ಮೂಲ್ಕಿ: ಶಿಕ್ಷಣದಿಂದ ಅಭಿವೃದ್ಧಿ ಸಾಧ್ಯ

ಮೂಲ್ಕಿ: ವಿದ್ಯಾರ್ಥಿಗಳು ಶೃಜನಶೀಲ ವ್ಯಕ್ತಿತ್ವಸಹಿತವಾಗಿ ಪ್ರಾಪಂಚಿಕ ಜ್ಞಾನ ಆಗೂ ಆಧುನಿಕ ತಂತ್ರಜ್ಞಾನಗಳನ್ನು ಸಕಾರಾತ್ಮಕವಾಗಿ ಬಳಸಿಕೊಂಡು ಶೈಕ್ಷಣಿಕ ಬದುಕಿನಲ್ಲಿ ಉನ್ನತಿ ಕಂಡುಕೊಳ್ಳಬೇಕು ಎಂದು ಮಣಿಪಾಲ ವಿಶ್ವವಿದ್ಯಾನಿಲಯದ ಕುಲಸಚಿವ  ಡಾ.ನಾರಾಯಣ ಸಭಾಹಿತ್ ಹೇಳಿದರು.
ಮೂಲ್ಕಿ ವಿಜಯಾ ಕಾಲೇಜಿನ ವಾರ್ಷಿಕೋತ್ಸವ ಪ್ರಯುಕ್ತ ನಡೆದ ಸ್ಥಾಪಕರ ದಿನಾಚರಣೆಯ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಡಾ.ಟಿ.ಎಂ.ಎ ಪೈಯವರಂತ ಮಹಾನ್ ಸಾಧಕರು ಶಿಕ್ಷಣದಿಂದ ಅಭಿವೃದ್ಧಿ ಸಾಧ್ಯ ಎಂದು ಕಂಡುಕೊಂಡು ವಿವಿದೆಡೆ ಶಿಕ್ಷಣ ಸಂಸ್ಥೆಗಳನ್ನು ಸಾಪಿಸಿ ಪ್ರದೇಶದ ಅಭಿವೃದ್ಧಿಗೆ ಕಾರಣೀಭೂತರಾಗಿದ್ದಾರೆ ವಿದ್ಯಾರ್ಥಿಗಳು ಇಂತಹಾ ಮಹಾನ್ ವ್ಯಕ್ತಿಗಳ ಆದರ್ಶ ಮೈಗೂಡಿಸಿಕೊಳ್ಳಬೇಕು ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಜಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷೆ ಶಮಿನಾ ಆಳ್ವಾ ವಹಿಸಿದ್ದರು.
ಈ ಸಂದರ್ಭ ನೂತನವಾಗಿ ಆಯ್ಕೆಯಾದ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷರು ಹಾಗೂ ಸದಸ್ಯರಿಗೆ, ನಿವೃತ್ತಿಹೊಂದಿದ ಭೋಧಕ ಹಾಗೂ ಭೋದಕೇತರ ಸಿಬ್ಬಂದಿಗಳಿಗೆ , ಪಿಎಚ್.ಡಿ ಸಾಧಕರಾದ ಢಾ.ಶೈಕಜಾ ವೈವಿ(ಕನ್ನಡ), ಡಾ.ಅನುಸೂಯಾ ಕರ್ಕೇರಾ(ಹಿಂದಿ), ಡಾ.ದೀಪಿಕಾ (ಹಿಂದಿ), ಡಾ.ಪೂಜಾ(ರಸಾಯನ ಶಾಸ್ತ್ರ).ಎಂ.ಎಸ್ಸಿ ಯಲ್ಲಿ ಪ್ರಥಮ ರಾಯಾಂಕ್ ಗಳಿಸಿದ ನಿಮಿತಾ ಮತ್ತು ವಿಶ್ವವಿದ್ಯಾನಿಲಯ ಪರಿಕ್ಷೆಯಲ್ಲಿ ಉತ್ತಮ ಸಾಧನೆಮಾಡಿದ ದಿವ್ಯಾ ಮತ್ತು ಉಷಾ ಕಾಮತ್ ರವರನ್ನು ಗೌರವಿಸಲಾಯಿತು. ದತ್ತಿ ನಿಧಿ ಹಾಗೂ ವಿಜಯಾ ಕಥಾ ನತ್ತು ಕವಿತಾ ಪ್ರತಿಭಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪದವಿ ಕಾಲೇಜು ಪ್ರಾಂಶುಪಾಲ ಪ್ರೊ.ಕೆ.ಆರ್.ಶಂಕರ್, ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಾದ ಪಮೀದಾ ಬೇಗಂ,  ಆಡಳಿಯ ಮಂಡಳಿ ಸದಸ್ಯರಾದ ಡಾ.ಕೆ.ಪಿ.ಮಧ್ಯಸ್ಥಮ ಹರಿಕೃಷ್ಣ ಪುನರೂರು, ಮಾಧವ ಸನಿಲ್,ವಿ.ಸತೀಶ್ ಕಾಮತ್,ಡಾ.ಸುರೇಶ್ ಅರಾಹ್ನ,ಡಾ. ಬಿ.ಹೆಚ್.ರಾಘವರಾವ್ ಉಪಸ್ಥಿತರಿದ್ದರು
ಕಾಲೇಜು ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ.ಹೆಚ್.ಜಿ.ನಾಗರಾಜ ನಾಯಕ್ ಸ್ವಾಗತಿಸಿದರು. ಕಾಲೇಜು ಪ್ರಾಂಶುಪಾಲ ಪ್ರೊ.ಕೆ.ಆರ್.ಶಂಕರ್ ವರದಿ ಮಂಡಿಸಿದರು, ಕಾಲೇಜು ಅರ್ಥಶಾಸ್ತ್ರ ವಿಭಾಗ ಮುಖ್ಯಸ್ಥ ಪ್ರೊ.ಚೆನ್ನ ಪೂಜಾರಿ ನಿರೂಪಿಸಿದರು. ಭೌತಶಾಸ್ತ್ರ ವಿಭಾಗ ಮುಖ್ಯಸ್ಥ ಪ್ರೊ.ವೆಂಕಟೇಶ ಭಟ್ ವಂದಿಸಿದರು.

Mulkli-05031603

Comments

comments

Comments are closed.

Read previous post:
Mulkli-05031602-jpg
ಶ್ರೀ ಜಾರಂದಾಯ ವಾರ್ಷಿಕ ನೇಮೋತ್ಸವ

ಮೂಲ್ಕಿ: ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಸಂಭಂದಿಸಿದ ಕೊಳಚಿಕಂಬಳ ಶ್ರೀ ಜಾರಂದಾಯ ದೈವಸ್ಥಾನದಲ್ಲಿ ವಾರ್ಷಿಕ ನೇಮೋತ್ಸವ ಜರುಗಿತು.

Close