ಮುಲ್ಕಿ ಮೂಡಬಿದ್ರೆ ಅಭಿನಂದನಾ ಸಮಾರಂಭ

ಕಿನ್ನಿಗೋಳಿ: ಬಿಜೆಪಿ ಪಕ್ಷದ ತಳಮಟ್ಟದ ಕಾರ್ಯಕರ್ತರ ಒಗ್ಗಟ್ಟಿನ ಶ್ರಮದ ಫಲವಾಗಿ ಬಿಜೆಪಿ ಪಕ್ಷ ಕಾಂಗ್ರೇಸ್‌ನ ಹಿಡಿತದಲ್ಲಿದ್ದ ಮುಲ್ಕಿ ಮೂಡಬಿದ್ರೆ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿ ಎಲ್ಲಾ ಐದು ಜಿಲ್ಲಾ ಪಂಚಾಯಿತಿಗಳನ್ನು ಬಿಜೆಪಿ ತನ್ನದಾಗಿಸಿ ದಾಖಲೆ ನಿರ್ಮಿಸಿದೆ, ಕೇಂದ್ರ ಸರಕಾರ ಸಾಕಷ್ಟು ಅಭಿವೃದ್ದಿ ಕಾರ್ಯಗಳನ್ನು ಮಾಡಿ ಜನಪರ ಸರಕಾರವೆನಿಸಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.
ಭಾನುವರ ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಮುಲ್ಕಿ ಮೂಡಬಿದ್ರೆ ಬಿಜೆಪಿ ಪಕ್ಷದಿಂದ ಜಿ.ಪಂ. ತಾ.ಪಂ. ಕ್ಷೇತ್ರದಿಂದ ವಿಜೇತರಾದವರನ್ನು ಹಾಗೂ ಬಿ.ಜೆಪಿ. ಕಾರ್ಯಕರ್ತರನ್ನು ಅಭಿನಂದಿಸಿ ಮಾತನಾಡಿದರು.
ಈ ಸಂದರ್ಭ ಜಿಲ್ಲಾ ಪಂಚಾಯಿತಿ ವಿಜೇತ ಅಭ್ಯರ್ಥಿಗಳಾದ ವಿನೋದ್ ಬೊಳ್ಳೂರು, ಕೆ. ಪಿ. ಸುಚರಿತ ಶೆಟ್ಟಿ, ಸುಜಾತ ಕೆ. ಪಿ, ಕಸ್ತೂರಿ ಪಂಜ, ವಸಂತಿ, ತಾಲೂಕು ಪಂಚಾಯಿತಿ ಸದಸ್ಯರಾದ ರೇಖಾ ಸಾಲ್ಯಾನ್, ನಾಗವೇಣಿ, ಸಂತೋಷ್, ವನಿತಾ ನಾಯ್ಕ್ , ದಿವಾಕರ ಕರ್ಕೆರಾ, ಶರತ್ ಕುಬೆವೂರು, ರಶ್ಮಿಆಚಾರ್ಯ, ಜೀವನ್ ಪ್ರಕಾಶ್, ವಜ್ರಾಕ್ಷಿ ಶೆಟ್ಟಿ , ಶುಭಲತಾ ಶೆಟ್ಟಿ , ಶಶಿಕಲಾ, ಉಷಾ ಸುವರ್ಣ, ಸುಪ್ರೀತ, ಕವಿತಾ ದಿನೇಶ್, ಮತ್ತಿತರನ್ನು ಗೌರವಿಸಲಾಯಿತು.
ವಿಧಾನ ಪರಿಷತ್ ಸದಸ್ಯ ಮೋನಪ್ಪ ಭಂಡಾರಿ, ಬಿಜೆಪಿ ಜಿಲ್ಲಾದ್ಯಕ್ಷ ಪ್ರತಾಪ ಸಿಂಹ ನಾಯಕ್, ಬಿ.ಜೆಪಿ ಮುಖಂಡರಾದ ಉಮಾನಾಥ ಕೋಟ್ಯಾನ್, ಜಗದೀಶ ಅಧಿಕಾರಿ, ಭುವನಾಭಿರಾಮ ಉಡುಪ, ಸುರ್ದಶನ್ ಮೂಡಬಿದ್ರೆ, ರಾಮಚಂದ್ರ ಬೈಕಂಪಾಡಿ, ಸುಲೋಚನಾ ಭಟ್, ಕೆ. ಆರ್ ಪಂಡಿತ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಈಶ್ವರ್ ಕಟೀಲ್, ಮುಲ್ಕಿ ಮೂಡಬಿದ್ರೆ ಬಿಜೆಪಿ ಕಾರ್ಯದರ್ಶಿ ದೇವಪ್ರಸಾದ್ ಪುನರೂರು, ಮತ್ತಿತರರು ಉಪಸ್ಥಿತರಿದ್ದರು.
ಸುನಿಲ್ ಆಳ್ವ ಕಾರ್ಯಕ್ರಮ ನಿರೂಪಿಸಿದರು.

Kinnigoli-09031601

Comments

comments

Comments are closed.

Read previous post:
Kinnigoli-08031602
ಕಟೀಲು – ರಜತ ಮಹೋತ್ಸವ ಬೆಳ್ಳಿಬೆಳಕು

ಕಿನ್ನಿಗೋಳಿ : ಕಲಿತ ಸಂಸ್ಥೆ ಮತ್ತು ಗುರುಗಳನ್ನು ಯಾವತ್ತೂ ಮರೆಯಬಾರದು, ಗುಣ ಮಟ್ಟದ ಶಿಕ್ಷಣಕ್ಕೆ ಒತ್ತು ನೀಡಿ ಅಭಿವೃದ್ದಿಪರ ಸಮಾಜ ಕಟ್ಟಬೇಕು. ಎಂದು ದ.ಕ. ಲೋಕಸಭಾ ಸದಸ್ಯ ನಳಿನ್...

Close