ಯೋಗ ಮತ್ತು ಮೌಲ್ಯ ಚಿಂತನೆ ಕೃತಿ ಬಿಡುಗಡೆ

ಮೂಲ್ಕಿ: ಶಾಂತಿಯುತ ಜೀವನ ನಿರ್ವಹಣೆ ಹಾಗೂ ಆರೋಗ್ಯ ಪೂರ್ಣ ಬದುಕಿಗಾಗಿ ನಿಯಮಿತ ಯೋಗ ಸಾಧನೆ ಹಾಗೂ ಮೌಲ್ಯ ಚಿಂತನೆ ಬಹಳ ಅಗತ್ಯವಾಗಿದೆ. ಒತ್ತಡದ ಜೀವನ ಕ್ರಮದಲ್ಲಿ ರೋಗ ರುಜಿನಗಳ ಭಾಧೆಯಿಂದ ಸಮಸ್ಯೆಗೆ ಈಡಾಗುತ್ತಿರುವ ಈ ದಿನಗಳಲ್ಲಿ ಎನ್.ಪಿ.ಶೆಟ್ಟಿಯವರ ಕೃತಿ ಜನ ಸಾಮಾನ್ಯರಿಗೆ ಉಪಯೋಗಿಯಾಗಿ ಮೂಡಿ ಬರಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಹೇಳಿದರು.
ಮೂಲ್ಕಿ ವಿಜಯಾ ಕಾಲೇಜಿನ ಸಾಹಿತ್ಯ ಸಂಘದ ಆಶ್ರಯದಲ್ಲಿ ನಡೆದ ಯೋಗ ಮತ್ತು ಮೌಲ್ಯ ಚಿಂತನೆ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.
ಯೋಗ ಪ್ರಾಣಾಯಾಮಗಳು ದೇಹದಲ್ಲಿ ಪ್ರಾಣ ಶಕ್ತಿಯನ್ನು ಉದ್ದೀಪನಗೊಳಿಸುವ ಮೂಲಕ ಮಕ್ಕಳ ಬುದ್ದಿಮತ್ತೆಯ ಬೆಳವಣಿಗೆಗೆ ಬಹು ಸಹಕಾರಿ ಮಕ್ಕಳು ಉತ್ತಮ ಮೌಲ್ಯ ಚಿಂತನೆಯಿಂದ ಸಂಸ್ಕಾರವಂತರಾಗಿ ಹಾಗೂ ಪ್ರತಿಭಾನ್ವಿತರಾಗಿ ಬೆಳೆಯಲು ಸಾಧ್ಯವಿದ್ದು ವಿದ್ಯಾರ್ಥಿಗಳು ಬಿಡುವಿನ ಸಮಯದಲ್ಲಿ ಇಂತಹ ಉತ್ತಮ ಗ್ರಂಥಗಳನ್ನು ಅಧ್ಯಯನ ನಡೆಸಿದರೆ ಭವಿಷ್ಯದ ಅಭಿವೃದ್ಧಿಗೆ ಪೂರಕವಾಗಲಿದೆ ಎಂದರು.
ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸಕ ಸುರೇಶ್ ಮರಿಣಾಪುರ ರವರು ಕೃತಿ ಪರಿಚಯ ನಡೆಸಿದರು.
ಮುಂಬೈ ಕವಿ ಶಿಮಂತೂರು ಚಂದ್ರಹಾಸ ಸುವರ್ಣ, ಅಂತರಾಷ್ಟ್ರೀಯ ಕಬ್ಬಡ್ಡಿ ಪಟು ಜಯ.ಎ.ಶೆಟ್ಟಿ, ಮೂಲ್ಕಿ ರೋಟರಿ ಅಧ್ಯಕ್ಷ ರವಿಚಂದ್ರ, ಪದವಿ ಪೂರ್ವಕಾಲೇಜು ಪ್ರಾಂಶುಪಾಲೆ ಪಮೀದಾ ಬೇಗಂ, ಕಾಲೇಜು ವಾಣಿಜ್ಯ ಶಾಸ್ತ್ರ ವಿಭಾಗ ಮುಖ್ಯಸ್ಥ ಪ್ರೊ.ಹೆಚ್.ಜಿ.ನಾಗರಾಜ ನಾಯಕ್, ಕನ್ನಡ ವಿಭಾಗ ಮುಖ್ಯಸ್ಥೆ ಡಾ.ಶೈಲಜಾ ಉಪಸ್ಥಿತರಿದ್ದರು.
ವಿಜಯಾ ಕಾಲೇಜು ಪ್ರಾಂಶುಪಾಲ ಪ್ರೊ.ಕೆ.ಆರ್ ಶಂಕರ್ ಅಧ್ಯಕ್ಷತೆ ವಹಿಸಿದ್ದರು.
ಸಾಹಿತ್ಯ ಸಂಘದ ಸದಸ್ಯೆ ಕಿಶೋರಿ ಸ್ವಾಗತಿಸಿದರು. ಉಪನ್ಯಾಸಕಿ ದಮಯಂತಿ ಪೇರಾಜೆ ಲೇಖಕಕರನ್ನು ಪರಿಚಯಿಸಿದರು. ವಂದನಾ ಶೆಣೈ ನಿರೂಪಿಸಿದರು. ವಿಜಯ ಲಕ್ಷ್ಮಿ ವಂದಿಸಿದರು.

Mulki-03031605

Comments

comments

Comments are closed.

Read previous post:
Mulki-03031604
ಉದ್ಯಮಶೀಲತಾ ಪ್ರೇರಣಾ ಶಿಭಿರ

ಮೂಲ್ಕಿ: ಪ್ರತಿಭಾನ್ವಿತ ವಿದ್ಯಾರ್ಥಿಗಳು ಉದ್ಯಮಶೀಲತೆಯನ್ನು ಮೈಗೋಡಿಸಿಕೊಂಡಲ್ಲಿ ಸ್ವಾವಲಂಭಿ ಭಾರತ ಕನಸು ನನಸಾಗುವ ಜೊತೆಗೆ ಆರ್ಥಿಕ ಅಭಿವೃದ್ಧಿ ಸಾಧ್ಯ ಎಂದು ನಿಟ್ಟೆ ಮಹಾಲಿಂಗ ಅಡ್ಯಂತಾಯ ತಾಂತ್ರಿಕ ಮಹಾ ವಿದ್ಯಾಲಯದ...

Close