ಕಿಲೆಂಜೂರು ಮಾಡರ ಮನೆ ಪದ್ಮನಾಭ ಮಾಡ

ಕಿನ್ನಿಗೋಳಿ : ಕಿಲೆಂಜೂರು ಮಾಡರ ಮನೆ ಪದ್ಮನಾಭ ಮಾಡ (79ವರ್ಷ) ಅಲ್ಪಕಾಲದ ಅಸೌಖ್ಯದಿಂದ ಫೆ.28 ಭಾನುವಾರ ನಿಧನ ಹೊಂದಿದರು. ಪ್ರಗತಿಪರ ಕೃಷಿಕರಾಗಿದ್ದ ಕಿಲೆಂಜೂರು ಸರಳ ಧೂಮಾವತಿ ದೈವಸ್ಥಾನದ ಮಾಜಿ ಅಧ್ಯಕ್ಷ, ಅತ್ತೂರು ಅರಸು ಕುಂಜಿರಾಯ ದೈವಸ್ಥಾನದ ಟ್ರಸ್ಟ್ ನ ಸದಸ್ಯ, ನಡುಗೋಡು ಹಾಲು ಉತ್ಪಾದಕರ ಸಹಕಾರಿ ಸಂಘದ ಸ್ಥಾಪಕ ಅಧ್ಯಕ್ಷ, ಪುಚ್ಚಾಡಿ ನೀರು ಬಳಕೆದಾರರ ಸಂಘ, ಅತ್ತೂರು ಮಾಗಣೆ ಕೋರ‍್ದಬ್ಬು ದೈವಸ್ಥಾನದ ಮಾಜಿ ಉಪಾಧ್ಯಕ್ಷ, ಎಕ್ಕಾರು ಮಂಡಲ ಪಂಚಾಯಿತಿ, ಮೆನ್ನಬೆಟ್ಟು ಪಂಚಾಯಿತಿ ಮಾಜಿ ಸದಸ್ಯ, ಕಿನ್ನಿಗೋಳಿ ವ್ಯವಸಾಯ ಸೇವಾ ಸಹಕಾರಿ ಸಂಘದ ಮಾಜಿ ನಿರ್ದೇಶಕ, ಕಿಲೆಂಜೂರು ಪ್ರಾಥಮಿಕ ಶಾಲೆಯ ಶಾಲಾಭಿವೃದ್ದಿ ಸಮಿತಿಯ ಮಾಜಿ ಅಧ್ಯಕ್ಷ , ಜೆಡಿಎಸ್ ಪಕ್ಷದ ಸಕ್ರೀಯ ಸದಸ್ಯರಾಗಿದ್ದುಕೊಂಡು ಹಾಗೂ ಹಲವಾರು ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದರು. ಪತ್ನಿ, ನಾಲ್ಕು ಗಂಡು ಮತ್ತು ಮೂರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

Kilenjoor-Padmanabha-Maada

Comments

comments

Comments are closed.

Read previous post:
Mulki-29021602
ಕಿಲ್ಪಾಡಿ ಗೋವಿಂದ ಭಟ್ ಪ್ರತಿಷ್ಥಾನ : ಯೋಜನೆಗಳಿಗೆ ಚಾಲನೆ

ಮುಲ್ಕಿ : ಮನುಷ್ಯ ತನ್ನ ಜೀವಿತಾವಧಿಯಲ್ಲಿ ಸಮಾಜದ ಅಭಿವೃದ್ದಿಯ ಬಗ್ಗೆ ಕಾಳಜಿ ವಹಿಸಿ ಸಮಾಜ ಮುಖಿ ಚಿಂತನೆ ನಡೆಸುವ ವ್ಯಕ್ತಿಗಳು ಸಮಾಜದಲ್ಲಿ ಅಜರಾಮರವಾಗಿ ಉಳಿಯುತ್ತಾರೆ.ಕಿಲ್ಪಾಡಿ ಗೋವಿಂದ ಭಟ್ ಪ್ರತಿಷ್ಥಾನದ...

Close