ಎಪ್ರಿಲ್ 27 ಕಟೀಲು ಉಚಿತ ಸಾಮೂಹಿಕ ವಿವಾಹ

Kinnigoli-0703201607

ಕಿನ್ನಿಗೋಳಿ: ಕಟೀಲು ದಿ. ಗೋಪಾಲಕೃಷ್ಣ ಆಸ್ರಣ್ಣ ಟ್ರಸ್ಟ್ ಹಾಗೂ ಕಟೀಲು ಶ್ರೀ ಲಕ್ಷ್ಮೀನಾರಾಯಣ ಆಸ್ರಣ್ಣ ಅಭಿನಂದನಾ ಸಮಿತಿಯ ಆಶ್ರಯದಲ್ಲಿ ಉಚಿತ ಸಾಮೂಹಿಕ ವಿವಾಹ ಎಪ್ರಿಲ್ 27 ರಂದು ಕಟೀಲಿನ ಗೋಪಾಲಕೃಷ್ಣ ಆಸ್ರಣ್ಣ ಸಭಾ ಭವನದಲ್ಲಿ ನಡೆಯಲಿದೆ. ಮದುಮಗನಿಗೆ ಧೋತಿ, ಶಾಲು ಹಾಗೂ ಮಧುಮಗಳಿಗೆ ಸೀರೆ, ರವಕೆ ಕಣ, ಕರಿಮಣಮತ್ತು ಚಿನ್ನದ ತಾಳಿ ನೀಡಲಾಗುವುದು ಎಂದು ದಿ. ಗೋಪಾಲಕೃಷ್ಣ ಆಸ್ರಣ್ಣ ಟ್ರಸ್ಟ್‌ನ ಅಧ್ಯಕ್ಷ ಲಕ್ಷ್ಮೀನಾರಾಯಣ ಆಸ್ರಣ್ಣ ತಿಳಿಸಿದ್ದಾರೆ. ವಧು ವರರ ವಿವರ ಹಾಗೂ ದಾಖಲೆಗಳನ್ನು ನೋಟರಿ ಮೂಲಕ ದೃಡೀಕರಿಸಿ ಎಪ್ರಿಲ್ 15 ರೊಳಗೆ ತಲುಪಿಸಬೇಕು. ಆಸಕ್ತರು ಲಕ್ಷ್ಮೀನಾರಾಯಣ ಆಸ್ರಣ್ಣ (ಶ್ರೀ ಕ್ಷೇತ್ರ ಕಟೀಲು), ಹರಿಕೃಷ್ಣ ಪುನರೂರು, ಕೊಡೆತ್ತೂರು ಭುವನಾಭಿರಾಮ ಉಡುಪ ಯುಗಪುರುಷ ಕಿನ್ನಿಗೋಳಿ, ಪಿ.ಸತೀಶ್ ರಾವ್ ಸ್ವಾತಿ ಸ್ವೀಟ್ಸ್ ಕಿನ್ನಿಗೋಳಿ, ಪ್ರದೀಪ್‌ಕುಮಾರ್ ಕಲ್ಕೂರ ಅವರನ್ನು ಸಂಪರ್ಕಿಸಬಹುದು.

Comments

comments

Comments are closed.

Read previous post:
Kinnigoli-0703201606
ಕುಜಿಂಗಿರಿ: ಬಂಗಾರದ ಖಡ್ಸಲೆ ಸಮರ್ಪಣೆ

ಕಿನ್ನಿಗೋಳಿ : ಪುನರೂರು ಶ್ರೀ ವಿಶ್ವನಾಥ ದೇವಳಕ್ಕೆ ಸಂಬಂಧಪಟ್ಟ ಕಿನ್ನಿಗೋಳಿ ಸಮೀಪದ ತಾಳಿಪಾಡಿ ಕುಜಿಂಗಿರಿ ಶ್ರೀ ರಕ್ತೇಶ್ವರೀ ದೈವಸ್ಥಾನಕ್ಕೆ ಬಂಗಾರದ ಖಡ್ಸಲೆ ದೇವಳದಿಂದ ದೈವಸ್ಥಾನದವರೆಗೆ ಶುಕ್ರವಾರ ಮೆರವಣಿಗೆ ಮೂಲಕ...

Close