ಕಿಲ್ಪಾಡಿ ಗೋವಿಂದ ಭಟ್ ಪ್ರತಿಷ್ಥಾನ : ಯೋಜನೆಗಳಿಗೆ ಚಾಲನೆ

ಮುಲ್ಕಿ : ಮನುಷ್ಯ ತನ್ನ ಜೀವಿತಾವಧಿಯಲ್ಲಿ ಸಮಾಜದ ಅಭಿವೃದ್ದಿಯ ಬಗ್ಗೆ ಕಾಳಜಿ ವಹಿಸಿ ಸಮಾಜ ಮುಖಿ ಚಿಂತನೆ ನಡೆಸುವ ವ್ಯಕ್ತಿಗಳು ಸಮಾಜದಲ್ಲಿ ಅಜರಾಮರವಾಗಿ ಉಳಿಯುತ್ತಾರೆ.ಕಿಲ್ಪಾಡಿ ಗೋವಿಂದ ಭಟ್ ಪ್ರತಿಷ್ಥಾನದ ಮೂಲಕ ಶಿಕ್ಷಣ,ಆರೋಗ್ಯ ಸೇರಿದಂತೆ ವಿವಿಧ ಮೂಲ ಭೂತ ಸೌಕರ್ಯಕ್ಕೆ ಒತ್ತು ನೀಡಲಾಗುವುದೆಂದು ಅಂತರಾಷ್ತ್ರೀಯ ಖ್ಯಾತಿಯ ವಾಸ್ತು ತಜ್ಞ,ಆಧ್ಯಾತ್ಮಿಕ ಗುರು,ವೈಜ್ಞಾನಿಕ ಜ್ಯೋತಿಷಿ ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ ಹೇಳಿದರು.
ಮುಲ್ಕಿಯ ಗೇರುಕಟ್ಟೆಯ ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ ಆಶ್ರಮದಲ್ಲಿ ಜರಗಿದ ಕಿಲ್ಪಾಡಿ ಗೋವಿಂದ ಭಟ್ ರವರ ಪ್ರಥಮಾಭ್ದಿಕ ಶ್ರಾಧ್ದ ಸಂದರ್ಭದಲ್ಲಿ ಗೋವಿಂದ ಭಟ್ ಪ್ರತಿಷ್ಥಾನದ ವತಿಯಿಂದ ವಿವಿಧ ಮೂಲಭೂತ ಸೌಕರ್ಯ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿದರು. ಕಾರ್ಯಕ್ರಮದಲ್ಲಿ ರಾಜ್ಯ ಅನಿವಾಸಿ ಭಾರತೀಯ ಸಂಸ್ಥೆಯ ಉಪಾಧ್ಯಕ್ಷ ಆರ್ ರವಿಪ್ರಕಾಶ್ ಹಾಗೂ ಚಲನಚಿತ್ರ ನಿರ್ದೇಶಕ ರಾಕ್ ಲೈನ್ ವೆಂಕಟೇಶ್ ರನ್ನು ಸನ್ಮಾನಿಸಿದರು. ಪ್ರತಿಷ್ಥಾನದ ವತಿಯಿಂದ ಕಿರಣ್ ಪಡುಬೆಳ್ಳೆ ಯವರ ಚಿಕಿತ್ಸೆಗೆ ರೂ 2 ಲಕ್ಷ ಚೆಕ್ ನೀಡಲಾಯಿತು.ಆಶ್ರಮದ ಸಂಚಾಲಕಿ ರಜನಿ ಸಿ ಭಟ್,ಸಾರಿಗೆ ಅಧಿಕಾರಿ ಕೃಷ್ಣಾನಂದ ಮತ್ತಿತರರು ಉಪಸ್ಥಿತರಿದ್ದರು.

Mulki-29021602

Comments

comments

Comments are closed.

Read previous post:
Mulki-29021601
ರಾಕ್ ಲೈನ್ ವೆಂಕಟೇಶ್ ಸನ್ಮಾನ

ಮುಲ್ಕಿ: ಮುಲ್ಕಿಯ ಗೇರುಕಟ್ಟೆಯ ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ ಆಶ್ರಮದಲ್ಲಿ ಜರಗಿದ ಜ್ಯೋತಿಷಿ ದಿ. ಕಿಲ್ಪಾಡಿ ಗೋವಿಂದ ಭಟ್ ಪ್ರಥಮ ಶ್ರಾಧ್ದ ಸಮಾರಂಭದಲ್ಲಿ ಖ್ಯಾತ ಚಲನಚಿತ್ರ ನಿರ್ಮಾಪಕ,ನಟ...

Close