ಸಾಹಿತ್ಯ ಗ್ರಂಥ ಬಿಡುಗಡೆ

ಮೂಲ್ಕಿ: ತುಳುನಾಡಿನ ಅಭಿವೃದ್ಧಿಯಲ್ಲಿ ಸರ್ಕಾರದ ಕೊಡುಗೆ ನಗಣ್ಯವಾಗಿದ್ದು ತುಳು ಸಾಹಿತ್ಯ ಸಂಸ್ಕೃತಿ ಉದ್ದೀಪನಗೊಳ್ಳುವ ಸಾಹಿತ್ಯ ಗ್ರಂಥಗಳು ಬಿಡುಗಡೆಯಾಗುವ ಮೂಲಕ ಜನಧ್ವನಿ ಮೂಡಿಸುವ ಕೆಲಸವಾಗಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಪ್ರದೀಪ ಕುಮಾರ ಕಲ್ಕೂರಾ ಹೇಳಿದರು.
ಮೂಲ್ಕಿಯ ಸ್ವಾಗತ್ ಹೋಟೇಲ್ ಸಭಾಂಗಣದಲ್ಲಿ ಕಿನ್ನಿಗೋಳಿ ಯುಗಪುರುಷ ಪ್ರಕಟನಾಲಯದ 518ನೇ ಕೃತಿ ಹಾಗೂ ಸಾಹಿತಿ ಮೂಲ್ಕಿ ಹರಿಶ್ಚಂದ್ರ ಪಿ.ಸಾಲ್ಯಾನ್ ರವರ 11ನೇ ಕೃತಿಯಾದ ನಾಗಪಗೆ ತುಳು ಕಾದಂಬರಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಕಾಙಂಗಾಡಿನ ಚಂದ್ರಗಿರಿಯಿಂದ ಶೀರೂರು ಬಾರ್ಕೂರು ಸಂಸ್ಥಾನದ ವರೆಗೆ ಹರಡಿರುವ ತುಳುನಾಡಿನಲ್ಲಿ ವಾಸವಾಗಿರುವ ವಿವಿಧ ಧರ್ಮ ಹಾಗೂ ಭಾಷೆಯ ಜನರು ತೌಳವ ಸಂಸ್ಕಾರಪೂರ್ಣ ಜೀವನ ಕ್ರಮ ಅವಲಂಭಿಸಿ ಬದುಕುತ್ತಿದ್ದು ಭಾಎ ಹಾಗೂ ತುಳು ಸಂಸ್ಕೃತಿಯ ಅಭಿವೃದ್ಧಿಗೆ ಪೂರಕ ಸಾಹಿತ್ಯ ಗ್ರಂಥಗಳು ಹೊರಬರಬೇಕು ತುಳುನಾಡಿನ ಪ್ರಮುಖ ನಾಗಾರಾಧನೆ ಹಾಗೂ ಜನ ಜೀವನಕ್ಕೆ ಪೂರಕವಾದ ಕಾದಂಭರಿಯನ್ನು ಹೆಚ್ಚು ಜನರು ಓದಿ ತಿಳಿದುಕೊಳ್ಳುವ ಮೂಲಕ ಸಾಹಿತಿಗಳಿಗೆ ಮತ್ತು ಭಾಷೆಗೆ ಹೆಚ್ಚಿನ ಉನ್ನತಿಯಾಗಬೇಕು ಎಂದರು.
ಕೃತಿಯ ಬಗ್ಗೆ ಮಾತನಾಡಿದ ಹಿರಿಯ ಸಂಶೋಧಕ ಮುದ್ದು ಮೂಡುಬೆಳ್ಳೆ, ತುಳುನಾಡಿನ ಕೃಷಿ ಪರಂಪರೆಗೆ ಹೊಂದಿ ಕೊಂಡಿರುವ ನಾಗ ಹಾಗೂ ದೈವಾರಾಧನೆಯು ಕೃಷಿ ಮತ್ತು ಕೌಟುಂಬಿಕ ಜನ ಜೀವನ ಪದ್ದತಿಯ ಬುನಾದಿಯಾಗಿದೆ. ತುಳುನಾಡಿನ ಜನಜೀವನ ಬದುಕಿನ ಬಗ್ಗೆ ಈ ಕಾದಂಭರಿ ಸಂಸ್ಕೃತಿ ಹಾಗೂ ಸಂಸ್ಕಾರ ಪದ್ದತಿ ಮತ್ತು ಆಚರಣೆಗಳನ್ನು ಎಳೆಯಾಗಿ ಬಿಡಿಸಿಕೊಟ್ಟಿದೆ ಎಂದರು.
ಆಶೀರ್ವಚನ ನೀಡಿದ ಹಿರಿಯ ವಿದ್ವಾಂಸ ವಾದಿರಾಜ ಉಪಾದ್ಯಾಯರು ಮಾತನಾಡಿ, ಪೂರ್ವ ಸಂಸ್ಕಾರದಿಂದ ಮಾತ್ರ ಸಾಹಿತ್ಯ ಅಭಿವೃದ್ಧಿ ಸಾಧ್ಯ ಪ್ರದೇಶದ ಸಂಸ್ಕೃತಿ ಸಂಸ್ಕಾರ ಆಚಾರ ವಿಚಾರಗಳ ನಂಬಿಕೆಗಳನ್ನು ಹಾಗೂ ವೈಜ್ಞಾನಿಕಸತ್ಯಗಳನ್ನು ಸರಳವಾಗಿ ಮುಂದಿನ ಪೀಲೀಗೆಗೆ ಕಾಪಿಡುವ ಕರ್ತವ್ಯ ನಮ್ಮದಾಗಿರುವಂತೆ ಯುವ ಸಮುದಾಯದ ಜ್ಞಾನದ ಹಸಿವು ನೀಗಿಸುವಂತ ಕೃತಿಗಳು ಬರುವಂತಾಗಲಿ ಎಂದು ಹಾರೈಸಿದರು.ಈ ಸಂದರ್ಭ ಸಾಹಿತಿ ಮೂಲ್ಕಿ ಹರಿಶ್ಚಂದ್ರ ಪಿ.ಸಾಲ್ಯಾನ್ ರವರನ್ನು ಯುಗಪುರುಷ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.
ಕೃತಿ ರಚನೆಗೆ ಸಹಕರಿಸಿದ ಮಹನೀಯರನ್ನು ಗೌರವಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ವಹಿಸಿದ್ದರು.
ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆಡಳಿತ ಮೊಕ್ತೇಸರ ಮನೋಹರ ಶೆಟ್ಟಿ,ಕಾರ್ನಾಡು ಶ್ರೀಹರಿಹರ ದೇವಸ್ಥಾನದ ಆಡಳಿತ ಮೊಕ್ತೇಸರ ಎಂ.ಎಚ್.ಅರವಿಂದ ಪೂಂಜಾ,ರಾಜ್ಯೋತ್ಸವ ಪ್ರಶಸ್ತಿ ವಿಜೇತ ವಿದ್ವಾನ್ ನಾಗೇಶ್ ಬಪ್ಪನಾಡು, ಹಿರಿಯ ಸಂಶೋಧಕ ಮುದ್ದು ಮೂಡುಬೆಳ್ಳೆ, ಕಿನ್ನಿಗೋಳಿ ಯುಗಪುರುಷದ ಕೆ. ಭುವನಾಭಿರಾಮ ಉಡುಪ, ಸಾಹಿತಿ ಹರಿಶ್ಚಂದ್ರ ಪಿ.ಸಾಲ್ಯಾನ್,ಲಯನ್ಸ್ ವಲಯಾಧ್ಯಕ್ಷ ದೇವಪ್ರಸಾದ್ ಪುನರೂರು,ನೆಹರೂ ಯುವ ಕೇಂದ್ರದ ಅಧಿಕಾರಿ ವಿಷ್ಣು ಮೂರ್ತಿರಾವ್ ಉಪಸ್ಥಿತರಿದ್ದರು.
ಕೆ. ಭುವನಾಭಿರಾಮ ಉಡುಪ ಸ್ವಾಗತಿಸಿದರು, ವಿಜಯ ಕುಮಾರ್ ಕುಬೆವೂರು ನಿರೂಪಿಸಿದರು.

Mulki-16031601

Comments

comments

Comments are closed.

Read previous post:
Kinnigoli-100316010
ಅತ್ತೂರು ಅರಸು ಕುಂಜಿರಾಯ ನೇಮೋತ್ಸವ

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಅತ್ತೂರು ಶ್ರೀ ಅರಸು ಕುಂಜರಾಯ ಹಾಗೂ ಪರಿವಾರ ದೈವಗಳ ನೇಮೋತ್ಸವ ನಡೆಯಿತು. ಒಲಿಮದೆಯೊಳಗೆ ಬಣ್ಣ ಬಳಿದು ಜೋಗದಿಂದ ಹೊರಬರುವ ಕುಂಜರಾಯ ದೈವವು ಬಳಿಕ ಎತ್ತರದ...

Close