ಸಂಸ್ಕಾರ ಸಂಸ್ಕೃತಿಯ ಅರಿವು ಮೂಡಿಸಬೇಕು

ಕಿನ್ನಿಗೋಳಿ: ಪಂಚದ್ರಾವಿಡ ಭಾಷೆಗಳಲ್ಲಿ ಒಂದಾದ ತುಳು ಭಾಷೆ ಮತ್ತು ಇಲ್ಲಿನ ಸಂಸ್ಕಾರ ಸಂಸ್ಕೃತಿ ಹದಗೆಡುತ್ತಿದ್ದು ರಾಜಕೀಯ ಹುನ್ನಾರಗಳಿಂದ ತುಳು ನಾಡಿನ ಭೂಮಿ ಕೈಗಾರಿಕೆಗಳ ಪಾಲಾಗುವ ಸ್ಥಿತಿಯಲ್ಲಿವೆ. ತೌಳವ ಭಾಷೆ ಮತ್ತು ಸಂಸ್ಕೃತಿಯ ಉಳಿವಿಗಾಗಿ ಯುವ ಪೀಳಿಗೆಯನ್ನು ಸಂಘಟಿಸಿ ಅರಿವು ಮೂಡಿಸುವ ಕಾರ್ಯ ಆಗಬೇಕಾಗಿದೆ. ಎಂದು ಕನ್ನಡ ಸಾಹಿತ್ಯ ಪರಿಷತ್ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಹೇಳಿದರು.
ಶ್ರೀ ವಿನಾಯಕ ಮಿತ್ರ ಮಂಡಳಿ ಪಕ್ಷಿಕೆರೆ ಸಂಯೋಜನೆಯಲ್ಲಿ ಕೆಮ್ರಾಲ್ ಪಂಚಾಯತಿ ವಠಾರದ ಬಾಬುರಾಯ ಚಾವಡಿಯಲ್ಲಿ ಭಾನುವಾರ ನಡೆದ ತೆಲಿಕೆ ನಲಿಕೆದ ಉಚ್ಚಯ ಮಿತ್ರೋತ್ಸವ-2016 ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಅಜ ತತ್ತಿನನ ತುಳುವೆರೆ ಬದ್‌ಕ್( ಹೆಜ್ಜೆ ತಪ್ಪಿದ ತುಳುವರ ಬದುಕು) ವಿಷಯದಲ್ಲಿ ಆಯುರ್ವೇದ ತಜ್ಞ ಹಾಗೂ ಹಿರಿಯ ಜಾನಪದ ಸಂಶೋಧಕ ಡಾ.ವೈ.ಎನ್.ಶೆಟ್ಟಿ ಉಪನ್ಯಾಸ ನೀಡಿ ಆಧುನಿಕತೆಯ ಭರಾಟೆಯಲ್ಲಿ ವೈಜ್ಞಾನಿಕ ತಳಹದಿಯುಳ್ಳ ಮೂಲ ನಂಬಿಕೆ ಆಚಾರ ವಿಚಾರಗಳ ಬಗ್ಗೆ ಗೊಡ್ಡು ಸಂಪ್ರದಾಯಗಳೆಂಬ ಹಣೆಪಟ್ಟಿ ನೀಡಿ ಮೂಲೆಗುಂಪು ಮಾಡುತ್ತಿರುವುದರಿಂದ ಇಂದು ಜನರ ದೇಹ ರೋಗ ರುಜಿನಗಳ ಗೂಡಾಗಿ ಪರಿಣಮಿಸುತ್ತಿವೆ. ರಾಸಾಯನಿಕ ವಿಷವೂ ಸಿದ್ದ ಆಹಾರದ ಹೆಸರಿನಲ್ಲಿ ಬಿಕರಿಯಾಗುತ್ತಿದೆ. ತುಳುವರ ಸಂಪ್ರದಾಯಿಕ ಆಹಾರ ಪದ್ದತಿ ಹಾಗೂ ಆಚರಣೆಗಳು ಆರೋಗ್ಯ ರಕ್ಷಣೆಯೊಂದಿಗೆ ವೈಜ್ಞಾನಿಕ ಸತ್ವವನ್ನು ಹೊಂದಿವೆ. ಈ ಬಗ್ಗೆ ಹಿರಿಯರು ಸಂಘಟನೆಗಳು ವಿವಿಧ ಕಾರ್ಯಕ್ರಮಗಳ ಮೂಲಕ ಮಾರ್ಗದರ್ಶನ ನೀಡಬೇಕು. ಎಂದರು.
ಈ ಸಂದರ್ಭ ಹಿರಿಯ ಪಾಡ್ದನ ಕಲಾವಿದೆ ರಾಜ್ಯೋತ್ಸವ ಪ್ರಶಸ್ತಿ ವಿಜೇತೆ ಗಿಡಿಗೆರೆ ರಾಮಕ್ಕ ಅವರನ್ನು ಅಕ್ಕಿ ಮುಡಿಯಲ್ಲಿ ಕುಳ್ಳಿರಿಸಿ ಸೀರೆ ಫಲ ತಾಂಬೂಲ ಪ್ರಶಸ್ತಿಪತ್ರ ನೀಡಿ ಸನ್ಮಾನಿಸಲಾಯಿತು. ಸಾಹಿತಿ ರಂಗಕರ್ಮಿ ಪರಮಾನಂದ ಸಾಲ್ಯಾನ್ ಅಭಿನಂದನಾ ಭಾಷಣ ಮಾಡಿದರು.
ಪಕ್ಷಿಕೆರೆ ಸಾರ್ವಜನಿಕ ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ಶಾಂತಾರಾಮ ಶೆಟ್ಟಿ, ಉದ್ಯಮಿ ಕುಶಲ ಪೂಜಾರಿ, ಕಿನ್ನಿಗೋಳಿ ಯುಗಪುರುಷದ ಪ್ರಧಾನ ಸಂಪಾದಕ ಕೆ. ಭುವನಾಭಿರಾಮ ಉಡುಪ, ಕಿನ್ನಿಗೋಳಿ ಸರಾಫ್ ಅಣ್ಣಯ್ಯ ಆಚಾರ್ಯ ಸಭಾಭವನ ಸಮಿತಿ ಅಧ್ಯಕ್ಷ ಎಂ.ಪ್ರಥ್ವಿರಾಜ ಆಚಾರ್ಯ, ಅತ್ತೂರು ಅರಸು ಕುಂಜಿರಾಯ ದೈವಸ್ಥಾನ ಅಧ್ಯಕ್ಷ ಚರಣ್ ಜೆ.ಶೆಟ್ಟಿ, ಧರ್ಮಸ್ಥಳ ಗ್ರಾಮೀಣ ಯೋಜನೆಯ ಕಿನ್ನಿಗೋಳಿ ವಲಯ ಮೇಲ್ವಿಚಾರಕ ಸತೀಶ್, ಕೆಮ್ರಾಲ್ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಮೇಶ್ ರಾಥೋಡ್ ಉಪಸ್ಥಿತರಿದ್ದರು.
ವಿನಾಯಕ ಮಿತ್ರ ಮಂಡಳಿಯ ಹಿರಿಯ ಸಲಹೇದಾರರಾದ ಧನಂಜಯ ಶೆಟ್ಟಿಗಾರ್ ಸ್ವಾಗತಿಸಿದರು, ಜಯಾನಂದ ಎನ್ ಸುವರ್ಣ ನಿರೂಪಿಸಿದರು.

ತುಳು ಗೊಬ್ಬದ ಕಲ ಫಲಿತಾಂಶ:
ಚೆನ್ನೆಮಣೆ ಪ್ರಥಮ ಸುಜಾತ, ದ್ವಿತೀಯ: ಅನುಷಾ.
ಹೂ ಕಟ್ಟುವ ಸ್ಪರ್ಧೆ ಪ್ರಥಮ: ಗೀತಾ ಶೆಟ್ಟಿ, ದ್ವಿತೀಯ: ಸ್ನೇಹಿತಾ ಮತ್ತು ಶಶಿ ಸುರೇಶ್.
ಪೊಕ್ಕುದ ಗೊಬ್ಬು ಪ್ರಥಮ: ಜಯಶ್ರೀ, ದ್ವಿತೀಯ ಭವಾನಿ ಕಾಪಿಕಾಡು.
ಗೋಣಿಡ್ ಬಲ್ಪುನಿ (ಪುರುಷರು)ಪ್ರಥಮ: ಅಭಿಲಾಶ್,ದ್ವಿತೀಯ:ಸುಮಂತ್.
ಗೋಣಿಡ್ ಬಲ್ಪುನಿ ಓಟ (ಮಹಿಳೆಯರು) ಪ್ರಥಮ ಶಿಲ್ಪಾ,ದ್ವಿತೀಯ:ತೃಪ್ತಿ.
ಬೆರ‍್ನಾಸ್ ಪ್ರಥಮ: ಲೋಹಿತ್ ಹರಿಪಾದೆ.
ಟೊಂಕ ಪ್ರಥಮ: ಛೈತ್ರಾ, ದ್ವಿತೀಯ ಪೂಜಾ.
ಪುಂಡುದ ಪಂಥ ಪ್ರಥಮ ಸಿಂಚನಾ ತಂಡ( ಬಿ), ದ್ವಿತೀಯ ಸಿಂಚನಾ ತಂಡ(ಎ).
ಅಂಡಿ ಪ್ರಥಮ: ಶ್ರೀಹರಿ ಸ್ಪೋರ್ಟ್ಸ್ ಕ್ಲಬ್, ದ್ವಿತೀಯ: ಹೊಸಕಾಡು ಗೈಸ್.
ತೊಪ್ಪುದ ಪಂಥ ಪ್ರಥಮ: ಸಿಂಚನಾ ತಂಡ(ಎ)ದ್ವಿತೀಯ ಸಿಂಚನಾ ತಂಡ(ಬಿ).
ಹಗ್ಗ ಜಗ್ಗಾಟ(ಮಹಿಳೆಯರು) ಪ್ರಥಮ ದುರ್ಗಾಶಕ್ತಿ ಮಹಿಳಾ ಮಂಡಳಿ ಕೆಮ್ರಾಲ್, ದ್ವಿತೀಯ: ಸಿಂಚನಾ ಕಾಪಿಕಾಡು.
ಹಗ್ಗ ಜಗ್ಗಾಟ (ಪುರುಷರು) ಪ್ರಥಮ ಶ್ರೀಹರಿ ಸ್ಪೋರ್ಟ್ಸ್‌ಕ್ಲಬ್, ದ್ವಿತೀಯ: ವಿನಾಯಕ ಮಿತ್ರ ಮಂಡಳಿ

ಅತಿಥಿಗಳಿಗೆ ಎಳನೀರು ಬೋಂಡ,ಶಾಲು ವೀಳ್ಯದೆಲೆ ಅಡಿಕೆ ನೀಡುವ ಮೂಲಕ ಸ್ವಾಗತ ಚೀಲದಲ್ಲಿ ತೆಂಗಿನ ಕಾಯಿಗಳನ್ನು ಇರಿಸಿ ಸ್ಮರಣಿಕೆ.
ಮಹಿಳಾ ವಿಜೇತರಿಗೆ ಚಪಾತಿ ಲಟ್ಟಣಿಗೆ, ಬಾಣಲೆ, ಮೆಟ್ಟುಗತ್ತಿ ಇನ್ನಿತರ ಅಡುಗೆ ಸಾಮಾಗ್ರಿ ಬಹುಮಾನ, ಗುಂಪು ವಿಜೇತರಿಗೆ ವೈಯಕ್ತಿಕವಾಗಿ ತೆಂಗಿನ ಕಾಯಿ ತುಂಬಿಸಿದ ಚೀಲಗಳು ಬಹುಮಾನ ರೂಪದಲ್ಲಿ ಗುಂಪು ವಿಜೇತರಿಗೆ ಪ್ರಥಮ: ದೊಡ್ಡ ಮುಡಿ ಅಕ್ಕಿ,ದ್ವಿತೀಯ: ಸಣ್ಣ ಮುಡಿ ಅಕ್ಕಿ.

Kinnigoli-10031604

Comments

comments

Comments are closed.

Read previous post:
Kinnigoli-10031603
ಗೋಳಿಜೋರ ಕ್ರಿಕೆಟ್ ಪಂದ್ಯಾಟ

ಕಿನ್ನಿಗೋಳಿ: ಗೋಳಿಜೋರ ಶ್ರೀ ರಾಮ ಯುವಕ ವೃಂದದ ಆಶ್ರಯದಲ್ಲಿ ಶಿಮಂತೂರು ಶ್ರೀ ಶಾರದಾ ಪ್ರೌಢಶಾಲಾ ಮೈದಾನದಲ್ಲಿ ಭಾನುವಾರ ನಡೆದ ಅಂತರ ಜಿಲ್ಲಾ ಕ್ರಿಕೆಟ್ ಪಂದ್ಯಾಟದಲ್ಲಿ ಫ್ರೆಂಡ್ಸ್ ಗೋಳಿಜೋರ...

Close