ಮಹಿಳಾ ಸಮಾಗಮ ಕಾರ್ಯಕ್ರಮ

ಮೂಲ್ಕಿ: ಇಂದಿನ ದಿನಗಳಲ್ಲಿ ಮಹಿಳೆಯರು ಎಲ್ಲಾ ರಂಗಗಳಲ್ಲಿ ಮುಂದುವರಿದಿದ್ದು ಸಿಕ್ಕಿದ ಅವಕಾಶಗಳನ್ನು ಉಪಯೋಗಿಸಿ ಸಮಾಜದಲ್ಲಿ ಉನ್ನತ ಸ್ಥಾನಮಾನವನ್ನು ಪಡೆಯಲು ಪ್ರಯತ್ನಿಸಬೇಕೆಂದು ಮಂಗಳೂರು ಮಹಾನಗರ ಪಾಲಿಕೆ ಮಾಜಿ ಮೇಯರ್ ರಜನಿ ದುಗ್ಗಣ್ಣ ಹೇಳಿದರು.
ಯುವವಾಹಿಸಿಯ ಕೇಂದ್ರ ಸಮಿತಿ ಮತ್ತು ಮೂಲ್ಕಿ ಘಟಕದ ಆಶ್ರಯದಲ್ಲಿ ಮೂಲ್ಕಿಯ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ಜರಗಿದ ಮಹಿಳಾ ಸಮಾಗಮ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಕಾರ್ಯಕ್ರಮವನ್ನು ಶ್ರೀಮತಿ ಲೀಲಾವತಿ ಜಯ ಸುವರ್ಣ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಸಂತೋಷ್ ಕುಮಾರ್ ವಹಿಸಿದ್ದು ಮಂಗಳೂರು ಮಹಾನಗರ ಪಾಲಿಕೆ ಕಾರ್ಪೋರೇಟರ್ ಶ್ರೀಮತಿ ಪ್ರತಿಭಾ ಕುಳಾಯಿ ಶುಭಾ ಶಂಸನೆಗೈದರು.ಮೂಲ್ಕಿ ಬಿಲ್ಲವ ಸಂಘದ ಶ್ರೀ ನಾರಾಯಣ ಗುರು ಮಹಿಳಾ ಮಂಡಳಿಯ ಅಧ್ಯಕ್ಷೆ ಸರಸ್ವತಿ ಸುವರ್ಣ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.ಕಾರ್ಯಕ್ರಮದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಗಿಡಿಗೆರೆ ರಾಮಕ್ಕ.ಮೂಲ್ಕಿ ನಗರ ಪಂಚಾಯತ್ ಮಾಜಿ ಅಧ್ಯಕ್ಷೆ ಶ್ರೀಮತಿ ಸರೋಜಿನಿ ಸುವರ್ಣ ಮತ್ತು ಅಂತರಾಷ್ತ್ರೀಯ ಕ್ರೀಡಾ ಪ್ರತಿಭೆ ಕುಮಾರಿ ಹರ್ಷಿತಾ ಯಾದವ ಕೋಟ್ಯಾನ್ ರನ್ನು ಸನ್ಮಾನಿಸಲಾಯಿತು. ಹಾಗೂ ಸಾಧಕರಾದ ಜಾನಪದ ಕ್ಷೇತ್ರದ ನರ್ಸಿ ಪೂಜಾರ್ತಿ  ಎಕ್ಕಾರು, ಸಿಂಧು ಗುಜರನ್ ಮೂಲ್ಕಿ, ಶವಗಾರ ಸೇವೆಯ ಸುಗುಣ ಮೂಲ್ಯ ಅಡ್ವೆ, ಸಮಾಜ ಸೇವೆಯ ಸಿ ಕೆ ಚಂದ್ರಕಲಾ ಬೆಳ್ತಂಗಡಿ, ಚಿತ್ರಾಕ್ಷಿ ಕೆ ಕೋಟ್ಯಾನ್ ಪಡುಬಿದ್ರಿ ಸುಶೀಲ ಜಯಕರ್ ಉಡುಪಿ, ಶಿಕ್ಷಣ ಕ್ಷೇತ್ರದ ಡಾ ರತ್ನಮಾಲ ಕೆ ಬಂಟ್ವಾಳ, ಅನುಸೂಯ ಹೊನ್ನಪ್ಪ ಮಂಗಳೂರು,ಮಹಿಳಾ ಅಭಿವೃದ್ದಿಯ ಮುತ್ತು ಸುವರ್ಣ ಬೆಳುವಾಯಿ, ಜಾನಪದದ ಭವಾನಿ ತೋಕೆಮನೆ ಬಜ್ಪೆ, ಸಹಕಾರಿ ಕ್ಷೇತ್ರದ ಮೀರಾ ಬಾಯಿ ಹಳೆಯಂಗಡಿ, ಮನೆ ಮದ್ದು ನ ಪದ್ಮಾವತಿ ಹೆಜಮಾಡಿ, ಕಲಾ ಕ್ಷೇತ್ರದ ವಸಂತಿ ಜೆ ಪೂಜಾರ್ತಿ ಕಂಕನಾಡಿ, ಆರೋಗ್ಯ ಕ್ಷೇತ್ರದ ಲಕ್ಷ್ಮೀ ಬಿ ಕಟಪಾಡಿ, ಸಮಾಜ ಸೇವೆಯ ಜಯಶ್ರೀ ಕಾಪು, ಕಲಾ ಕ್ಷೇತ್ರದ ಪೂರ್ಣೀಮಾ ವೈ ರೈ ಮಂಗಳೂರು, ಅನುಷಾ ಉಮೇಶ್ ಬಿರ್ತಿ, ಕ್ರೀಡೆಯ ಅಮಿತಾ ಪೂಜಾರ್ತಿ ಸುರತ್ಕಲ್, ಶೂಲಗಿತ್ತಿ ಗಿರಿಜ ಪೂಜಾರ್ತಿ ನಿಡ್ಡೋಡಿ, ನಾಟಿ ವೈದ್ಯೆ ಪೂವಕ್ಕ ಉಪ್ಪಿನಂಗಡಿ ಮತ್ತು ಲೀಲಾವತಿ ಪುತ್ತೂರುರವರನ್ನು ಗೌರವಿಸಲಾಯಿತು.
ಮೂಲ್ಕಿಯ ಯುವವಾಹಿನಿ ಘಟಕದ ಅಧ್ಯಕ್ಷ ಸತೀಶ್ ಕುಮಾರ್ ಸ್ವಾಗತಿಸಿದರು.ಶ್ರೀಮತಿ ಚಿತ್ರಾ ಸುವರ್ಣ ಪ್ರಸ್ತಶವನೆಗೈದರು.ಶ್ರೀಮತಿ ರಾಜೀವಿ ವಿಶ್ವನಾಥ್ ವಂದಿಸಿದರು, ಕು.ದೀಕ್ಷಾ ಸುವರ್ಣ ಮತ್ತು ಶ್ರೀಮತಿ ಉಷಾ ನರೇಂದ್ರ ಕೆರೆಕಾಡು ನಿರೂಪಿಸಿದರು. ಮೂಲ್ಕಿ ಪರಿಸರದ ವಿವಿಧ ಮಹಿಳಾ ಮಂಡಳಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವು.

Kinnigoli-210316019 Kinnigoli-210316020

Comments

comments

Comments are closed.

Read previous post:
Kinnigoli-210316018
ಮೂಲ್ಕಿ: ನಾಗ ಪುನರ್ ಪ್ರತಿಷ್ಥೆ

ಮೂಲ್ಕಿ: ಮೂಲ್ಕಿ ಕೊಳಚಿಕಂಬಳ  ಶ್ರೀ ಜಾರಂದಾಯ ದೈವಸ್ಥಾನದಲ್ಲಿನ ಅಂಚನ್ ಮೂಲದ  ನಾಗ ಸನ್ನಿಧಿಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ನಾಗನ ಶಿಲಾಮಯ ಮಂಟಪದಲ್ಲಿ ನಾಗ ಪುನರ್ ಪ್ರತಿಷ್ಥೆ, ಬ್ರಹ್ಮ ಕಲಶಾಭೀಷೇಕ ಹಾಗೂ...

Close