ಯಕ್ಷ ಕವಿ ಗಣೇಶ್ ಕೊಲಕಾಡಿ ಸನ್ಮಾನ

ಕಿನ್ನಿಗೋಳಿ: ಯಕ್ಷಗಾನ ಲೋಕದಲ್ಲಿ ಸಾಧನೆ ಮಾಡಲು ಸಾಧ್ಯವಾಯಿತು . ತನ್ನೆಲ್ಲಾ ಸಾಧನೆಗಳು ಗುರುಗಳು ನೀಡಿದ ಭಿಕ್ಷೆ. ನನಗೆ ನೀಡುವ ಸನ್ಮಾನ, ಗೌರವ ಎಲ್ಲವೂ ಅವರಿಗೆ ಸಮರ್ಪಿಸುತ್ತಿದ್ದೇನೆ ಎಂದು ಯಕ್ಷ ಕವಿ ಗಣೇಶ್ ಕೊಲಕಾಡಿ ಹೇಳಿದರು.
ಕಿನ್ನಿಗೋಳಿ ಯಕ್ಷಲಹರಿ (ರಿ) ಇದರ ವತಿಯಿಂದ ಮಂಗಳವಾರ ನಡೆದ ಯಕ್ಷಕವಿ ಸನ್ಮಾನ ಹಾಗೂ ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಯಕ್ಷಗಾನ ಪ್ರೋತ್ಸಾಹಕರಾದ ಐಕಳ ಹರೀಶ್ ಶೆಟ್ಟಿ ದಂಪತಿ ಅವರನ್ನು ಗೌರವಿಸಲಾಯಿತು. ಹಾಗೂ ಶ್ರೀ ಮಹಾಮ್ಮಾಯಿ ದೇವಳದಲ್ಲಿ ಅರ್ಚಕರಾಗಿ ಕಾರ್ಯ ನಿರ್ವಹಿಸಿ ಅಕಾಲಿಕ ಮರಣ ಹೊಂದಿದ ಶಿವಪ್ಪ ರಾಣೆಯಾರ್ ಅವರ ಕುಟುಂಬಕ್ಕೆ ಸಹಾಯಧನ ನೀಡಲಾಯಿತು.
ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಿದ್ದರು.
ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳದ ಅರ್ಚಕ ಲಕ್ಷ್ಮಿನಾರಾಯಣ ಅಸ್ರಣ್ಣ ಆಶೀರ್ಚಚನ ಗೈದರು.
ಪೊಂಪೈ ಕಾಲೇಜು ಪ್ರಾಚಾರ್ಯ ಜಗಧೀಶ್ ಹೊಳ್ಳ, ಐಕಳ ಗುಣಪಾಲ ಶೆಟ್ಟಿ, ವಿಜಯ ಬಂಡಾರಿ, ಭಾಸ್ಕರ ಶೆಟ್ಟಿ ತಾಳಿಪಾಡಿಗುತ್ತು, ಕೆ ಭುವನಾಭಿರಾಮ ಉಡುಪ, ಐಕಳ ಮಹಾಬಲ ಶೆಟ್ಟಿ ಕುರುಂಬಿಲ್ ಗುತ್ತು, ಸತೀಶ್ ಭಟ್, ವಿದ್ಯಾ ಸತೀಶ್ ಭಟ್, ಉದಯ ಶೆಟ್ಟಿ ಕೆರೆಗುತ್ತು ಮತ್ತಿತರರು ಉಪಸ್ಥಿತರಿದ್ದರು.
ಪಶುಪತಿ ಶಾಸ್ತ್ರಿ ಸ್ವಾಗತಿಸಿದರು. ವಸಂತ ದೇವಾಡಿಗ ವಂದಿಸಿದರು, ರಘುನಾಥ ಕಾಮತ್ ಕಾರ್ಯಕ್ರಮ ನಿರೂಪಿಸಿದರು.

Kinnigoli-10031605

Comments

comments

Comments are closed.

Read previous post:
Kinnigoli-10031604
ಸಂಸ್ಕಾರ ಸಂಸ್ಕೃತಿಯ ಅರಿವು ಮೂಡಿಸಬೇಕು

ಕಿನ್ನಿಗೋಳಿ: ಪಂಚದ್ರಾವಿಡ ಭಾಷೆಗಳಲ್ಲಿ ಒಂದಾದ ತುಳು ಭಾಷೆ ಮತ್ತು ಇಲ್ಲಿನ ಸಂಸ್ಕಾರ ಸಂಸ್ಕೃತಿ ಹದಗೆಡುತ್ತಿದ್ದು ರಾಜಕೀಯ ಹುನ್ನಾರಗಳಿಂದ ತುಳು ನಾಡಿನ ಭೂಮಿ ಕೈಗಾರಿಕೆಗಳ ಪಾಲಾಗುವ ಸ್ಥಿತಿಯಲ್ಲಿವೆ. ತೌಳವ ಭಾಷೆ...

Close