ಕಿನ್ನಿಗೋಳಿ ಬಹುಗ್ರಾಮ ಯೋಜನೆ

ಕಿನ್ನಿಗೋಳಿ : 16.8 ಕೋಟಿ ರೂ ವೆಚ್ಚದ ಕಿನ್ನಿಗೋಳಿ ಬಹುಗ್ರಾಮ ಕುಡಿಯುವ ನೀರು ಯೋಜನೆ ಅಚಿತಿಮ ಹಂತದಲ್ಲಿ ನೆನೆಗುದಿಗೆ ಬಿದ್ದಿದ್ದು ಪ್ರಸ್ತುತ ಮುಲ್ಕಿ ಹೋಬಳಿಯ ಎಲ್ಲಾ ಗ್ರಾಮದಲ್ಲೂ ನೀರಿನ ಅಭಾವ ಉಂಟಾಗಿದ್ದು ಈ ವ್ಯಾಪ್ತಿಗೆ ಸಂಭಂಧ ಪಟ್ಟ ಚುನಾಯಿತ ಜಿ.ಪಂ, ತಾ.ಪಂ ಹಾಗೂ ಎಲ್ಲಾ ಪಕ್ಷಗಳ ಗ್ರಾ.ಪಂ ಸದಸ್ಯರು ಕಿನ್ನಿಗೋಳಿ ಸಮೀಪದ ಕೊಲ್ಲೂರು ಪದವು ಯೋಜನಾ ಘಟಕಕ್ಕೆ ಭೇಟಿ ನೀಡಿ ಕಾಮಗಾರಿಯ ಬಗ್ಗೆ ಪರೀಶೀಲನೆ ಮಾಡಿದರು.
ಕಿನ್ನಿಗೋಳಿ ಜಿಲ್ಲಾ ಪಂಚಾಯತ್ ಸದಸ್ಯ ವಿನೋದ್ ಬೊಳ್ಳೂರು ಸುದ್ದಿಗಾರರೊಂದಿಗೆ ಮಾತನಾಡಿ ಮುಲ್ಕಿ ಹೋಬಳಿಯಲ್ಲಿ ಈಗಾಗಲೇ ನೀರಿನ ಅಭಾವ ಕಂಡು ಬರುತ್ತಿದ್ದು, ಯೋಜನೆಯು ಮುಕ್ತಾಯ ಹಂತದಲ್ಲಿದ್ದು ಜಿಲ್ಲಾಡಳಿತ ಹಾಗೂ ಸರಕಾರ ತ್ವರಿತವಾಗಿ ಸಮಸ್ಯೆ ಬಗೆಹರಿಸಿ ಗ್ರಾಮಸ್ಥರ ನೀರಿನ ಅಭಾವ ನೀಗಿಸಲು ಈ ಬಗ್ಗೆ ಜಿಲ್ಲಾ ಪಂಚಾಯತ್ ಸಭೆಯಲ್ಲಿ ಮತ್ತು ಸಂಭಂದ ಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಿ ನೀರು ಸರಬರಾಜಗುವಂತೆ ಮಾಡುತ್ತೇವೆ ಎಂದರು ಈ ಸಂದರ್ಭ ಕಟೀಲು ಜಿಲ್ಲಾ ಪಂಚಾಯತ್ ಸದಸ್ಯೆ ಕಸ್ತೂರಿ ಪಂಜ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಈಶ್ವರ್ ಕಟೀಲ್, ತಾಲೂಕು ಪಂಚಾಯತ್ ಸದಸ್ಯರಾದ ದಿವಾಕರ ಕರ್ಕೇರ, ಶರತ್ ಕುಬೆವೂರು, ವಿವಿಧ ಗ್ರಾಮ ಪಂಚಾಯತ್‌ಗಳ ಸದಸ್ಯರು ಉಪಸ್ಥಿತರಿದ್ದರು.

Kinnigoli-23031602

Comments

comments

Comments are closed.

Read previous post:
Kinnigoli-23031601
ಉಲ್ಲಂಜೆ ಸನ್ಮಾನ

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಉಲ್ಲಂಜೆ ಮಂತ್ರದೇವತೆ- ಕೊರಗಜ್ಜ ಕ್ಷೇತ್ರದಲ್ಲಿ ಭಾನುವಾರ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ನಾಗಸ್ವರ ವಾದಕ ಸಾಧಕ ಪ್ರಶಾಂತ್ ಜೋಗಿ, ದೈವದ ಪರಿಚಾರಕ ಶೀನ ಪೂಜಾರಿ ಅವರನ್ನು...

Close