರಿಕೆಟ್ ಆಟಗಾರ ನಿತಿನ್ ಮೂಲ್ಕಿ, ವಿಜಯಾ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷೆ ಶಮೀನಾ ಜಿ. ಆಳ್ವಾ,ಪ್ರಾಂಶುಪಾಲ ಪ್ರೊ.ಕೆ.ಆರ್ ಶಂಕರ್, ಅಸ್ಲಂ ಕಾರ್ನಾಡು ರವರನ್ನು ಸನ್ಮಾನಿಸಲಾಯಿತು.
ಸಮಿತಿಯ ಅಧ್ಯಕ್ಷ ಚಲನಚಿತ್ರ ನಟ ರಾಜಶೇಖರ್ ಕೋಟ್ಯಾನ್ ಸ್ವಾಗತಿಸಿದರು. ಸಹಸಂಚಾಲಕ ನರೇಂದ್ರ ಕೆರೆಕಾಡು ಕಾರ್ಯಕ್ರಮ ನಿರ್ವಹಿಸಿದರು.

Mulki29021611 Mulki29021612

Comments

comments

Comments are closed.

Read previous post:
KInnigoli-28021603
ಕಿನ್ನಿಗೋಳಿ ಬಿಜೆಪಿ ವಿಜಯೋತ್ಸವ

ಕಿನ್ನಿಗೋಳಿ :  ಮೂಲ್ಕಿ ಮೂಡಬಿದ್ರೆ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯ ವಿಜೇತ ಬಿಜೆಪಿ ಅಭ್ಯರ್ಥಿಗಳಾದ ವಿನೋದ್ ಬೊಳ್ಳೂರು ಕಿನ್ನಿಗೋಳಿ ಜಿಲ್ಲಾ ಪಂಚಾಯಿತಿ, ದಿವಾಕರ ಕರ್ಕೇರಾ ಕಿನ್ನಿಗೋಳಿ ತಾಲೂಕು ಪಂಚಾಯಿತಿ,...

Close