ಎ. 6 ರಂದು ಸಹಸ್ರ ಚಂಡಿಕಾ ಯಾಗದ ಪೂರ್ಣಹುತಿ

ಕಿನ್ನಿಗೋಳಿ: ಶ್ರೀ ಚಂದ್ರಶೇಖರ ಚಾರಿಟೇಬಲ್ ಟ್ರಸ್ಟ್ ಮತ್ತು ಎಜುಕೇಷನ್ ಟ್ರಸ್ಟ್ (ರಿ), ವಿಶ್ವಮಾನವ ಧರ್ಮ ಪೀಠ ಟ್ರಸ್ಟ್ (ರಿ) ಇವರ ಆಶ್ರಯದಲ್ಲಿ ಕಟೀಲು ಗಿಡಿಗೆರೆ ಶ್ರೀನೀಕೇತನದಲ್ಲಿ ಎಪ್ರಿಲ್ 6 ರಂದು ಸಹಸ್ರ ಚಂಡಿಕಾ ಯಾಗದ ಪೂರ್ಣಹುತಿ , ಎಪ್ರಿಲ್ 7 ರಂದು ಸುದರ್ಶನ ಯಾಗ, ಎಪ್ರಿಲ್ 8 ರಂದು ಲಲಿತಾ ಯಾಗ ನಡೆಯಲಿದೆ ಎಂದು ಎಂದು ಶ್ರೀ ಜಗದ್ಗುರು ಕಾಶೀ ವಿಶ್ವಜ್ಞಾನ ಸಿಂಹಾಸನ ಮಹಾ ಪೀಠದ ಶ್ರೀಶ್ರೀ ಡಾ. ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಕಟೀಲಿನಲ್ಲಿ ಸೋಮವಾರ ನಡೆಸಿದ ಸುದ್ದಿಗೋಷ್ಟಿಯಲ್ಲಿ ಹೇಳಿದರು.
ನಮ್ಮ ದೇಶದ ಪ್ರತೀ ಗ್ರಾಮದಲ್ಲಿ ದೇವಳಗಳಿವೆ. ಹಿಂದು ಸಂಸ್ಕೃತಿಯಲ್ಲಿ ಭೇಧ ಭಾವವಿಲ್ಲ ಸನಾತನ ಶೈವ ಧರ್ಮ ಧರ್ಮಾಚರಣೆಯಲ್ಲಿ ಪುರುಷ ಹಾಗೂ ಮಹಿಳೆಯರಿಗೆ ಸಮಾನ ಸ್ಥಾನ ನೀಡಿದೆ. 150 ಮಂದಿ ಮಕ್ಕಳು ತಾಯಂದಿರು ಮತ್ತು ವಟುಗಳು ಹದಿನಾರು ಸಾವಿರ ರುದ್ರ ಪಾರಾಯಣ ಹಾಗೂ ಹತ್ತು ಸಾವಿರ ಲಲಿತ ಲಲಿತಾ ಸಹಸ್ರನಾಮ ಪಠಣ ಇಲ್ಲಿ ಮಾಡಿದ್ದಾರೆ. ಪತ್ರಕರ್ತ ಡಿ. ಸಿ. ನಾಗಭೂಷಣ ಅವರ ಸಂಘಟನೆಯಲ್ಲಿ ಲೋಕ ಕಲ್ಯಾಣರ್ಥವಾಗಿ ಹಲವು ಯಾಗಗಳು ಕರ್ನಾಟಕ, ಕೇರಳ ಹಾಗೂ ವಿವಿಧ ರಾಜ್ಯಗಳಲ್ಲಿ ನಡೆದಿದ್ದು ಈ ಬಾರಿ ವಿಶೇಷ ಯಾಗಗಳು ಕಟೀಲಿನ ದಿವ್ಯ ಸನ್ನಿಧಿಯಲ್ಲಿ ನಡೆಯುತ್ತಿದೆ. ಯಜ್ಞಗಳು ಕೇವಲ ಹೋಮ ಹವನಗಳಾಗಿರದೆ ಆರೋಗ್ಯ ಹಾಗೂ ಲೋಕ ಸುಭೀಕ್ಷೆಗಾಗಿ ನಡೆಯುತ್ತಿದೆ. ಶ್ರೀ ಶಿವಯೋಗಿ ಶಿವಾಚಾರ್ಯ ವಿರಚಿತ: ಶ್ರೀಸಿದ್ಧಾಂತಶಿಖಾಮಣಿಃ ಪಾರಾಯಣ ಗ್ರಂಥ: ಇಂಗ್ಲೀಷ್, ನೇಪಾಳ ರಷ್ಯಾ ಬಾಷೆ ಸಮೇತ 16 ಭಾಷೆಗಳಲ್ಲಿ ಲೋಕಾರ್ಪಣೆಗೊಂಡಿದೆ. ಎಂದು ತಿಳಿಸಿದರು.
ಬುಧವಾರ ನಡೆಯುವ ಸಹಸ್ರ ಚಂಡಿಕಾಯಾಗದಲ್ಲಿ ಫಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶ ಸ್ವಾಮಿಜಿ , ಅದಮಾರು ಮಠದ ಶ್ರೀ ಈಶಪ್ರಿಯ ಸ್ವಾಮಿಜಿ, ಕಟೀಲು ದೇವಳದ ಮೊಕ್ತೇಸರ ಕೆ. ವಾಸುದೇವ ಆಸ್ರಣ್ಣ ಮತ್ತಿತರರು ಭಾಗವಹಿಸಲಿರುವರು ಎಂದು ಸಂಘಟಕ ಡಿ. ಸಿ. ನಾಗಭೂಷಣ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಹಲಗೂರು ಮಠದ ಶ್ರೀ ಷ.ಬ್ರ. ರುದ್ರಮುನಿ ಶಿವಾಚಾರ್ಯ ಸ್ವಾಮಿ, ಕಟೀಲು ದೇವಳ ಅರ್ಚಕ ದೇವಿಕುಮಾರ ಆಸ್ರಣ್ಣ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Kateel--05031607

Comments

comments

Comments are closed.

Read previous post:
Kateel--05031606
ಕಟೀಲು ಆರು ಮೇಳದ 35 ಕಲಾವಿದರಿಗೆ ಸಮ್ಮಾನ

 ಕಿನ್ನಿಗೋಳಿ: ಯಕ್ಷಗಾನ ಕಲಾವಿದರನ್ನು ಗುರುತಿಸಿ ಪುರಸ್ಕೃರಿಸಿದಾಗ ಕಲೆಯ ಬೆಳವಣಿಗೆಯಲ್ಲಿ ಸಹಕಾರಿಯಾಗುತ್ತದೆ. ಎಂದು ಮೀನುಗಾರಿಕಾ ಹಾಗೂ ಯುವಜನ ಕ್ರೀಡಾ ಸಚಿವ ಅಭಯಚಂದ್ರ ಜೈನ್ ಹೇಳಿದರು. ಕಟೀಲು ದಿ. ಗೋಪಾಲಕೃಷ್ಣ ಆಸ್ರಣ್ಣ...

Close