ಧಾರ್ಮಿಕ ಕ್ಷೇತ್ರಗಳು ಶಿಕ್ಷಣಕ್ಕೆ ಮಹತ್ವ

ಮೂಲ್ಕಿ: ಧಾರ್ಮಿಕ ಕ್ಷೇತ್ರಗಳು ಶಿಕ್ಷಣಕ್ಕೆ ಮಹತ್ವ ನೀಡುವ ಮೂಲಕ ಯುವ ಸಮಾಜಕ್ಕೆ ಹಿಂದುತ್ವದ ಅಂತರ್ಯವನ್ನು ತಿಳಿಸುವ ಕಾರ್ಯ ಮಾಡಬೇಕು ಎಂದು ಕೇಮಾರು ಸಾಂದೀಪನೀ ಸಾಧನಾಶ್ರಮದ ಶ್ರೀ ಈಶ ವಿಠ್ಠಲದಾಸ ಸ್ವಾಮೀಜಿ ಹೇಳಿದರು.
ಮೂಲ್ಕಿ ಕಾರ್ನಾಡು ಶ್ರೀ ಹರಿಹರ ಕ್ಷೇತ್ರದ ಯುವಕ ವೃಂದ ಹಾಗೂ ಮಹಿಳಾ ಮಂಡಳಿಯ ಸಂಯುಕ್ತ ಆಶ್ರಯದಲ್ಲಿ ಶಿವರಾತ್ರಿ ಪ್ರಯುಕ್ತ ನಡೆದ ಧಾರ್ಮಿಕ ಸಭೆಯಲ್ಲಿ ಸಾಧಕರಿಗೆ ಸ್ಮಾನ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಗೌರವ ಮತ್ತು ವಿದ್ಯಾರ್ಥಿ ವೇತನ ವಿತರಣೆಯ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಆದ್ಯಾತ್ಮಿಕ ಜ್ಞಾನ ನಮ್ಮಲ್ಲಿನ ಭಯವನ್ನು ದೂರಮಾಡಿ ಧೈರ್ಯ ಹಾಗೂ ಮಾನಸಿಕ ದೃಡತೆಯನ್ನು ಹೆಚ್ಚಿಸುತ್ತದೆ ವಿದ್ಯಾರ್ಥಿಗಳಿಗೆ ಅಗತ್ಯವಾದ ನಾಯಕತ್ವದ ಗುಣಗಳನ್ನು ಅದ್ಯಾತ್ಮ ಜ್ಞಾನದಿಂದ ಹೆಚ್ಚಿಸಬಹುದಾಗಿದೆ ದೇವಾಲಯಗಳು ಧಾರ್ಮೀಕ ಶಿಕ್ಷಣವನ್ನು ಸಾವತ್ರಿಕವಾಗಿ ನೀಡಲು ಕ್ರಮಕೈಗೊಳ್ಳುವುದು ಬಹಳ ಅಗತ್ಯ ಎಂದರು.
ಈ ಸಂದರ್ಭ ಬಿಎಡ್ ಪರೀಕ್ಷೆಯಲ್ಲಿ ಮೂರನೇ ರ‍್ಯಾಂಕ್ಳಿಸಿದ ಸರಿತಾ ಭಾಸ್ಕರ ಆಚಾರ್ಯ,ಯೋಗ ಶಿಕ್ಷಕ ಕೆಂಚನಕೆರೆ ಜಯ ಮುದ್ದು ಶೆಟ್ಟಿ, ನಿವೃತ್ತ ಸೇನಾನಿ ಮಧುಕರ.ಜಿ.ಚಿತ್ರಾಪು ರವರನ್ನು ಸನ್ಮಾನಿಸಲಾಯಿತು. ಪರಿಸರದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾರ್ಥಿ ವೇತನ ನೀಡಲಾಯಿತು. ಆರ್ಥಿಕ ದುಸ್ಥಿತಿಯಲ್ಲಿರುವ ಅನಾರೋಗ್ಯ ಪೀಡಿತರಿಗೆ ಸಹಾಯಧನ ವಿತರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಹರಿಹರ ಕ್ಷೇತ್ರದ ಆಡಳಿತ ಮೊಕ್ತೇಸರ ಎಂ.ಎಚ್.ಅರವಿಂದ ಪೂಂಜಾ ವಹಿಸಿದ್ದರು.
ಅತಿಥಿಗಳಾಗಿ ಕರ್ನಾಟಕ ಬ್ಯಾಂಕ್ ಸಾರ್ವಜನಿಕ ವಿಭಾಗದ ಮುಖ್ಯ ಪ್ರಭಂದಕ ಶ್ರೀನಿವಾಸ ದೇಶಪಾಂಡೆ, ಮಂಗಳೂರು ಉದ್ಯಮಿ ಸಂದೇಶ್ ಕುಮಾರ್,ಮುಂಬೈ ಉದ್ಯಮಿ ಬಿಪಿನ್ ಜಗನ್ನಾಥ ಕೋಟ್ಯಾನ್ ಪೈಯೊಟ್ಟು,ಶ್ರೀ ಹರಿಹರ ಕ್ಷೇತ್ರದ ಮೊಕ್ಥಸರ ಕೃಷ್ಣ ಆರ್ ಶೆಟ್ಟಿ,ಯುವಕ ವೃಂದದ ಅಧ್ಯಕ್ಷ ಹರ್ಷರಾಜಶೆಟ್ಟಿ ಜಿಎಂ,ಕಾರ್ಯದರ್ಶಿ ಸುಧೀರ್ ಅಮೀನ್, ಮಹಿಳಾ ಮಂಡಳದ ಅಧ್ಯಕ್ಷೆ ಶಶಿಕಲಾ ಯದೀಶ್ ಅಮೀನ್ ಉಪಸ್ಥಿತರಿದ್ದರು. ಹರ್ಷರಾಜ ಶೆಟ್ಟಿ ಸ್ವಾಗತಿಸಿದರು. ದಯಾನಂದ ಕೋಟ್ಯಾನ್ ವರದಿ ಮಂಡಿಸಿದರು. ದಿನೇಶ್ ಕೋಲ್ನಾಡು ನಿರೂಪಿಸಿದರು. ಶಶಿಕಲಾ ಯದೀಶ್ ಅಮೀನ್ ವಂದಿಸಿದರು.

Mulki-160316015

Comments

comments

Comments are closed.

Read previous post:
Mulki-160316014
ಮಟ್ಟದ ವಾಲಿಬಾಲ್ ಪಂದ್ಯಾ ಕೂಟ

ಮೂಲ್ಕಿ: ಮಂಗಳೂರು ವಿಶ್ವ ವಿದ್ಯಾನಿಲಯ ಮಟ್ಟದ ವಾಲಿಬಾಲ್ ಪಂದ್ಯಾ ಕೂಟದ ಪ್ರಥಮ ಪ್ರಶಸ್ತಿಯನ್ನು ಶಾರದಾ ಕಾಲೇಜು ಬಸ್ರೂರು. ಪಡೆದುಕೊಂಡಿತು. ಮೂಲ್ಕಿ ವಿಜಯಾ ಕಾಲೇಜಿನ ಆಶ್ರಯದಲ್ಲಿ ನಡೆದ ಮಂಗಳೂರು ವಿಶ್ವ...

Close