ಮಟ್ಟದ ವಾಲಿಬಾಲ್ ಪಂದ್ಯಾ ಕೂಟ

ಮೂಲ್ಕಿ: ಮಂಗಳೂರು ವಿಶ್ವ ವಿದ್ಯಾನಿಲಯ ಮಟ್ಟದ ವಾಲಿಬಾಲ್ ಪಂದ್ಯಾ ಕೂಟದ ಪ್ರಥಮ ಪ್ರಶಸ್ತಿಯನ್ನು ಶಾರದಾ ಕಾಲೇಜು ಬಸ್ರೂರು. ಪಡೆದುಕೊಂಡಿತು. ಮೂಲ್ಕಿ ವಿಜಯಾ ಕಾಲೇಜಿನ ಆಶ್ರಯದಲ್ಲಿ ನಡೆದ ಮಂಗಳೂರು ವಿಶ್ವ ವಿದ್ಯಾ ನಿಲಯ ಮಟ್ಟದ ವಾಲಿಬಾಲ್ ಪಂದ್ಯಾ ಕೂಟದಲ್ಲಿ ದ್ವಿತೀಯ ಪ್ರಶಸ್ತಿಯನ್ನು ಅತಿಥೇಯ ಮೂಲ್ಕಿ ವಿಜಯಾ ಕಾಲೇಜುತಂಡ ಗಳಿಸಿಕೊಂಡಿತು. ತೃತೀಯ ಪ್ರಶಸ್ತಿಯನ್ನು ಎಂಎಸ್‌ಆರ್‌ಎಸ್ ಕಾಲೇಜು ಶಿರ್ವ ಹಾಗೂ ನಾಲ್ಕನೇ ಪ್ರಶಸ್ತಿಯನ್ನು ಉಡುಪಿ ಪೂರ್ಣಪ್ರಜ್ಞಾ ಕಾಲೇಜು ಪಡೆದುಕೊಂಡಿತು.
ಬೆಸ್ಟ್ ಅಟೇಕರ್ ರಾಕೇಶ್ ಮೂಲ್ಕಿ ವಿಜಯಾ ಕಾಲೇಜು,ಬೆಸ್ಟ್ ಪಾಸರ್ ಧನ್‌ರಾಜ್ ಮೂಲ್ಕಿ ವಿಜಯಾ ಕಾಲೇಜು, ಉತ್ತಮ ಸವ್ಯಸಾಚಿ ಅಂಕಿತ್ ಶಾರದಾ ಕಾಲೇಜು ಬಸ್ರೂರು. ಲಿಬ್ರೊ:ಕೃಷ್ಣ ಮತ್ತು ಮುಖೇಶ್ ಶಾರದಾ ಕಾಲೇಜು ಬಸ್ರೂರು ವೈಯಕ್ತಿಕ ಪ್ರಶಸ್ತಿ ಗಳಿಸಿದರು.
ಈ ಸಂದರ್ಭ ಕಾಲೇಜು ಪ್ರಾಂಶುಪಾಲ ಪ್ರೊ.ಕೆ.ಆರ್ ಶಂಕರ್,ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷೆ ಶಮಿನಾ ಆಳ್ವಾ, ರಂಗಕರ್ಮಿ ಚಂದ್ರಶೇಖರ ಸುವರ್ಣ, ಕಾಲೇಜು ಕ್ರೀಡಾ ನಿರ್ದೇಶಕ ಪ್ರೊ ಸಿದ್ದರಾಮಣ್ಣ ಉಪಸ್ಥಿತರಿದ್ದರು.

Mulki-160316014

Comments

comments

Comments are closed.

Read previous post:
Mulki-160316013
ವಿಜಯಾ ಕಾಲೇಜಿನ ವಾರ್ಷಿಕ ಕ್ರೀಡೋತ್ಸವ

ಮೂಲ್ಕಿ: ನಿಯಮಿತ ಕ್ರೀಡಾಬ್ಯಾಸವು ವಿದ್ಯಾರ್ಥಿಗಳಿಗೆ ಉತ್ತಮ ಶಾರೀರಿಕ ಹಾಗೂ ಬೌದ್ಧಿಕ ಆರೋಗ್ಯ ನೀಡುತ್ತದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯ ವಾಲಿಬಾಲ್ ತರಬೇತುದಾರರಾದ ಡಾ.ಟಿ.ಕೇಶವ ಮೂರ್ತಿ ಹೆಳಿದರು. ಮೂಲ್ಕಿ ವಿಜಯಾ...

Close