ಸಮಾಜದ ಮುಂಚೂಣಿಗೆ ತರಬೇಕು

ಕಿನ್ನಿಗೋಳಿ: ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದವರನ್ನು ಸೇವಾ ಸಂಘ ಸಂಸ್ಥೆಗಳು ಕಾಳಜಿ ವಹಿಸಿ ಸಹಾಯ ಹಸ್ತ ನೀಡಿ ಸಮಾಜದ ಮುಂಚೂಣಿಗೆ ತರಬೇಕು ಎಂದು ಲಯನ್ಸ್ 317.ಡಿ.ವಲಯ 1 ರ ರಾಜ್ಯಪಾಲೆ ಎಮ್. ಕವಿತಾ ಶಾಸ್ತ್ರೀ ಹೇಳಿದರು.
ಕಿನ್ನಿಗೋಳಿ ಲಯನ್ಸ್ ಕ್ಲಬ್, ಲಯನೆಸ್ ಕ್ಲಬ್‌ಗೆ ಮಂಗಳವಾರ ಅಧಿಕೃತ ಭೇಟಿ ನೀಡಿ ಕಿನ್ನಿಗೋಳಿ ಚರ್ಚ್ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಸಂದರ್ಭ ಸುಮತಿ ಶೆಟ್ಟಿ ನಡುಗೋಡು ಅವರನ್ನು ಸಾಧಕಿ ನೆಲೆಯಲ್ಲಿ ಸನ್ಮಾನಿಸಲಾಯಿತು. ಪೊಂಪೈ ಪ್ರಾಥಮಿಕ ಶಾಲಾ ಗೌರವ ಶಿಕ್ಷಕಿಗೆ ಗೌರವ ಧನ ವಿತರಣೆ, ಹಾಗೂ ಭಿನ್ನ ಸಾಮರ್ಥ್ಯದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲಾಯಿತು.
ಮಾಜಿ ರಾಜ್ಯಪಾಲ ಡಾ. ಸಂತೋಷಕುಮಾರ್ ಶಾಸ್ತ್ರೀ, ವಲಯಾಧ್ಯಕ್ಷ ಓಸ್ವಾಲ್ಡ್ ಡಿಸೋಜ, ಪ್ರಾಂತ್ಯಾಧ್ಯಕ್ಷ ಯಾದವ ದೇವಾಡಿಗ, ಲಯನೆಸ್ ಜಿಲ್ಲಾಧ್ಯಕ್ಷೆ ಅರುಣ್ ಸೋಮಶೇಖರ್, ಜಿಲ್ಲಾ ಸಂಯೋಜಕ ವೇಣುಗೋಪಾಲ ಶೆಣೈ , ಲಯನ್ಸ್ ರಾಯಬಾರಿ ಲಾರೆನ್ಸ್ ಫೆರ್ನಾಂಡಿಸ್, ಮುಚ್ಚೂರು ಲಯನ್ಸ್ ಕ್ಲಬ್ ಅಧ್ಯಕ್ಷ ಅಶೋಕ್, ಮೂಲ್ಕಿ ಕ್ಲಬ್ ಅಧ್ಯಕ್ಷ ಉದಯ ಅಮೀನ್ , ಮಹಾಬಲ ರೈ, ಕಿನ್ನಿಗೋಳಿ ಲಯನೆಸ್ ಕ್ಲಬ್ ಅಧ್ಯಕ್ಷೆ ಪ್ರೇಮಲತಾ ಶೆಟ್ಟಿ , ಸವಿತಾ ಪಿ. ಶೆಟ್ಟಿ , ಶಾಂಭವಿ ಶೆಟ್ಟಿ ಉಪಸ್ಥಿತರಿದ್ದರು.
ಕಿನ್ನಿಗೋಳಿ ಲಯನ್ಸ್ ಕ್ಲಬ್ ಅಧ್ಯಕ್ಷ ಸುಧಾಕರ ಶೆಟ್ಟಿ ಸ್ವಾಗತಿಸಿ, ಕಾರ್ಯದರ್ಶಿ ಪುರುಷೋತ್ತಮ ಶೆಟ್ಟಿ ವರದಿ ವಾಚಿಸಿದರು. ಜಗದೀಶ ಹೊಳ್ಳ ಪರಿಚಯಿಸಿದರು. ವಲೇರಿಯನ್ ಸಿಕ್ವೇರ ಕಾರ್ಯಕ್ರಮ ನಿರೂಪಿಸಿದರು.

Kinnigoli-01041602

Comments

comments

Comments are closed.

Read previous post:
Kinnigoli-01041601
ವರ್ಷಾವಧಿ ಜಾತ್ರಾ ಮಹೋತ್ಸವ

ಕಿನ್ನಿಗೋಳಿ: ದೈವ ದೇವರ ಮೇಲೆ ಭಯ-ಭಕ್ತಿ ಇಟ್ಟರೆ ಮಾತ್ರ ನೆಮ್ಮದಿಯ ಜೀವನಕ್ಕೆ ಅದರ ಶಕ್ತಿ ಸಿಗುತ್ತದೆ ಎಂದು ಕಾರ್ನಾಡು ಹರಿಹರ ಕ್ಷೇತ್ರದ ಆಡಳಿತ ಮುಕ್ತೇಸರ ಅರವಿಂದ ಪೂಂಜ ಹೇಳಿದರು....

Close