ತೆಲಿಕೆ ನಲಿಕೆದ ಉಚ್ಚಯ ಮಿತ್ರೋತ್ಸವ 2016

ಕಿನ್ನಿಗೋಳಿ: ದೈವಾರಾಧನೆ, ಕೃಷಿಗೆ ಆದ್ಯತೆ ನೀಡಿರುವ ತುಳು ಸಂಸ್ಕಾರ ಮಹತ್ತರ. ತುಳುನಾಡಿನ ಪ್ರತಿಯೊಂದು ತಿಂಗಳಿಗೂ ವಿಶೇಷ ಮಹತ್ವವಿದೆ. ಹಿರಿಯರ ನೋವು ನಲಿವುಗಳು ಹಾಗೂ ನಿಸರ್ಗದೊಂದಿಗಿನ ಒಡನಾಟ ವೈಜ್ಞಾನಿಕ ಚಿಂತನೆ ಈಗಿನ ಯುವಜನತೆಗೆ ಪರಿಚಯಿಸುವ ದೃಷ್ಟಿಯಿಂದ ತುಳು ಸಂಸ್ಕ್ರತಿಯನ್ನು ಬಿಂಬಿಸುವ ಕಾರ್ಯಕ್ರಮಗಳು ನಡೆಯಬೇಕು. ನಮ್ಮ ಸಂಸ್ಕಾರ ಸಂಸ್ಕೃತಿ ವಿಭಿನ್ನತೆಗಳನ್ನು ರಕ್ಷಿಸಿ ಮುನ್ನಡಿಯಿಡಬೇಕು ಎಂದು ತುಳುನಾಡ ಕ್ರೀಡಾ ಅಧ್ಯಯನ ಸಂಗ್ರಾಹಕ, ಶಿಕ್ಷಕ ಕೆ.ಕೆ.ಪೇಜಾವರ ಹೇಳಿದರು.
ಪಕ್ಷಿಕೆರೆ ವಿನಾಯಕ ಮಿತ್ರ ಮಂಡಳಿಯ ಆಶ್ರಯದಲ್ಲಿ ಕೆಮ್ರಾಲ್ ಗ್ರಾಮ ಪಂಚಾಯಿತಿ ವಠಾರದ ಬಾಬುರಾಯ ಚಾವಡಿಯಲ್ಲಿ ಭಾನುವಾರ ನಡೆದ ಮಿತ್ರೋತ್ಸವ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಗೊಬ್ಬುದ ಕಲಕ್ಕೆ ಚಾಲನೆ ನೀಡಿ ಮಾತನಾಡಿದರು.
ಪುನರೂರು ಶ್ರೀ ವಿಶ್ವನಾಥ ದೇವಳದ ಪಟೇಲ್ ವಾಸುದೇವರಾವ್ ಕಾರ್ಯಕ್ರಮ ಉದ್ಘಾಟಿಸಿದರು. ಕುಶಲ ಕುಕ್ಯಾನ್, ಮಜಿ. ತಾ.ಪಂ. ಸದಸ್ಯೆ ಬೇಬಿ ಸುಂದರ ಕೋಟ್ಯಾನ್ ಅವರು ಚೆನ್ನಮಣೆ ಆಡಿ ದಿನಪೂರ್ತಿ ನಡೆಯುವ ಆಟ ಮತ್ತು ಮಾಹಿತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕೆಮ್ರಾಲ್ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗೇಶ್ ಅಂಚನ್ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ಅರ್ಚಕ ವಾಸುದೇವ ಭಟ್ ಪಂಜ, ಮೂಲ್ಕಿ ಪ್ರೆಸ್ ಕ್ಲಬ್ ಅಧ್ಯಕ್ಷ ನರೇಂದ್ರ ಕೆರೆಕಾಡು, ಪಕ್ಷಿಕರೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಸೇಸಪ್ಪ ಸಾಲ್ಯಾನ್, ವಿನಾಯಕ ಮಿತ್ರ ಮಂಡಳಿ ಅಧ್ಯಕ್ಷ ಶೇಖರ್ ತೋಕೂರು, ಕಾರ್ಯದರ್ಶಿ ರಾಜೇಶ್ ದಾಸ್, ಗೌರವ ಸಲಹೆಗಾರರಾದ ಧನಂಜಯ ಶೆಟ್ಟಿಗಾರ್, ಜಯಾನಂದ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.
ಸಾಹಿತಿ ಪರಮಾನಂದ ಸಾಲ್ಯಾನ್ ಕಾರ್ಯಕ್ರಮ ನಿರೂಪಿಸಿದರು.

Kinnigoli-10031601

Comments

comments

Comments are closed.

Read previous post:
Kinnigoli-09031601
ಮುಲ್ಕಿ ಮೂಡಬಿದ್ರೆ ಅಭಿನಂದನಾ ಸಮಾರಂಭ

ಕಿನ್ನಿಗೋಳಿ: ಬಿಜೆಪಿ ಪಕ್ಷದ ತಳಮಟ್ಟದ ಕಾರ್ಯಕರ್ತರ ಒಗ್ಗಟ್ಟಿನ ಶ್ರಮದ ಫಲವಾಗಿ ಬಿಜೆಪಿ ಪಕ್ಷ ಕಾಂಗ್ರೇಸ್‌ನ ಹಿಡಿತದಲ್ಲಿದ್ದ ಮುಲ್ಕಿ ಮೂಡಬಿದ್ರೆ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿ ಎಲ್ಲಾ ಐದು ಜಿಲ್ಲಾ...

Close