ಉನ್ನತ ವಿದ್ಯಾಭ್ಯಾಸಕ್ಕೆ ಅವಕಾಶ

ಮುಲ್ಕಿ: ಹಳೆಯಂಗಡಿಯಲ್ಲಿ ಸ್ನಾತಕೋತ್ತರ ಕಾಲೇಜು ನಿರ್ಮಾಣಕ್ಕೆ ಶೀಘ್ರ ರೂಪುರೇಖೆ ತಯಾರಿಸಿ ಉನ್ನತ ವಿದ್ಯಾಭ್ಯಾಸಕ್ಕೆ ಅವಕಾಶ ಕಲ್ಪಿಸುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ರಾಜ್ಯ ಯುವಜನ ಸೇವೆ, ಮೀನುಗಾರಿಕೆ ಮತ್ತು ಕ್ರೀಡಾ ಸಚಿವ ಅಭಯ ಚಂದ್ರ ಜೈನ್ ಹೇಳಿದರು.
ಶನಿವಾರ ಹಳೆಯಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಬಳಿಕ ಕಾಲೇಜು ಆವರಣದಲ್ಲಿ ಯುಜಿಸಿ ನಿಧಿಯ ಸುಮಾರು 23.5 ಲಕ್ಷ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಕಾಲೇಜು ಕ್ಯಾಂಟೀನ್ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗುವಂತೆ ರಾಜ್ಯ ಸರಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ವಿದ್ಯಾರ್ಥಿಗಳು ಅಧ್ಯಾಪಕರ ಮಾರ್ಗದರ್ಶನ ಪಡೆದುಕೊಂಡು ಯೋಜನೆಗಳ ಸಂಪೂರ್ಣ ಲಾಭ ಪಡೆದುಕೊಳ್ಳಬೇಕೆಂದರು.
ಮಂಗಳೂರು ವೆಸ್ಟರ್ನ್ ಇನ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಪ್ರಾಂಶುಪಾಲೆ ಪ್ರೊ. ಫ್ಲೋರೆನ್ಸ್ ಮೆಂಡಿಸ್, ಕಾಪೊರೇಶನ್ ಬ್ಯಾಂಕ್ ಮಂಗಳೂರು ಪ್ರಧಾನ ಕಚೇರಿ ಎ.ಜಿ.ಎಂ. ಡುಂಡಿರಾಜ್, ಹಳೆಯಂಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಲಜ, ಉಪಾಧ್ಯಕ್ಷೆ ಪಧ್ಮಾವತಿ ಶೆಟ್ಟಿ, ಕಾಲೇಜು ಕಾರ್ಯಾಧ್ಯಕ್ಷ ವಸಂತ್ ಬೆರ್ನಾರ್ಡ್, ಹಳೆಯಂಗಡಿ ಗ್ರಾಮ ಕಾಲೇಜು ಕಾರ್ಯಕಾರಿ ಸಮಿತಿ ಸದಸ್ಯ ಅಬ್ದುಲ್ ಖಾದರ್, ಪ್ರಾಂಶುಪಾಲ ಪ್ರೊ. ಎಂ. ವಿಶ್ವನಾಥ ಭಟ್, ವಿಧ್ಯಾರ್ಥಿ ಸಂಘ ಅಕ್ಷಯ್, ಶ್ರೀಕಾಂತ್, ಅಫ್ಸಾನಾ ಮತ್ತಿತರರು ಉಪಸ್ಥಿತರಿದ್ದರು.

Mulki-03031601 Mulki-03031602

Comments

comments

Comments are closed.

Read previous post:
Kinnigoli-01031605
ಪುನರೂರು ಹಗಲು ರಥೋತ್ಸವ

ಕಿನ್ನಿಗೋಳಿ : ಕಿನ್ನಿಗೋಳಿ ಸಮೀಪದ ಪುನರೂರು ಶ್ರೀ ವಿಶ್ವನಾಥ ದೇವಳದ ವರ್ಷಾವಧಿ ಜಾತ್ರೆಯ ಅಂಗವಾಗಿ ಮಂಗಳವಾರ ಹಗಲು ರಥೋತ್ಸವ ನಡೆಯಿತು.

Close