ಮೂಲ್ಕಿ: ಪ್ರತಿಭಟನಾ ಸಭೆ

ಮೂಲ್ಕಿ: ದೇಶದ ಬಗ್ಗೆ ಅಭಿಮಾನ ಹೊಂದಿರುವ ನಮ್ಮ ತಾಯಂದಿರು ತಮ್ಮ ಮಕ್ಕಳನ್ನು ದೇಶ ಸೇವೆಗಾಗಿ ಸೈನ್ಯಕ್ಕೆ ಸೇರಿಸುತ್ತಿದ್ದು ಅಂತವರ ಬಗ್ಗೆ ಅವಮಾನಕರ ಹೇಳಿಕೆ ನೀಡಿರುವ ಮುಖ್ಯ ಮಂತ್ರಿಯವರ ಆಪ್ತ ದಿನೇಶ್ ಅಮೀನ್ ಮಟ್ಟು ಅವರು ದೇಶಕ್ಕಾಗಿ ತಮ್ಮ ಮಕ್ಕಳನ್ನು ಕಳುಹಿಸಿರುವ ತಾಯಂದಿರ ಕ್ಷಮೆ ಕೇಳಬೇಕೆಂದು ನ್ಯಾಯವಾದಿ ಎಂ ಕೆ ಸುವೃತ್ ಕುಮಾರ್ ಹೇಳಿದರು.
ದೇಶದಲ್ಲಿ ಸೈನ್ಯಕ್ಕೆ ಸೇರುವವರು ಬಡವರು ಎಂಬ ಕೀಳಾಭಿರುಚಿರುವ ಹೇಳಿಕೆಯನ್ನು ನೀಡಿರುವಂತಹ ಮುಖ್ಯ ಮಂತ್ರಿಯವರ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ಅವರ ಹೇಳಿಕೆ ಬಗ್ಗೆ ಭಾರತೀಯ ಜನತಾ ಪಾರ್ಟಿ ಮೂಲ್ಕಿ ಶಕ್ತಿ ಕೇಂದ್ರದ ವತಿಯಿಂದ ಮೂಲ್ಕಿ ಬಸ್ಸು ನಿಲ್ದಾಣದ ಬಳಿ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಕೆಲವು ತಾಯಂದಿರಿಗೆ ಆರ್ಥಿಕ ಬಡತನವಿರಬಹುದು ಆದರೆ ಅವರ ಮಕ್ಕಳಲ್ಲಿ ಶೌರ್ಯ, ಶಕ್ತಿಗೆ ಬಡತನವಿಲ್ಲ, ತಮ್ಮ ಜೀವದ ಹಂಗನ್ನು ತೊರೆದು ವೀರಾವೇಶದಿಂದ ದೇಶಕ್ಕೆ ಹೋರಾಡುವ ಸೈನಿಕರ ಸ್ತೈರ್ಯವನ್ನು ಕುಂದಿಸುವಂತಹ ಹೇಳಿಕೆಯನ್ನು ನೀಡುವ ಮೂಲಕ ಸೈನಿಕರಿಗೆ ಅವಮಾನ ಮಾಡಿರುವ ದಿನೇಶ್ ಅಮೀನ್ ಮಟ್ಟುರವರಿಂದ ದೇಶಕ್ಕೆ ಹಾಗೂ ಅವರು ಹುಟ್ಟಿರುವ ಮೂಲ್ಕಿಗೆ ಅವಮಾನವಾಗಿದೆ.ದೇಶದ ಸೇನೆಯಲ್ಲಿರುವ ಸೈನಿಕರು ಅಮರರಾದಾಗ ಅವರ ಪತ್ನಿಯರು ತಮ್ಮ ಮಕ್ಕಳನ್ನು ದೇಶ ಸೇವೆಗೆ ಕಳುಹಿಸಲು ಸಿದ್ದರಾಗಿರುವಂತಹ ನಮ್ಮ ನಾಡಿನಲ್ಲಿ ಸೈನಿಕರ ಬಗ್ಗೆ ಈ ರೀತಿಯ ಹೇಳಿಕೆ ನೀಡುವುದು ನಾಚಿಕೆಗೇಡು. ಇಂತವರಿಂದಾಗಿ ರಾಜ್ಯದಲ್ಲಿ ಅಶಾಂತಿ ತಲೆದೋರಿದ್ದು ಕೂಡಲೇ ನಾಗರಿಕರು ಹೆಚ್ಚೆತ್ತು ತಕ್ಕ ಶಾಸ್ತಿ ಮಾಡಬೇಕೆಂದು ಹೇಳಿದರು.
ಬಿಜೆಪಿ ನಾಯಕರುಗಳಾದ ಜಿಲ್ಲಾ ಉಪಾಧ್ಯಕ್ಷ ಕೆ ಪಿ ಜಗದೀಶ ಅಧಿಕಾರಿ, ಜಿಲ್ಲಾ ಪಂಚಾಯತ್ ಸದಸ್ಯೆ ಕಸ್ತೂರಿ ಪಂಜ,ತಾಲೂಕು ಪಂಚಾಯತ್ ಸದಸ್ಯ ಶರತ್ ಕುಬೆವೂರು, ಮೂಲ್ಕಿ ನಗರ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಬಂಗೇರ, ಉಪಾಧ್ಯಕ್ಷೆ ವಸಂತಿ ಭಂಡಾರಿ, ಸ್ಥಾಯಿ ಸಮಿತಿ ಅಧ್ಯಕ್ಷ ಸುನೀಲ್ ಆಳ್ವ, ಬಿಜೆಪಿಯ ಮೂಡಬಿದ್ರಿ ಕ್ಷೇತ್ರಾಧ್ಯಕ್ಷ ಕೆ ಪಿ ಸುಚರಿತ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ದೇವಪ್ರಸಾದ್ ಪುನರೂರು, ನಾಗರಾಜ್ ಪೂಜಾರಿ, ಕೆ. ಭುವನಾಭಿರಾಮ ಉಡುಪ, ಈಶ್ವರ್ ಕಟೀಲು ಮತ್ತಿತರ ನಾಯಕರು ಉಪಸ್ಠಿತರಿದ್ದರು.

Mulki-03031603

Comments

comments

Comments are closed.

Read previous post:
Mulki-03031602
ಉನ್ನತ ವಿದ್ಯಾಭ್ಯಾಸಕ್ಕೆ ಅವಕಾಶ

ಮುಲ್ಕಿ: ಹಳೆಯಂಗಡಿಯಲ್ಲಿ ಸ್ನಾತಕೋತ್ತರ ಕಾಲೇಜು ನಿರ್ಮಾಣಕ್ಕೆ ಶೀಘ್ರ ರೂಪುರೇಖೆ ತಯಾರಿಸಿ ಉನ್ನತ ವಿದ್ಯಾಭ್ಯಾಸಕ್ಕೆ ಅವಕಾಶ ಕಲ್ಪಿಸುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ರಾಜ್ಯ ಯುವಜನ ಸೇವೆ, ಮೀನುಗಾರಿಕೆ...

Close