ಪ್ರತಿಷ್ಠಿತ ರಾಷ್ಟ್ರೀಯ ಗೌರವ ಪ್ರಶಸ್ತಿ

ಮೂಲ್ಕಿ: ಉದ್ಯಮದಲ್ಲಿ ಪರಿಪೂರ್ಣ ಸೇವೆ ಹಾಗೂ ಅದ್ವಿತೀಯ ಆರ್ಥಿಕ ಪ್ರಗತಿ ಸಾಧಿಸಿದ ತಾಂತ್ರಿಕ ಕಲಾ ನಿಪುಣ ಹಾಗೂ ವಾಸ್ತು ಶಿಲ್ಪಿ, ಮೂಲ್ಕಿ ಶಾರದಾ ಇನ್ಫ್ರಾ ಡಿಸೈನ್ ಇಂಡಿಯಾ ಪ್ರೈ. ಲಿ.ಸಂಸ್ಥೆಯ ಆಡಳಿತ ನಿರ್ದೇಶಕ ಜೀವನ್ ಕೆ. ಶೆಟ್ಟಿಯವರಿಗೆ ದೆಹಲಿಯ ಪ್ರತಿಷ್ಠಿತ ರಾಷ್ಟ್ರೀಯ ಗೌರವ ಪ್ರಶಸ್ತಿ-2016 ದೊರಕಿದೆ. ದೆಹಲಿಯ ಐಐಎಫ್‌ಎಸ್(ಇಂಡಿಯಾ ಇಂಟರ್‌ನ್ಯಾಷನಲ್ ಫ್ರೆಂಡ್‌ಶಿಪ್ ಸೊಸೈಟಿ) ಈ ಪ್ರಶಸ್ತಿ ನೀಡಿ ಗೌರವಿಸಿದೆ.
ದೆಹಲಿಯ ಮ್ಯಾಕ್ಸ್ ಮುಲ್ಲರ್ ಮಾರ್ಗ್‌ನಲ್ಲಿರುವ ಇಂಡಿಯಾ ಇಂಟರ್‌ನ್ಯಾಷನಲ್ ಸೆಂಟರ್‌ನಲ್ಲಿ ನಡೆದ ಸಮಾರಂಭದಲ್ಲಿ ಅಸ್ಸಾಂ ಹಾಗೂ ತಮಿಳುನಾಡು ಮಾಜಿ ರಾಜ್ಯಪಾಲ ಡಾ. ಭೀಷ್ಮ ನಾರಾಯಣ್ ಸಿಂಗ್ ಪ್ರಶಸ್ತಿ ಪ್ರದಾನ ಮಾಡಿದರು.
ಕಟ್ಟಡ ನಿರ್ಮಾಣದಲ್ಲಿ ಜೀವನ್ ಕೆ. ಶೆಟ್ಟಿಯವರದ್ದು ಅದ್ವಿತೀಯ ಸಾಧನೆ.ಕನ್ಟ್ರಕ್ಷನ್ ಟೆಕ್ನಾಲಜಿಯಲ್ಲಿ ಮಾಸ್ಟರ‍ಸ್ ಡಿಗ್ರಿ ಪದವೀಧರರಾಗಿರುವ ಅವರು ಮುಂಬೈ, ಗೋವಾ, ಹುಬ್ಬಳ್ಳಿ, ಹೊಸಪೇಟೆ, ಬೆಂಗಳೂರು ಸಹಿತ ಅವಿಭಜಿತ ಜಿಲ್ಲೆಯಲ್ಲಿ ನೂರಾರು ಕಟ್ಟಡ ನಿರ್ಮಿಸಿ ಮನೆ ಮಾತಾಗಿದ್ದಾರೆ. ಈಗಾಗಲೇ ಮಣಿಪಾಲದ ಶಾಂತಶಾರದಾ ರೆಸಿಡೆನ್ಸಿ,ಪಡುಬಿದ್ರಿ ರೆಸಿಡೆನ್ಸಿ, ಕಾರ್ನಾಡು ಅಂಬಾರಾಜ್‌ವಿಲ್ಲೆ ಕಳತ್ತೂರು ಅಡಿಟೋರಿಯಂ, ಬ್ರಹ್ಮಗಿರಿ ಆರ್ಯ ರೆಸಿಡೆನ್ಸಿ, ಸುರತ್ಕಲ್ ಶಾರದಾ ಸೆರೆನಿಟಿ ಸಹಿತ ಹಲವಾರು ಸಂಕೀರ್ಣಗಳನ್ನು ನಿರ್ಮಿಸಿದ್ದಾರೆ. ವಾಸ್ತು ನಿರ್ಮಾಣದ ಸಕಲಾಂಗಗಳನ್ನು ಕರತಲಾಮಲಕ ಮಾಡಿಕೊಂಡ ಅವರು, ಶ್ರೀ ಕ್ಷೇತ್ರ ಬಪ್ಪನಾಡು, ಕಾರ್ನಾಡು ಹರಿಹರ ಕ್ಷೇತ್ರ, ಸಾಂತೂರು ಸುಬ್ರಹ್ಮಣ್ಯ ಕ್ಷೇತ್ರ, ಪಲಿಮಾರು ಬ್ರಹ್ಮಲಿಂಗೇಶ್ವರ, ಹುಬ್ಬಳ್ಳಿ ಅಯ್ಯಪ್ಪ ದೇವಸ್ಥಾನ, ಸೂರಿಂಜೆ ಪೊನ್ನಗಿರಿ ಮಹಾಲಿಂಗೇಶ್ವರ, ಕುಡುಪು ಅನಂತ ಪದ್ಮಬಾಭ ದೇವಸ್ಥಾನ, ಬಾರ್ಕೂರು ಏಕನಾಥೇಶ್ವರಿ ದೇವಸ್ಥಾನ, ಸಜಿಪ ರಾಮ ಮಂದಿರ ಸಹಿತ ಅನೇಕ ದೇವಳಗಳ ನಿರ್ಮಾಣದಲ್ಲಿ ತಮ್ಮ ಪರಿಪೂರ್ಣತೆಯನ್ನು ತೋರಿಸಿದ್ದಾರೆ.
ಶೃಂಗೇರಿ ಗುರುಕೃಪಾ,ಶಿವಮೊಗ್ಗ ವಿವಿಐಪಿ ಅತಿಥಿಗೃಹ ಸಹಿತ ಹಲವಾರು ಸಭಾಂಗಣ, ವಸತಿ ನಿಲಯ, ವಾಣಿಜ್ಯ ಕಟ್ಟಡ ಇತ್ಯಾದಿ ನಿರ್ಮಾಣಗಳು ಅವರ ದಕ್ಷತೆಗೆ ಹಿಡಿದ ಕೈಗನ್ನಡಿ.
ತಾಂತ್ರಿಕ ಸಂಸ್ಥೆಗಳ ಮಹಾಮಂಡಳಿ ಹಾಗೂ ಭೂ ವಿಜ್ಞಾನ ತಾಂತ್ರಿಕ ಸಮಿತಿಯ ಸದಸ್ಯರಾಗಿರುವ ಅವರು,ಕಟ್ಟಡ ಮೌಲ್ಯಗಳ ಮಾಪಕರೂ ಆಗಿದ್ದಾರೆ.
ಈಗಾಗಲೇ ಹಲವು ಪ್ರಶಸ್ತಿಗಳನ್ನು ಪಡೆದಿರುವ ಅವರಿಗೆ ಇದೀಗ ರಾಷ್ಟ್ರೀಯ ಗೌರವ ಪ್ರಶಸ್ತಿ-2016 ದೊರಕಿದೆ.
ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಐಐಎಫ್‌ಎಸ್ ಸೆಕ್ರೆಟರಿ ಜನರಲ್ ಗುರುಪ್ರೀತ್ ಸಿಂಗ್, ಎಐಸಿಸಿ ಸದಸ್ಯ ಮೇಜರ್ ವೇದ್ ಪ್ರಕಾಶ್, ನಿವೃತ್ತ ಲೆ.ಜ. ಕೃಷ್ಣಮೋಹನ್ ಸೇಠ್,ಮುಂಬೈ ಮಜಗಾಂವ್ ಡಾಕ್‌ಯಾರ್ಡ್‌ನ ಕಮಾಂಡರ್ ಪಿ.ಆರ್. ನಾಥ್ ಮುಖ್ಯ ಅತಿಥಿಗಳಾಗಿದ್ದರು.

Kinnigoli-210316014

Comments

comments

Comments are closed.

Read previous post:
Kinnigoli-20031608
ಕಿನ್ನಿಗೋಳಿ ಗರಿ ಹಬ್ಬ

ಕಿನ್ನಿಗೋಳಿ : ಕಿನ್ನಿಗೋಳಿ ಕೊಸೆಸಾಂವ್ ಅಮ್ಮನವರ ಚರ್ಚ್‌ನಲ್ಲಿ ಭಾನುವಾರ ಗರಿಗಳ ಹಬ್ಬ ನಡೆಯಿತು. Lionel Pinto, Kinnigoli    

Close