ದೇವಾಲಯಗಳನ್ನು ಅಭಿವೃದ್ಧಿಪಡಿಸುವುದು ಕರ್ತವ್ಯ

ಹಳೆಯಂಗಡಿ: ಜೀವನದ ಉನ್ನತಿಗೆ ಪೂರಕವಾದ ಶಾಂತಿ ಸಮಾಧಾನಗಳು ಹಾಗೂ ಧಾರ್ಮಿಕ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ನೀಡುವ ದೇವಾಲಯಗಳನ್ನು ಅಭಿವೃದ್ಧಿಪಡಿಸುವುದು ಸಾರ್ವಜನಿಕರ ಆದ್ಯ ಕರ್ತವ್ಯವಾಗಿದೆ ಎಂದು ಮೂಲ್ಕಿ ಸೀಮೆ ಅರಸರಾದ ದುಗ್ಗಣ್ಣ ಸಾವಂತರು ಹೇಳಿದರು.
ಪಡುಪಣಂಬೂರು ಹೊಗೆಗುಡ್ಡೆ ಶ್ರೀ ಉಮಾಮಹೇಶ್ವರ ಮಹಾಗಣಪತಿ ದೇವಸ್ಥಾನದ ಜೀರ್ಣೋದ್ದಾರ ಬಹ್ಮಕಲಶೋತ್ಸವ ಪ್ರಯುಕ್ತ ಪೂರ್ವಭಾವಿಯಾಗಿ ನಡೆದ ಮುಷ್ಠಿಕಾಣಿಕೆ ಕಾರ್ಯಕ್ರಮದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.
ಈ ಸಂದರ್ಭ  ಕನ್ನಡ ಸಾಹಿತ್ಯ ಪರಿಷತ್ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಚಾಲನೆ ನೀಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಉದ್ಯಮಿ ರಾಮದಾಸ್ ವಹಿಸಿದ್ದರು.
ಕ್ಷೇತ್ರದ ತಂತ್ರಿವರ್ಯ  ಶಿಬರೂರು ವೇದವ್ಯಾಸ ತಂತ್ರಿ, ಸಾಹಿತಿ ಶಕುಂತಳಾ ಭಟ್, ವಾಮಂಜೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ನವೀನ್, ಚೆಳಾರು ಖಂಡಿಗೆ ಬೀಡಿನ ಆದಿತ್ಯ ಮುಕ್ಕಾಲ್ದಿ, ಗೋಪಾಲಕೃಷ್ಣ ಕುಂಜಿತ್ತಾಯ ಉಪಸ್ಥಿತರಿದ್ದರು.

Kinnigoli-01041609

Comments

comments

Comments are closed.

Read previous post:
Kinnigoli-01041608
ಕಟೀಲು : ಹೊರೆಕಾಣಿಕೆ ಮೆರವಣಿಗೆ

ಕಟೀಲು : ಶ್ರೀ ಕೃಷ್ಣ ಮುಖ್ಯಪ್ರಾಣ ದೇವಸ್ಥಾನ ಗುರುನಗರ ಕುಂಪಲದಲ್ಲಿ ನಡೆಯಲಿರು ಪ್ರತಿಷ್ಠೆ, ಅಷ್ಟಬಂಧ ಬ್ರಹ್ಮಕಲಶ ಹಾಗೂ ಅಷ್ಟಪವಿತ್ರ ನಾಗಮಂಡಲೋತ್ಸವದ ಪ್ರಯುಕ್ತ ಕಟೀಲಿನಿಂದ ಹೊರಡುವ ಹೊರೆಕಾಣಿಕೆ ಮೆರವಣಿಗೆಗೆ...

Close