ವರ್ಷಾವಧಿ ಜಾತ್ರಾ ಮಹೋತ್ಸವ

ಕಿನ್ನಿಗೋಳಿ: ದೈವ ದೇವರ ಮೇಲೆ ಭಯ-ಭಕ್ತಿ ಇಟ್ಟರೆ ಮಾತ್ರ ನೆಮ್ಮದಿಯ ಜೀವನಕ್ಕೆ ಅದರ ಶಕ್ತಿ ಸಿಗುತ್ತದೆ ಎಂದು ಕಾರ್ನಾಡು ಹರಿಹರ ಕ್ಷೇತ್ರದ ಆಡಳಿತ ಮುಕ್ತೇಸರ ಅರವಿಂದ ಪೂಂಜ ಹೇಳಿದರು.
ಅತ್ತೂರು ಶ್ರೀ ಅರಸು ಕುಂಜಿರಾಯ ದೈವಸ್ಥಾನದಲ್ಲಿ ಸೋಮವಾರ ವರ್ಷಾವಧಿ ಜಾತ್ರಾ ಮಹೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಸಂದರ್ಭ ಅರಸು ಕುಂಜಿರಾಯ ದೈವಸ್ಥಾನದ ಮುಂಭಾಗದ ಬಾಕಿಮಾರುಗದ್ದೆಯನ್ನು ದಾನವಾಗಿ ನೀಡಿದ ವಾಮಯ್ಯ ಶೆಟ್ಟಿ ಅಂಗಡಿ ಮನೆ ಅತ್ತೂರು ಹಾಗೂ ದೈವಸ್ಥಾನದ ಒಳಾಂಗಣದ ಮೆಲ್ಚಾವಣಿಯ ದಾನಿಯಾದ ಅತ್ತೂರು ಭಂಡಾರ ಮನೆ ಆಶಾಲತಾ ನಾರಯಣ ಶೆಟ್ಟಿ, ರಾಜೇಶ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಅತ್ತೂರು ಕೆಮ್ರಾಲ್ ಕಿಲೆಂಜೂರು ಗ್ರಾಮದ ದಿವ್ಯ, ದೇವಿ ಪ್ರಸಾದ್ ಕುಂದರ್, ಸ್ವಾತಿ ಇವರಿಗೆ ವಿದ್ಯಾರ್ಥಿ ವೇತನ, ನಾಗಪ್ಪ ಮುಖಾರಿ ಅತ್ತೂರು ಪುನೂಡಿ, ಲಲಿತಾ ಮೂಲ್ಯ ಕಾಪಿಕಾಡ್, ರಮೇಶ್ ದೇವಾಡಿಗ ಸಾನದ ಮನೆ ಕಿಲೆಂಜೂರು ಇವರಿಗೆ ವೈದ್ಯಕೀಯ ಚಿಕಿತ್ಸೆಗೆ ಸಹಾಯ ಧನ ನೀಡಲಾಯಿತು,
ಪಂಜ ವಾಸುದೇವ ಭಟ್ ಆಶೀರ್ವಾಚನ ನೀಡಿದರು.
ಕಟೀಲು ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಮಂಡಳಿಯ ಸಂಚಾಲಕ ಕಲ್ಲಾಡಿ ದೇವಿ ಪ್ರಸಾದ್ ಶೆಟ್ಟಿ, ಲಯನ್ಸ್ ಕ್ಲಬ್ ಮುಲ್ಕಿ ಮಾಜಿ ಅದ್ಯಕ್ಷ ದೇವ ಪ್ರಸಾದ್ ಪುನರೂರು, ಗಣೇಶ್ ಶೆಟ್ಟಿ ಐಕಳ, ವಿಶ್ವನಾಥ ಶೆಟ್ಟಿ ಐಕಳ, ಗೋವಿಂದ ಶೆಟ್ಟಿ ಅತ್ತೂರು ಗುತ್ತು, ರಾಜೇಂದ್ರ ಶೆಟ್ಟಿ ಕುಡ್ತಿಮಾರಗುತ್ತು, ಆಡಳಿತ ಮಂಡಳಿ ಅಧ್ಯಕ್ಷ ಚರಣ್ ಜೆ ಶೆಟ್ಟಿ, ಶ್ರೀ ಅಖಿಲಾಂಡೇಶ್ವರೀ ಮಹಿಳಾ ಸೇವಾ ಸಮಿತಿಯ ಅಧ್ಯಕ್ಷೆ ಲೀಲಾ ಸುವರ್ಣ, ರಾಜೇಂದ್ರ ಶೆಟ್ಟಿ ಕೊಡೆತ್ತೂರು ಕೆಳಗಿನ ಮನೆ ಮತ್ತಿತರರು ಉಪಸ್ಥಿತರಿದ್ದರು.
ಪಸನ್ನ ಎಲ್ ಶೆಟ್ಟಿ ಅತ್ತೂರಗುತ್ತು ಪ್ರಸಾವಿಸಿದರು, ಸಾಯಿನಾಥ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Kinnigoli-01041601

Comments

comments

Comments are closed.

Read previous post:
Kinnigoli-29031601
Hero Show room in Kinnigoli

Kinnigoli: Hero Show room and authorised service centre innagurated herein kinnigoli in KinnigoliCommercial Enclave complex. Rev.Fr. Vincent Monteiro, Parish Priest of...

Close