ಅಭಿನಂದನಾ ಕಾರ್ಯಕ್ರಮ

ಬಜಪೆ ;  ಸಮಯ ಸಾಧಕರ ಬಗೆಗೆ ಬಿ.ಜೆ.ಪಿ ಕಾರ್ಯಕರ್ತರು ಜಾಗ್ರತರಾಗಬೇಕಾಗಿದ್ದು ಅಭ್ಯರ್ಥಿ ಗೆಲುವು ಪ್ರತಿ ಕಾರ್ಯಕರ್ತರ ಗೆಲುವಾಗಿದ್ದು ನೂತನ ಜಿ.ಪಂ ಹಾಗೂ ತಾ.ಪಂ ಸದಸ್ಯರ ಅವದಿಯಲ್ಲಿ ಕ್ಷೇತ್ರದ ಸಮಗ್ರ ಅಬಿವೃದ್ದಿಯಾಗಲಿ ಎಂದು ಮಾಜಿ ಬಜಪೆ ಜಿ.ಪಂ ಸದಸ್ಯರಾದ ರಿತೇಶ್ ಶೆಟ್ಟಿ ಹೇಳಿದರು.

ಅವರು ಬಜಪೆ 1ನೇ ಮತ್ತು 2ನೇ ವಾರ್ಡಿನ ಕಾರ್ಯಕರ್ತರ ವತಿಯಿಂದ ನಡೆದ ಅಭಿನಂದನಾ ಕಾರ್ಯಕ್ರಮದ ಮುಖ್ಯ ಅತಿಥಿಯ ನೆಲೆಯಲ್ಲಿ ನುಡಿದರು.

ಈ ಸಂಧರ್ಭ ಬಜಪೆ ಜಿ.ಪಂ ವಸಂತಿ ಕಿಶೋರ್, ತಾ.ಪಂ ಸದಸ್ಯರಾದ ಉಷಾ ಸುವರ್ಣ, ಸುಪ್ರಿತ, ಶಶಿಕಲ ಅವರನ್ನು ಸನ್ಮಾನಿಸಲಾಯಿತು.
ಮಾಜಿ ಜಿ.ಪಂ ಸದಸ್ಯ ರಿತೇಶ್ ಶೆಟ್ಟಿ ಹಾಗೂ ಮಾಜಿ ತಾ.ಪಂ ಸದಸ್ಯ ಜೋಕಿಂ ಡಿ,ಕೋಸ್ತ ಹಾಗೂ ವಾರ್ಡ್ ಸದಸ್ಯರಾದ ಸುಧಾಕರ್ ಕಾಮತ್, ತ್ರಿಶೂಲ್ ಶೆಟ್ಟಿ, ನೀರೆಲ್ ಪೆರ್ನಾಂಡಿಸ್, ಯಶೋದಾ ಮತ್ತು ಸುಮಾ ಶೆಟ್ಟಿ ಯವರನ್ನು ಗೌರವಿಸಲಾಯಿತು.
ಇತ್ತೀಚೆಗೆ ನಿಧನರಾದ ಡಾ.ಗೋಪಿನಾಥ್ ಭಟ್ ರವರಿಗೆ ಸಭೆಯಲ್ಲಿ ಶ್ರಧ್ಧಾಂಜಲಿ ಸಮರ್ಪಿಸಲಾಯಿತು.

ಅಧ್ಯಕ್ಷತೆಯನ್ನು ಬಜಪೆ ಶಕ್ತಿ ಕೇಂದ್ರ ನವೀನ್ ಚಂದ್ರ. ಬಿ ವಹಿಸಿದ್ದರು.
ಹಿರಿಯರಾದ ಸಿಲ್ವಸ್ಟರ್, ಯಾದವ ಕಾರ್ಕಳ, ಸುಕುಮಾರ್ ಸಾಲ್ಯಾನ್, ಮಾಧವ ಅಮೀನ್ ಮತ್ತಿತರರು ಉಪಸ್ಥಿತರಿದ್ದರು.

ಬಜಪೆ ಗ್ರಾ.ಪಂ ಮಾಜಿ ಉಪಾಧ್ಯಕ್ಷ  ಲೋಕೇಶ್ ಪೂಜಾರಿ ಸ್ವಾಗತಿಸಿ, ಮಳವೂರು ಗ್ರಾ.ಪಂ ಅಧ್ಯಕ್ಷ ಗಣೇಶ್ ಅರ್ಬಿ ನಿರೂಪಿಸಿ ಬಜಪೆ ಗ್ರಾ.ಪಂ ಮಾಜಿ ಅಧ್ಯಕ್ಷ ಪ್ರದೀಪ್ ಸುವರ್ಣ ವಂದಿಸಿದರು.

Mulki-16031609

Comments

comments

Comments are closed.

Read previous post:
Kinnigoli-0703201608
ಟೋಲ್ ಗೇಟ್ ಅವ್ಯವಸ್ಥಿತ ಸುಂಕ ವಸೂಲಿ

ಕಿನ್ನಿಗೋಳಿ: ಸುರತ್ಕಲ್ ಸಮೀಪದ ಎನ್‌ಐಟಿಕೆ ಟೋಲ್ ಗೇಟ್ ಗುತ್ತಿಗೆದಾರ ಸಂಸ್ಥೆಯು ಇದೀಗ ದಿನಂಪ್ರತಿ ಸಂಚರಿಸುವ ಖಾಸಗಿ ಬಸ್‌ಗಳಿಗೆ ಏಕಮುಖ ಸಂಚಾರಕ್ಕೆ 75 ರೂ. ವಿಧಿಸುವ ಮೂಲಕ ಬಸ್ ಮಾಲಕರನ್ನು...

Close