ವಿಜಯಾ ಕಾಲೇಜಿನ ವಾರ್ಷಿಕ ಕ್ರೀಡೋತ್ಸವ

ಮೂಲ್ಕಿ: ನಿಯಮಿತ ಕ್ರೀಡಾಬ್ಯಾಸವು ವಿದ್ಯಾರ್ಥಿಗಳಿಗೆ ಉತ್ತಮ ಶಾರೀರಿಕ ಹಾಗೂ ಬೌದ್ಧಿಕ ಆರೋಗ್ಯ ನೀಡುತ್ತದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯ ವಾಲಿಬಾಲ್ ತರಬೇತುದಾರರಾದ ಡಾ.ಟಿ.ಕೇಶವ ಮೂರ್ತಿ ಹೆಳಿದರು.
ಮೂಲ್ಕಿ ವಿಜಯಾ ಕಾಲೇಜಿನ ವಾರ್ಷಿಕ ಕ್ರೀಡೋತ್ಸವ ಪ್ರಯುಕ್ತ ಕ್ರೀಡಾಸಾಧಕ ವಿದ್ಯಾರ್ಥಿಗಳಿಂದ ಕ್ರೀಡಾ ಜ್ಯೋತಿ ಸ್ವಿಕರಿಸಿ ಬಳಿಕ ಉದ್ಘಾಟಿಸಿ ಅವರು ಮಾಹಿತಿ ನೀಡಿದರು.
ವಿದ್ಯಾರ್ಥಿ ಜೀವನದಲ್ಲಿ ಶೈಕ್ಷಣಿಕ ಪಠ್ಯದ ಜೊತೆಯಲ್ಲಿ ಕ್ರೀಡೆಯಲ್ಲಿ ಸಮಾನವಾಗಿ ಉತ್ತಮ ಸಾಧನೆ ಗೈದರೆ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉನ್ನತಿ ಸಾಧಿಸಲು ಸಹಕಾರಿಯಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪದವಿ ಕಾಲೇಜು ಪ್ರಾಂಶುಪಾಲ ಪ್ರೊ.ಕೆ.ಆರ್.ಶಂಕರ್ ವಹಿಸಿದ್ದರು.ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷೆ ಶಮೀನಾ ಆಳ್ವಾ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ.ಹೆಚ್.ಜಿ.ನಾಗರಾಜ ನಾಯಕ್, ಪದವಿಪೂರ್ವ ಕಾಲೇಜು ಪ್ರಾಂಶುಪಾಲೆ ಪಮೀದಾ ಬೇಗಂ, ಮಾಜಿ ಪ್ರಾಂಶುಪಾಲ ಪ್ರೊ.ಸ್ಯಾಮ್ ಮಾಬೆನ್, ದೈಹಿಕ ಶಿಕ್ಷಣ ನಿರ್ದೇಶಕ ಪ್ರೊ.ಕೆ.ಎಲ್.ಸಿದ್ದರಾಮಣ್ಣ,ಕ್ರೀಡಾ ಕಾರ್ಯದರ್ಶಿ ಶೋಧನ್ ಶೆಟ್ಟಿ ಅತಿಥಿಗಳಾಗಿದ್ದರು.ಕೀರ್ಥನ್ ಸ್ವಾಗತಿಸಿದರು,ಶ್ವೇತಾ ನಿರೂಪಿಸಿದರು.ವೈಷ್ಣವಿ ವಂದಿಸಿದರು.

Mulki-160316013

Comments

comments

Comments are closed.

Read previous post:
Mulki-160316012
ಮೂಲ್ಕಿ ಪಂಚಮಹಲ್ ಸದಾಶಿವ ದೇವಸ್ಥಾನ

ಮೂಲ್ಕಿ: ಮೂಲ್ಕಿ ಪಂಚಮಹಲ್ ಸದಾಶಿವ ದೇವಸ್ಥಾನದ ಉಪಯೋಗಕ್ಕಾಗಿ ಸ್ಟೀಲ್ ಪಾತ್ರೆಗಳನ್ನು ಮೂಲ್ಕಿ ಸೇವಾ ಸಹಕಾರಿ ಬ್ಯಾಂಕ್ ವತಿಯಿಂದ ಅಧ್ಯಕ್ಷ ಬೋಳ ಸುರೇಂದ್ರ ಕಾಮತ್ ಹಸ್ತಾಂತರಿಸಿದರು. ಈ ಸಂದರ್ಭ...

Close