ಸಾಧಕರ ಹಾಗೂ ನಿವೃತ್ತ ಅಧಿಕಾರಿಗಳ ಸನ್ಮಾನ

ಕಿನ್ನಿಗೋಳಿ: ಸರಕಾರಿ ಇಲಾಖಾ ಮೂಲಕ ಸಾರ್ವಜನಿಕರಿಗೆ ಮಾನವೀಯತೆಯಿಂದ ಸಮಾಜಮುಖಿ ಕೆಲಸ ಕಾರ್ಯಗಳಿಗೆ ತ್ವರಿತ ಸ್ಪಂದನೆ ನೀಡಬೇಕು. ಎಂದು ಕಟೀಲು ದೇವಳ ಅರ್ಚಕ ಕೆ. ಲಕ್ಷ್ಮೀ ನಾರಾಯಣ ಆಸ್ರಣ್ಣ ಹೇಳಿದರು.
ಕಿನ್ನಿಗೋಳಿ ಹೊಟೇಲ್ ಅಭಿನಂದನ್ ಸಭಾ ಭವನದಲ್ಲಿ ಸಾರ್ವಜನಿಕ ಅಭಿನಂದನಾ ಸಮಿತಿ ಕಿನ್ನಿಗೋಳಿ ವತಿಯಿಂದ ಬುಧವಾರ ನಡೆದ ಸಾಧಕರ ಹಾಗೂ ನಿವೃತ್ತ ಅದಿಕಾರಿಗಳ ಸನ್ಮಾನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.
ಕಿನ್ನಿಗೋಳಿ ನಿವೃತ್ತ ಉಪವಲಯ ಅರಣ್ಯಾಧಿಕಾರಿ ಪರಮೇಶ್ವರ್, ಮುಲ್ಕಿ ಪೊಲೀಸ್ ಠಾಣಾ ಸಹಾಯಕ ಉಪ ನಿರೀಕ್ಷಕ ವಾಮನ್ ಸಾಲ್ಯಾನ್, ಮಂಗಳೂರು ವಲಯ ಅರಣ್ಯಾಧಿಕಾರಿ ಪಿ. ಶ್ರೀಧರ್, ಗೃಹರಕ್ಷಕ ದಳದ ಮನ್ಸೂರ್ ಅವರನ್ನು ಸನ್ಮಾನಿಸಲಾಯಿತು. ಯುಗಪುರುಷದ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ ಅಧ್ಯಕ್ಷತೆ ವಹಿಸಿದ್ದರು. ಕಿನ್ನಿಗೋಳಿ ಚರ್ಚ್ ಧರ್ಮಗುರು ಫಾ. ವಿನ್ಸಂಟ್ ಮೊಂತೆರೋ, ಗುತ್ತಕಾಡು ಶಾಂತಿನಗರದ ಮಾಜಿ ಖತೀಬ ಜನಾಬ್ ಅಹ್ಮದ್ ಮದನಿ , ಮುಲ್ಕಿ ಠಾಣಾ ವೃತ್ತ ನಿರೀಕ್ಷಕ ರಾಮಚಂದ್ರ ನಾಯಕ್, ಸುರತ್ಕಲ್ ಟ್ರಾಫಿಕ್ ನಿರೀಕ್ಷಕ ಮಂಜುನಾಥ, ಮೂಡಬಿದಿರೆ ವಲಯ ಅರಣ್ಯಾಧಿಕಾರಿ ಡಿ. ಜಿ. ದಿನೇಶ್ ಉಪಸ್ಥಿತರಿದ್ದರು.
ದುರ್ಗಾಪ್ರಸಾದ್ ಹೆಗ್ಡೆ ಸ್ವಾಗತಿಸಿದರು. ಸ್ವರಾಜ್ ಶೆಟ್ಟಿ, ಶರತ್ ಶೆಟ್ಟಿ, ರಘುನಾಥ ಕೆಂಚನಕೆರೆ ಸನ್ಮಾನ ಪತ್ರ ವಾಚಿಸಿದರು.. ನಿವೃತ್ತ ಅರಣ್ಯಾಧಿಕಾರಿ ಯೋಗೇಶ್ವರ್ ವಂದಿಸಿದರು. ಶಿಕ್ಷಕ ಸಾಯಿನಾಥ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Kinnigoli-0703201603

Comments

comments

Comments are closed.

Read previous post:
Kinnigoli-0703201602
ಮೆನ್ನಬೆಟ್ಟು ಗ್ಯಾಸ್ ಕಿಟ್ ವಿತರಣೆ

ಕಿನ್ನಿಗೋಳಿ: ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ 48 ಮಂದಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅರ್ಹ ಫಲಾನುಭವಿಗಳಿಗೆ ಶೇಯೋಭಿವೃದ್ಧಿ ನಿಧಿಯಿಂದ ಬುಧವಾರ ಮೆನ್ನಬೆಟ್ಟು ಗ್ರ್ರಾಮ ಪಂಚಾಯಿತಿ ಸಭಾ...

Close