ಉದ್ಯಮಶೀಲತಾ ಪ್ರೇರಣಾ ಶಿಭಿರ

ಮೂಲ್ಕಿ: ಪ್ರತಿಭಾನ್ವಿತ ವಿದ್ಯಾರ್ಥಿಗಳು ಉದ್ಯಮಶೀಲತೆಯನ್ನು ಮೈಗೋಡಿಸಿಕೊಂಡಲ್ಲಿ ಸ್ವಾವಲಂಭಿ ಭಾರತ ಕನಸು ನನಸಾಗುವ ಜೊತೆಗೆ ಆರ್ಥಿಕ ಅಭಿವೃದ್ಧಿ ಸಾಧ್ಯ ಎಂದು ನಿಟ್ಟೆ ಮಹಾಲಿಂಗ ಅಡ್ಯಂತಾಯ ತಾಂತ್ರಿಕ ಮಹಾ ವಿದ್ಯಾಲಯದ ಪ್ರಾಂಶುಪಾಲ ಡಾ.ನಿರಂಜನ್ ಎನ್ ಚಿಪ್ಲೂಂಕರ್ ಹೇಳಿದರು.
ಮೂಲ್ಕಿ ವಿಜಯಾ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ನಿಟ್ಟೆ ಮಹಾಲಿಂಗ ಅಡ್ಯಂತಾಯ ತಾಂತ್ರಿಕ ಮಹಾ ವಿದ್ಯಾಲಯದ ಇಡಿಸಿ ವಿಭಾಗದ ವತಿಯಿಂದ ಬುಧವಾರ ಆರಂಭಗೊಂಡ ಎರಡು ದಿನಗಳ ಉದ್ಯಮಶೀಲತಾ ಪ್ರೇರಣಾ ಶಿಭಿರ ಉದ್ಘಾಟಿಸಿ ಮಾತನಾಡಿದರು.
ಪ್ರತಿಭಾವಂತ ಯುವ ಸಂಪನ್ಮೂಲ ಹೊಂದಿರುವ ನಮ್ಮ ದೇಶದ ಪ್ರತಿಭೆಗಳಿಗೆ ವಿಶ್ವದ ಅಭಿವೃದ್ಧಿ ರಾಷ್ಟ್ರಗಳಲ್ಲಿ ಬ್ರಹತ್ ಅವಕಾಶಗಳಿರುವ ಕಾರಣ ಪ್ರತಿಭಾ ಪಲಾಯನ ಸಾಮಾನ್ಯವಾಗಿದೆ. ದೇಶದ ಅಭಿವೃದ್ಧಿ ದೃಷ್ಟಿಯಲ್ಲಿ ಯುವ ಸಮಾಜ ಉದ್ಯಮ ಶೀಲರಾಗಿ ಬೆಳೆದರೆ ಪ್ರದೇಶದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ ಲಭಿಸುವ ಜೊತೆಗೆ ಆರ್ಥಿಕ ಅಭಿವೃದ್ಧಿ ಹಾಗೂ ಸ್ವಾವಲಂಭನೆ ಸಾಧ್ಯ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜು ಪ್ರಾಂಶುಪಾಲ ಪ್ರೊ.ಕೆ.ಆರ್ ಶಂಕರ್ ವಹಿಸಿದ್ದರು.
ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷೆ ಶಮಿನಾ ಜಿ.ಆಳ್ವಾ, ನಿಟ್ಟೆ ಇಡಿಸಿ ಛೀಪ್ ಪ್ರೋಜೆಕ್ಟ್ ಲೀಡರ್ ಡಾ.ಉದಯ ಕುಮಾರ್ ಜಿ, ಪದವಿಪೂರ್ವ ಕಾಲೇಜು ಪ್ರಾಂಶುಪಾಲೆ ಪಮೀದಾ ಬೇಗಂ, ಕಾರ್ಯಕ್ರಮ ಸಂಯೋಜಕ ಪ್ರೊ.ಹೆ.ಚ್.ಜಿ.ನಾಗರಾಜ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.
ಡಾ.ಉದಯ ಕುಮಾರ್.ಜಿ. ಸ್ವಾಗತಿಸಿದರು. ಪ್ರೊ.ಹೆ.ಚ್.ಜಿ.ನಾಗರಾಜ ನಾಯಕ್ ವಂದಿಸಿದರು.

Mulki-03031604

Comments

comments

Comments are closed.

Read previous post:
Mulki-03031603
ಮೂಲ್ಕಿ: ಪ್ರತಿಭಟನಾ ಸಭೆ

ಮೂಲ್ಕಿ: ದೇಶದ ಬಗ್ಗೆ ಅಭಿಮಾನ ಹೊಂದಿರುವ ನಮ್ಮ ತಾಯಂದಿರು ತಮ್ಮ ಮಕ್ಕಳನ್ನು ದೇಶ ಸೇವೆಗಾಗಿ ಸೈನ್ಯಕ್ಕೆ ಸೇರಿಸುತ್ತಿದ್ದು ಅಂತವರ ಬಗ್ಗೆ ಅವಮಾನಕರ ಹೇಳಿಕೆ ನೀಡಿರುವ ಮುಖ್ಯ ಮಂತ್ರಿಯವರ...

Close