ಶ್ರೀ ನವದುರ್ಗಾ ಯುವಕ ವೃಂದದ ವಾರ್ಷಿಕೋತ್ಸವ

ಮೂಲ್ಕಿ: ಮೂಲ್ಕಿಯ ಕೋಟೆಕೇರಿಯ ಶ್ರೀ ನವದುರ್ಗಾ ಯುವಕ ವೃಂದದ ವಠಾರದಲ್ಲಿ ಜರಗಿದ ಕೋಟೆಕೇರಿಯ ಶ್ರೀ ನವದುರ್ಗಾ ಯುವಕ ವೃಂದದ ವಾರ್ಷಿಕೋತ್ಸವವನ್ನು ಮುಂಬೈ ಸದಾಶಿವ ಶಾಂತಿ ಉದ್ಘಾಟಿಸಿದರು.
ಅಧ್ಯಕ್ಷತೆಯನ್ನು ಮೂಲ್ಕಿ ನಗರ ಪಂಚಾಯತ್ ಸದಸ್ಯ ಯೋಗೀಶ್ ಕೋಟ್ಯಾನ್ ವಹಿಸಿದ್ದು . ವೇದಮೂರ್ತಿ ವಾದಿರಾಜ ಉಪಾಧ್ಯಾಯ ಕೊಲಕಾಡಿ ಆಶೀರ್ವಚನ ನೀಡಿದರು. ಈ ಸಂದರ್ಭ ಉಚಿತವಾಗಿ ಯೋಗ ತರಬೇತಿ ನೀಡುತ್ತಿರುವ ಹಿರಿಯ ಯೋಗ ಶಿಕ್ಷಕ ಕೆಂಚನಕೆರೆ ಜಯ ಮುದ್ದು ಶೆಟ್ಟಿಯವರನ್ನು ಮತ್ತು ರಂಗಕರ್ಮಿ ಹಾಗೂ ಮೂಲ್ಕಿ ಪ್ರೆಸ್ ಕ್ಲಬ್ ಅಧ್ಯಕ್ಷ ನರೇಂದ್ರ ಕೆರೆಕಾಡು ರವರನ್ನು ಸನ್ಮಾನಿಸಲಾಯಿತು.
ಮೂಲ್ಕಿ ನಗರ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಬಂಗೇರ, ಹೆಜಮಾಡಿ ಕೋಟೆ ಹೌಸ್ ಕೆ ಎಸ್ ಶೇಖಬ್ಬ, ಯೋಗ ಗುರು ಕೆಂಚನಕೆರೆಯ ಯೋಗೋಪಾಸನದ ಜಯ ಮುದ್ದು ಶೆಟ್ಟಿ ಮುಖ್ಯ ಆತಿಥಿಗಳಾಗಿ ಭಾಗವಹಿಸಿದ್ದರು.ಯುವಕ ವೃಂದದ ಅಧ್ಯಕ್ಷ ಸತೀಶ್ ಅಂಚನ್ ಜಯ ಪೂಜಾರಿ ಮತ್ತಿತರರು ಉಪಸ್ತಿತತರಿದ್ದರು.
ಸಾಂಸ್ಕ್ರತಿಕ ಕಾರ್ಯಕ್ರಮದ ಅಂಗವಾಗಿ ರಾತ್ರಿ ಮಕ್ಕಳಿಂದ ವಿವಿಧ ನೃತ್ಯ ಕಾರ್ಯಕ್ರಮ ಹಾಗೂ ಕಿನ್ನಿಗೋಳಿಯ ವಿಜಯ ಕಲಾವಿದರಿಂದ ಜಗದೀಶ್ ಶೆಟ್ಟಿ ಕೆಂಚನಕೆರೆ ರಚಿತ ” ಲೆಕ್ಕ ತತ್ತಿ ಬೊಕ್ಕ ” ತುಳು ನಾಟಕ ಪ್ರದರ್ಶನ ನಡೆಯಿತು.

Mulki-26031602 Mulki-26031603

Comments

comments

Comments are closed.

Read previous post:
Mulki-26031601
ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಹೋಳಿ

ಮೂಲ್ಕಿ: ಮೂಲ್ಕಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಹೋಳಿ ಪ್ರಯುಕ್ತ ಕಾಮದಹನ ಕಾರ್ಯಕ್ರಮವು ದೇವಸ್ಥಾನದ ಗದ್ದೆಯಲ್ಲಿ ನಡೆಯಿತು.

Close