ಉಲ್ಲಂಜೆ ಯುವಶಕ್ತಿ ಫ್ರೆಂಡ್ಸ್ ವಾರ್ಷಿಕೋತ್ಸವ

ಕಿನ್ನಿಗೋಳಿ: ಸಮಾಜದ ಒಳಿತಿಗಾಗಿ ಯುವ ಜನರು ಕಾರ್ಯಪ್ರವೃತ್ತರಾಗಿ ಅಭಿವೃದ್ದಿಪರ ಸಮಾಜ ಕಟ್ಟುವಲ್ಲಿ ಎಲ್ಲರನ್ನೂ ಪ್ರೇರೆಪಿಸಬೇಕು. ಎಂದು ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಉಮಾನಾಥ ಕೋಟ್ಯಾನ್ ಹೇಳಿದರು.
ಉಲ್ಲಂಜೆ ಯುವಶಕ್ತಿ ಫ್ರೆಂಡ್ಸ್ ವಾರ್ಷಿಕೋತ್ಸವದ ಅಂಗವಾಗಿ ಶನಿವಾರ ನಡೆದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಸಂದರ್ಭ ರಾಷ್ಟ್ರೀಯ ಬಾಲ್‌ಬ್ಯಾಡ್ಮಿಂಟನ್ ಕ್ರೀಡಾಪಟು ಅನನ್ಯ ಉಲ್ಲಂಜೆ ಅವರನ್ನು ಸನ್ಮಾನಿಸಲಾಯಿತು ಹಾಗೂ ಅನಾರೋಗ್ಯದಿಂದ ಬಳಲುತ್ತಿರುವ ಇಬ್ಬರಿಗೆ ವೈದ್ಯಕೀಯ ಚಿಕಿತ್ಸೆಗಾಗಿ ಧನ ಸಹಾಯ ನೀಡಲಾಯಿತು.
ಕಟೀಲು ದೇವಳ ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ ಆಶೀರ್ವಚನಗೈದರು.
ಅದಾನಿ ಗ್ರೂಪ್ ಯು. ಪಿ. ಸಿ.ಎಲ್ ಮುಖ್ಯಸ್ಥ ಕಿಶೋರ್ ಆಳ್ವ, ಉದ್ಯಮಿ ಸಂದೀಪ್ ಶೆಟ್ಟಿ ಸಚ್ಚರ ಪರಾರಿ, ಮುಂಡ್ಕೂರು ಕೋರಿಬೆಟ್ಟು ಗುತ್ತು ಸುರೆಂದ್ರ ಎಸ್. ಶೆಟ್ಟಿ , ಕಟೀಲು ಗ್ರಾ. ಪಂ. ಉಪಾಧ್ಯಕ್ಷ ಕಿರಣ್ ಕುಮಾರ್ ಶೆಟ್ಟಿ , ಉದ್ಯಮಿ ಗಿರೀಶ್ ಶೆಟ್ಟಿ, ವಾಸುದೇವ ಆಚಾರ್ಯ ಬಲವಿನ ಗುಡ್ಡೆ , ಕೊಡೆತ್ತೂರು ದೇವಸ್ಯ ಮಠದ ವೇದವ್ಯಾಸ ಉಡುಪ, ಉದ್ಯಮಿ ಜೊಸ್ಸಿ ಪಿಂಟೊ, ಜಯರಾಮ ಮುಕ್ಕಾಲ್ದಿ ಭಂಡಾರ ಮನೆ, ಮೆನ್ನಬೆಟ್ಟು ಗ್ರಾ. ಪಂ. ಅಧ್ಯಕ್ಷೆ ಸರೋಜಿನಿ ಸುಧಾಕರ್, ಗ್ರಾ. ಪಂ. ಸದಸ್ಯರಾದ ದಯಾನಂದ ಶೆಟ್ಟಿ , ಮಲ್ಲಿಕಾ ಆಚಾರ್ಯ, ಲಕ್ಷ್ಮೀ ಪೂಜಾರ್ತಿ , ಉಲ್ಲಂಜೆ ಯುವಶಕ್ತಿ ಫ್ರೆಂಡ್ಸ್ ಅಧ್ಯಕ್ಷ ವಿನೀತ್ ಅಂಚನ್ ಉಪಸ್ಥಿತರಿದ್ದರು. ಪ್ರಕಾಶ್ ಆಚಾರ್ ಸ್ವಾಗತಿಸಿದರು. ಸಂದೇಶ್ ಶೆಟ್ಟಿ ವರದಿ ವಾಚಿಸಿದರು.

Kinnigoli-04041603

Comments

comments

Comments are closed.

Read previous post:
Kinnigoli-04041602
ಉಲ್ಲಂಜೆ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಉಲ್ಲಂಜೆ ಯುವ ಶಕ್ತಿ ಫ್ರೆಂಡ್ಸ್ ಸಂಸ್ಥೆಯ ೧೫ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಶನಿವಾರ ಸಂಘದ ವಠಾರದಲ್ಲಿ ನಡೆಯಿತು.  

Close