ಸುರತ್ಕಲ್ ಟೋಲ್ ಗೇಟ್ ಮತ್ತೆ ಗೂಂಡಾಗಿರಿ

ಸುರತ್ಕಲ್: ಮಂಗಳೂರಿನ ಸುರತ್ಕಲ್ ಎನ್‌.ಐ.ಟಿ.ಕೆ ಟೋಲ್‌ಗೇಟ್‌ನಲ್ಲಿ ಟೋಲ್‌ಶುಲ್ಕ ಹೆಚ್ಚಿಸಿ ಇಬ್ಬರು ಖಾಸಗಿ ಬಸ್ ನಿರ್ವಾಹಕರಿಗೆ ಟೋಲ್‌ಗೇಟ್ ಸಿಬ್ಬಂದಿ ಅಡ್ಡಾಡಿಸಿ ಥಳಿಸಿರುವ ಘಟನೆ ಶುಕ್ರವಾರ ನಡೆದಿದೆ.
ಸುರತ್ಕಲ್ ಸಮೀಪದ ಎನ್.ಐ.ಟಿ.ಕೆ ಬಳಿ ನಿರ್ಮಾಣಗೊಂಡಿರುವ ಟೋಲ್ ಗೇಟ್ ಗೆ ಗ್ರಹಚಾರ ಸರಿ ಇದ್ದಂತೆ ಕಾಣುದಿಲ್ಲ ಪ್ರಾರಂಭದಿಂದಲ್ಲೂ ಒಂದಲ್ಲ ಒಂದು ಸಮಸ್ಯೆ ಎದುರಾಗುತ್ತ ಇದೆ. ಕಾರ್ಕಳದಿಂದ ಮಂಗಳೂರಿಗೆ ಸಂಚರಿಸುವ ಮರೋಳಿ ಬಸ್ ನಿರ್ವಾಹಕ ಎನ್‌ಐಟಿಕೆ ಟೋಲ್‌ಗೇಟ್‌ನಲ್ಲಿ 75 ರೂ. ಶುಲ್ಕ ನೀಡಿದ್ದರು. ಬಳಿಕ ಹಿಂದಿರುಗುತ್ತಿದ್ದ ವೇಳೆ ಶುಲ್ಕ ಮತ್ತೆ 75 ರೂ. ನೀಡುವಂತೆ ಟೋಲ್ ಗೇಟ್ ಸಿಬಂಧಿ ಕೇಳಿದ್ದಾರೆ ಆತ ಕೊಡಲು ಒಪ್ಪದಿದ್ದಾಗ, ಮಾತಿನ ಚಕಮಕಿ ನಡೆದು ಏಕಾಏಕಿ ಬಸ್‌ನ ನಿರ್ವಾಹಕ ಪ್ರವೀಣ್ ಎಂಬಾತನಿಗೆ ಅಟ್ಟಾಡಿಸಿ ಥಳಿಸಿದ್ದು ಮಾತ್ರವಲ್ಲದೆ ಇನ್ನೊಂದು ಬಸ್‌ ನಿರ್ವಹಕನಿಗೂ ಥಳಿಸಲಾಗಿದೆ ಎಂದು ಬಸ್ ಆರೋಪಿಸಿದ್ದಾರೆ. ಕೂಡಲೆ ಬಸ್ ನಿರ್ವಾಹಕರು ಬಸ್ ಚಾಲಕ ಮಾಲಕರ ಸಂಘದೊಂದಿಗೆ ಸೇರಿಕೊಂಡು ಏಕಾಏಕಿ ಖಾಸಗಿ ಬಸ್‌ಗಳನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸಿ ಪತ್ರಿಭಟನೆ ನಡೆಸಿದರು. ಉಡುಪಿ, ಕಾರ್ಕಳ, ಕಿನ್ನಿಗೋಳಿ ಗಳಿಂದ ಮಂಗಳೂರಿಗೆ ಸಂಚರಿಸುವ ಎಲ್ಲಾ ಬಸ್ ಗಳನ್ನು ರಸ್ತೆ ಪಕ್ಕ ನಿಲ್ಲಿಸಿ, ಚಾಲಕ ನಿರ್ವಹಕ ಮತ್ತು ಮಾಲಕರು ಸುರತ್ಕಲ್ ಟೋಲ್ ಬಳಿ ಜಮಾಯಿಸಿದರು, ಪೊಲೀಸರು ಬಸ್ ಚಾಲಕ ಮಾಲಕರನ್ನು ಸಮಾದಾನ ಪಡಿಸಲು ಪ್ರತ್ನಿಸಿದರೂ, ಟೋಲ್‌ಗೇಟ್‌ನ ಗುತ್ತಿಗೆದಾರ ಉದಯ ಸಿಂಗ್ ಸ್ಥಳಕ್ಕೆ ಬರುವ ತನಕ ಯಾವುದೇ ಕಾರಣಕ್ಕೂ ಬಸ್ ಸಂಚಾರ ಮಾಡುದಿಲ್ಲ ಎಂದು ಪಟ್ಟು ಹಿಡಿದರು, ಈ ಮದ್ಯೆ ಲಘು ಲಾಟಿ ಚಾರ್ಜ್ ನಡೆಯಿತು. ಟೋಲ್ ಗೇಟ್ ಶುಲ್ಕದಲ್ಲಿ ರಿಯಾಯಿತಿ ನೀಡುವಂತೆ ಬಸ್ ಮಾಲಕರು ಹಲವು ಬಾರಿ ಮನವಿ ಸಲ್ಲಿಸಿದ್ದು, ಈ ಬಗ್ಗೆ ಸಂಭಂದ ಪಟ್ಟವರಿಗೂ ತಿಳಿಸಲಾಗಿದೆ. ಈ ಬಗ್ಗೆ ಸಭೆಯನ್ನು ಕರೆಯಲಾಗಿದ್ದು ಸಭೆಗೆ ಗುತ್ತಿಗೆದಾರ ಉದಯ ಸಿಂಗ್ ಗೈರು ಹಾಜರಾದ ಕಾರಣ ಯಾವುದೇ ನಿರ್ಣಯ ತೆಗೆದುಕೊಳ್ಳಲಾಗಲಿಲ್ಲ ಹಲವು ಬಾರಿ ಟೋಲ್ ಗೇಟ್ ಸಿಬ್ಬಂದಿಗಳಿಂದ ಬಸ್ ನಿರ್ವಹಕರಿಗೆ ಹಲ್ಲೆ ನಡೆದಿತ್ತು, ಆದರೆ ಇದುವರೆಗೆ ಸಮಸ್ಯೆ ಪರಿಹಾರವಾಗದೆ ಉಳಿದಿದೆ, ಜನಪ್ರತಿನಿಧಿಗಳು ಸರಿಯಾಗಿ ಸ್ಪಂದಿಸದ ಕಾರಣ ಈ ಸಮಸ್ಯೆ ಸಮಸ್ಯೆಯಾಗಿಯೇ ಉಳಿದಿದೆ.

ಪ್ರಯಾಣಿಕರ ಪರದಾಟ
ಸಂಚಾರ ಸಂಪೂರ್ಣ ಸ್ಥಗಿತಗೊಂಡ ಕಾರಣ ಪ್ರಯಾಣಿಕರು ಪರದಾಡಬೇಕಾಯಿತು, ದೂರದೂರಿಗೆ ಹೋಗಬೇಕಾದವರು, ಸರಕಾರಿ ಬಸ್, ಮತ್ತು ಅಟೋಗಳನ್ನು ಅವಲಂಬಿಸಬೇಕಾಗಿ ಬಂತು, ಘಟನೆ ಬೆಳಿಗ್ಗೆ 10.30 ಕ್ಕೆ ನಡೆದಿದ್ದು, ಒಂದು ವೇಳೆ ಮೊದಲು ನಡೆದಿದ್ದರೆ, ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ತೊಂದರೆ ಆಗುವ ಸಾದ್ಯತೆ ಇತ್ತು.

ಟೋಲ್ ಗೇಟ್ ಸಿಬಂದಿಗಳಿಂದ ಹಿಂದಿನಿಂದಲೂ ತೊಂದರೆ ಆಗುತ್ತಿದೆ, ಈ ಹಿಂದೆಯೂ ಹಲ್ಲೆ ನಡೆದಿತ್ತು ಪ್ರಯಾಣಿಕರಿಗೆ ಯಾವುದೇ ತೊಂದರೆ ಆಗಬಾರದು ಎಂಬ ಉದ್ದೇಶದಿಂದ ಬಸ್ ಸ್ಥಗಿತಗೊಳಿಸಲಿಲ್ಲ, ಆದರೆ ಈಗ ಇವರ ವರ್ತನೆ ಮಿತಿ ಮೀರಿದೆ, ಬಸ್ ಗಳಿಗೆ ದರದಲ್ಲಿ ವಿನಾಯತಿ ನೀಡುವಂತೆ ಟೋಲ್ ಗೇಟ್ ಗುತ್ತಿಗೆದಾರ ಉದಯ್ ಸಿಂಗ್ ಗೆ ಹಲವು ಬಾರಿ ಮನವಿ ಸಲ್ಲಿಸಿದ್ದೇವೆ. ಮಾತುಕತೆಗೆ ಬರುತ್ತೇನೆ ಎಂದು ಹೇಳಿ ಹಲವು ಬಾರಿ ಕೈ ಕೊಟ್ಟಿದ್ದಾರೆ, ಸಮಸ್ಯೆ ಬಗೆಹರಿಯದಿದ್ದಲ್ಲಿ ಬಸ್ ಸ್ಥಗಿತಗೊಳಿಸಿ ನಿರಂತರ ಹೋರಾಟ ನಡೆಸುತ್ತೇವೆ
ಬಾಸ್ಕರ ಪೂಜಾರಿ, ಕಿನ್ನಿಗೋಳಿ ಬಸ್ ಚಾಲಕ ನಿರ್ವಾಹಕರ ಸಂಘದ ಅಧ್ಯಕ್ಷ

Kinnigoli-010416010

Kinnigoli-010416011

Comments

comments

Comments are closed.

Read previous post:
Kinnigoli-01041609
ದೇವಾಲಯಗಳನ್ನು ಅಭಿವೃದ್ಧಿಪಡಿಸುವುದು ಕರ್ತವ್ಯ

ಹಳೆಯಂಗಡಿ: ಜೀವನದ ಉನ್ನತಿಗೆ ಪೂರಕವಾದ ಶಾಂತಿ ಸಮಾಧಾನಗಳು ಹಾಗೂ ಧಾರ್ಮಿಕ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ನೀಡುವ ದೇವಾಲಯಗಳನ್ನು ಅಭಿವೃದ್ಧಿಪಡಿಸುವುದು ಸಾರ್ವಜನಿಕರ ಆದ್ಯ ಕರ್ತವ್ಯವಾಗಿದೆ ಎಂದು ಮೂಲ್ಕಿ ಸೀಮೆ...

Close