ಪಡುಪಣಂಬೂರು ಬಸದಿಯಲ್ಲಿ ನಿಧಿಗಾಗಿ ಶೋಧ

ಮೂಲ್ಕಿ: ಪಡುಪಣಂಬೂರು ಅರಮನೆಯ ಪಾರ್ಶ್ವನಾಥ ಸ್ವಾಮಿ ಬಸದಿಯಲ್ಲಿ ದುಷ್ಕರ್ಮಿಗಳಿಂದ ನಿಧಿಗಾಗಿ ಶೋಧ ನಡೆದಿದ್ದು ವಾಮಾಚಾರವೂ ನಡೆದಿದೆ ಎಂದು ಪಡುಪಣಂಬೂರು ಅರಮನೆಯ ದುಗ್ಗಣ್ಣ ಸಾವಂತರು ಮೂಲ್ಕಿ ಠಾಣೆಗೆ ದೂರು ನೀಡಿದ್ದಾರೆ.
ಸುಮಾರು 600 ವರ್ಷಗಳ ಇತಿಹಾಸವಿರುವ ಪಡುಪಣಂಬೂರಿನಿಂದ ಕದಿಕೆಗೆ ಹೋಗುವ ರಸ್ತೆಯ ಬಲಬದಿಯಲ್ಲಿ ಪಾಶ್ವನಾಥ ಸ್ವಾಮಿಯ ಕಲ್ಲುಬಸದಿಯಿದ್ದು ದುಷ್ಕರ್ಮಿಗಳು ಭಾರೀ ಗಾತ್ರದ ಕಲ್ಲುಗಳನ್ನು ಮೇಲೆತ್ತಿ ನಿಧಿಗಾಗಿ ಶೋಧ ನಡೆಸಿದ್ದಾರೆ. ನಿಧಿಗಾಗಿ ಸುಮಾರು 7 ಅಡಿಯ ಹೊಂಡ ತೋಡಿದ್ದಾರೆ. ಪರಿಸರದಲ್ಲಿ ಯಾವುದೇ ಮನೆಗಳಿಲ್ಲದ ಕಾರಣ ಯಾವಾಗ ಘಟನೆ ನಡೆದಿದೆ ಎಂದು ತಿಳಿದು ಬಂದಿಲ್ಲ. ಅರಮನೆ ಬಸದಿಗೆ ಬಂದ ಭಕ್ತರೊಬ್ಬರು ಈ ಬಸದಿಗೂ ಭೇಟಿ ನೀಡಿದಾಗ ನಿಧಿಶೋದದ ದುಷ್ಕರ್ಮಿಗಳ ಯತ್ನ ಬಯಲಿಗೆ ಬಂದಿದೆ.ಇದೇ ಬಸದಿಯಲ್ಲಿ ಇದು 3ನೇ ಬಾರಿ ನಿಧಿಶೋಧಕ್ಕೆ ವಿಫಲ ಯತ್ನ ನಡೆದಿದೆ ಎಂದು ಅರಸರು ತಿಳಿಸಿದ್ದಾರೆ. ಬಸದಿಯ ಒಳ ಹಾಗೂ ಹೊರಬದಿಯಲ್ಲಿ ಕುಂಕುಮದ ನೀರಿನಿಂದ ಗೆರೆ ಎಳೆದಿದ್ದು ವಾಮಾಚಾರದ ಶಂಕೆಯನ್ನು ಅರಸರು ವ್ಯಕ್ತಪಡಿಸಿದ್ದಾರೆ. ಕೂಡಲೇ ಮೂಲ್ಕಿ ಪೋಲಿಸರು ಹಾಗೂ ಪುರಾತತ್ವ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಪುರಾತನ ಬಸದಿಯ ಶೈಲಿಗಳನ್ನು ಉಳಿಸಬೇಕೆಂದು ಅರಸರಾದ ದುಗ್ಗಣ್ಣ ಸಾವಂತರು ಒತ್ತಾಯಿಸಿದ್ದಾರೆ.

Mulki-16031603 Mulki-16031604 Mulki-16031605

Comments

comments

Comments are closed.

Read previous post:
Mulki-03031608
ಪುನರೂರು – ವರ್ಷಾವಧಿ ಮಹೋತ್ಸವ

ಮೂಲ್ಕಿ: ಪುನರೂರು ಶ್ರೀ ವಿಶ್ವನಾಥ ದೇವಸ್ಥಾನದಲ್ಲಿ ವರ್ಷಾವಧಿ ಮಹೋತ್ಸವದ ಪ್ರಯುಕ್ತ ರಾತ್ರಿ ಮಹೋತ್ಸವ ಹಾಗೂ ಪಲ್ಲಕಿ ಸವಾರಿ ನಡೆಯಿತು.

Close