ಕಟೀಲು ದೇಗುಲದಲ್ಲಿ ನೂತನ ದ್ವಾರ ಉದ್ಘಾಟನೆ

ಕಟೀಲು: ಶ್ರೀ ದುರ್ಗಾಪರಮೇಶ್ವರೀ ದೇಗುಲದಲ್ಲಿ ಹೊಸದಾಗಿ ನಿರ್ಗಮನ ದ್ವಾರವನ್ನು ನಿರ್ಮಿಸಲಾಗಿದ್ದು, ದಾನಿ ಯಾದವ ಕೋಟ್ಯಾನ್ ಪೆರ್ಮುದೆ, ಮೊಕ್ತೇಸರ ವಾಸುದೇವ ಆಸ್ರಣ್ಣ, ಅರ್ಚಕರಾದ ಅನಂತಪದ್ಮನಾಭ, ಕಮಲಾದೇವಿಪ್ರಸಾದ, ಶ್ರೀಹರಿನಾರಾಯಣದಾಸ ಆಸ್ರಣ್ಣ, ವೇದವ್ಯಾಸ ತಂತ್ರಿಗಳ ಉಪಸ್ಥಿತಿಯಲ್ಲಿ ಉದ್ಘಾಟಿಸಲಾಯಿತು.
ಕಟೀಲು ದೇಗುಲಕ್ಕೆ ಆಗಮಿಸುತ್ತಿರುವ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದ್ದು, ದೇಗುಲದ ಒಳಗೆ ಕಡಿಮೆ ಸ್ಥಳಾವಕಾಶವಿರುವುದರಿಂದ, ಜನಸಂದಣಿ ವಿಪರೀತವಾದಾಗ ಸಮಸ್ಯೆಗಳಾಗುತ್ತಿರುವುದರಿಂದ ಮತ್ತೊಂದು ಬಾಗಿಲಿನ ಅಗತ್ಯವನ್ನು ಮನಗಂಡು, ವಾಸ್ತುಪ್ರಕಾರ, ದೇವರಿಂದ ಪ್ರಶ್ನಾರೂಪದಲ್ಲಿ ಒಪ್ಪಿಗೆ ಪಡೆದು ನೂತನ ದ್ವಾರವನ್ನು ನಿರ್ಮಿಸಲಾಗಿದೆ ಎಂದು ದೇಗುಲದ ಮೂಲಗಳು ತಿಳಿಸಿವೆ.

Kinnigoli-210316015 Kinnigoli-210316016

Comments

comments

Comments are closed.

Read previous post:
Kinnigoli-210316014
ಪ್ರತಿಷ್ಠಿತ ರಾಷ್ಟ್ರೀಯ ಗೌರವ ಪ್ರಶಸ್ತಿ

ಮೂಲ್ಕಿ: ಉದ್ಯಮದಲ್ಲಿ ಪರಿಪೂರ್ಣ ಸೇವೆ ಹಾಗೂ ಅದ್ವಿತೀಯ ಆರ್ಥಿಕ ಪ್ರಗತಿ ಸಾಧಿಸಿದ ತಾಂತ್ರಿಕ ಕಲಾ ನಿಪುಣ ಹಾಗೂ ವಾಸ್ತು ಶಿಲ್ಪಿ, ಮೂಲ್ಕಿ ಶಾರದಾ ಇನ್ಫ್ರಾ ಡಿಸೈನ್ ಇಂಡಿಯಾ ಪ್ರೈ....

Close