ವಿಶ್ವಬ್ರಾಹ್ಮಣ 2016-18ನೇ ಸಾಲಿನ ಪದಗ್ರಹಣ

ಕಿನ್ನಿಗೋಳಿ: ಕಿನ್ನಿಗೋಳಿ ರಾಜರತ್ನಪುರ ಸರಾಫ್ ಅಣ್ಣಯ್ಯಾಚಾರ್ಯ ಸಭಾ ಭವನದಲ್ಲಿ ಕಿನ್ನಿಗೋಳಿ ವಿಶ್ವ ಬ್ರಾಹ್ಮಣ ಸಮಾಜ ಸೇವಾ ಸಂಘದ 2016-18ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಡೆಯಿತು. ಪಡುಬಿದ್ರಿ ಶ್ರೀ ದುರ್ಗಾದೇವಿ ಭಜನಾ ಮಂಡಳಿ ಅಧ್ಯಕ್ಷ ಹರೀಶ್ ಆಚಾರ್ಯ ನೂತನ ಅಧ್ಯಕ್ಷ ಶಿವಪ್ರಸಾದ್ ಆಚಾರ್ಯ ಹಾಗೂ ತಂಡಕ್ಕೆ ಪದಗ್ರಹಣ ನಡೆಸಿಕೊಟ್ಟರು. ನಿರ್ಗಮನ ಅಧ್ಯಕ್ಷ ದಿನೇಶ್ ಆಚಾರ್ಯ, ಕಟ್ಟಡ ಸಮಿತಿಯ ಅಧ್ಯಕ್ಷ ಪ್ರಥ್ವಿರಾಜ ಆಚಾರ್ಯ, ಸಲಹೆಗಾರರಾದ ಕೆ. ಎಸ್. ಉಮೇಶ್ ಆಚಾರ್ಯ, ಉದಯ ಆಚಾರ್ಯ , ಉಪಾಧ್ಯಕ್ಷ ಕೆ. ಶಿವರಾಮ ಆಚಾರ್ಯ ಕಮ್ಮಜೆ, ಕಾರ್ಯದರ್ಶಿ ಕೆ. ಬಿ. ಸುರೇಶ್ ಮೂರುಕಾವೇರಿ, ಯೋಗೀಶ ಆಚಾರ್ಯ ಮಿತ್ತಬೈಲು, ಶಿವಾನಂದ ಆಚಾರ್ಯ ಬಲವಿನ ಗುಡ್ಡೆ , ಹರಿಪ್ರಸಾದ್ ಆಚಾರ್ಯ ರಾಜರತ್ನಪುರ, ರಂಜನ್ ಕುಮಾರ್ ತಾಳಿಪಾಡಿ ಮತ್ತಿತರರು ಉಪಸ್ಥಿತರಿದ್ದರು.

Kinnigoli-0703201601

Comments

comments

Comments are closed.

Read previous post:
Mulki-16031604
ಪಡುಪಣಂಬೂರು ಬಸದಿಯಲ್ಲಿ ನಿಧಿಗಾಗಿ ಶೋಧ

ಮೂಲ್ಕಿ: ಪಡುಪಣಂಬೂರು ಅರಮನೆಯ ಪಾರ್ಶ್ವನಾಥ ಸ್ವಾಮಿ ಬಸದಿಯಲ್ಲಿ ದುಷ್ಕರ್ಮಿಗಳಿಂದ ನಿಧಿಗಾಗಿ ಶೋಧ ನಡೆದಿದ್ದು ವಾಮಾಚಾರವೂ ನಡೆದಿದೆ ಎಂದು ಪಡುಪಣಂಬೂರು ಅರಮನೆಯ ದುಗ್ಗಣ್ಣ ಸಾವಂತರು ಮೂಲ್ಕಿ ಠಾಣೆಗೆ ದೂರು...

Close