ಪಂಜ ಮಹಿಳಾ ದಿನಾಚರಣೆ

ಕಿನ್ನಿಗೋಳಿ: ಮಹಿಳೆಯರು ಸಮಾಜ ಮುಖಿ ಕೆಲಸ ಕಾರ್ಯಗಳಿಂದ ತಾವು ಯಾರಿಗೂ ಕಡಿಮೆ ಇಲ್ಲ ಎಂಬಂತೆ ತೋರಿಸಿ ಕೊಡಬೇಕು ಸಮಾಜದ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರಿಗಿದ್ದ ಮೀಸಲಾತಿಯನ್ನು ಸದುಪಯೋಗ ಪಡಿಸಿ ಕೊಳ್ಳಬೇಕು ಎಂದು ಕಿನ್ನಿಗೋಳಿ ನಾರಾಯಣ ಗುರು ವಿದ್ಯಾ ಸಂಸ್ಥೆಯ ಪ್ರಿನ್ಸ್‌ಪಾಲ್ ಉಷಾ ಹೇಳಿದರು.
ಭಾರತ ಸರಕಾರ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ, ನೆಹರೂ ಯುವ ಕೇಂದ್ರ ಮಂಗಳೂರು, ಯುವಜನ ವಿಕಾಸ ಕೇಂದ್ರ ಮತ್ತು ನವಜ್ಯೋತಿ ಮಹಿಳಾ ಮಂಡಲ (ರಿ) ಪಂಜ ಕೊಯಿಕುಡೆ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ನವಜ್ಯೋತಿ ಮಹಿಳಾ ಮಂಡಲ ದ ವಠಾರದಲ್ಲಿ ನಡೆದ ವಿಶ್ವವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸ್ಥಳೀಯ ವಿದ್ಯಾರ್ಥಿಗಳಾದ ಚೈತ್ರಾ ಸಾಲ್ಯಾನ್ ಪಂಜ ಮತ್ತು ಸನಿಧಿ ವಿ ಶೆಟ್ಟಿ ಪಂಜ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಈ ಸಂದರ್ಭ ನವ ಜ್ಯೋತಿ ಮಹಿಳಾ ಮಂಡಲ ಉಪಾಧ್ಯಕ್ಷೆ ವಿಜಯ ಶೆಟ್ಟಿ ಪಂಜ, ಮೆನ್ನಬೆಟ್ಟು ಭ್ರಾಮರಿ ಮಹಿಳಾ ಮಂಡಲ ಅಧ್ಯಕ್ಷೆ ರೇವತಿ ಪುರುಶೋತ್ತಮ್ ಮತ್ತಿತರರು ಉಪಸ್ಥಿತರಿದ್ದರು.
ಕುಶಲಾ ಶೇಖರ್ ಸ್ವಾಗತಿಸಿ, ತಾರಾ ಬಿ ಶೆಟ್ಟಿ ವಂದಿಸಿದರು. ಶೈಲಾ ಎನ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Kinnigoli-01041605

Comments

comments

Comments are closed.

Read previous post:
Kinnigoli-01041603
ಗರ್ಭಿಣಿಯರಿಗೆ ಮಾಹಿತಿ ಹಾಗೂ ಶಿಶು ಪ್ರದರ್ಶನ

ಕಿನ್ನಿಗೋಳಿ: ಕಟೀಲು ಪ್ರಾಥಮಿಕ ಆರೋಗ್ಯ ಕೇಂದ್ರದ ಉಪಕೇಂದ ಏಳಿಂಜೆಯಲ್ಲಿ ಶ್ರೀ ದೇವಿ ಮಹಿಳಾ ಮಂಡಳದ ಸಹಯೋಗದಿಂದ ಗರ್ಭಿಣಿಯರಿಗೆ ಮಾಹಿತಿ ಹಾಗೂ ಶಿಶು ಪ್ರದರ್ಶನ ಕಾರ್ಯಕ್ರಮ ನಡೆಯಿತು. ಈ ಸಂದರ್ಭ...

Close