ಮೂಲ್ಕಿ: ಶಿಕ್ಷಣಕ್ಕೆ ಹಾಗೂ ಕ್ರೀಡೆಗೆ ಆದ್ಯತೆ

ಮೂಲ್ಕಿ: ವಿದ್ಯಾರ್ಥಿಗಳು ಉತ್ತಮ ಸಂಸ್ಕಾರವಂತರಾಗಿ ಶಿಕ್ಷಣಕ್ಕೆ ಹಾಗೂ ಕ್ರೀಡೆಗೆ ಆದ್ಯತೆ ನೀಡುವ ಮೂಲಕ ಶೈಕ್ಷಣಿಕ ಉನ್ನತಿಗಳಿಸಿಕೊಳ್ಳಬೇಕು ಎಂದು ಹಿರಿಯ ಸಂಘಟಕ ಕೈಗಾರಿಕೋದ್ಯಮಿ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು.
ಮೂಲ್ಕಿ ವಿಜಯಾ ಕಾಲೇಜು ವಾರ್ಷಿಕೋತ್ಸವದ ಪ್ರಯುಕ್ತ ನಡೆದ ಎಸೋಸಿಯೇಶನ್ ದಿನಾಚರಣೆಯ ಮುಖ್ಯ ಅತಿಥಿಯಾಗಿ ಮಾತನಾಡಿದರು.
ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಪಠ್ಯಕ್ಕೆ ಪೂರಕವಾಗಿ ಪ್ರಾಪಂಚಿಕ ಜ್ಞಾನಗಳಿಕೆಯೊಂದಿಗೆ ಉತ್ತಮ ಪ್ರಜೆಯಾಗುವ ನಿಟ್ಟಿನಲ್ಲಿ ಸಂಸ್ಕಾರ ಭರಿತರಾಗಿ ಮುನ್ನಡೆಯಬೇಕು ನಿಮ್ಮಲ್ಲಿರುವ ಉತ್ತಮ ಗುಣ ಮೌಲ್ಯಗಳು ಭವಿಷ್ಯದಲ್ಲಿ ಒಳ್ಳೆಯ ನಾಯಕರನ್ನಾಗಿ ರೂಪಿಸುತ್ತದೆ ಎಂದರು.
ಅತಿಥಿಯಾಗಿದ್ದ ಹಿರಿಯ ಪತ್ರಕರ್ತರಾದ ವಿಜಯಲಕ್ಷ್ಮಿ ಶಿಬರೂರು ಮಾತನಾಡಿ,ಕಠಿಣ ಶ್ರಮ ಗುರಿ ಸಾಧನೆಯ ಛಲ ಹಾಗೂ ಏಕಾಗ್ರತೆ ವಿದ್ಯಾರ್ಥಿಗಳನ್ನು ಜೀವನದ ಉತ್ತುಂಗಕ್ಕೆ ತಲುಪಿಸಬಲ್ಲವು. ಪೂರ್ವ ನಿರ್ಧರಿತ ಗುರಿಯ ಬಗ್ಗೆ ಮಾನಸಿಕವಾಗಿ ದೃಢತೆ ಗಳಿಸಿಕೊಂಡಲ್ಲಿ ಸಾಧಕರಾಗಲು ಸಾಧ್ಯ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಕಾರ್ಕಳ ಸಿಎಸ್‌ಐ ಬೆಥನಿ ಚರ್ಚಿನ ಸಭಾಪಾಲಕರಾದ ರೆ.ಗೋಲ್ಡಿನ್.ಜೆ.ಬಂಗೇರಾ ವಹಿಸಿದ್ದರು.
ವಿಜಯಾ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷೆ ಶಮಿನಾ ಆಳ್ವಾ, ಪ್ರಾಂಶುಪಾಲರಾದ ಪ್ರೊ.ಕೆ.ಆರ್.ಶಂಕರ್,ವಿದ್ಯಾರ್ಥಿಕ್ಷೇಮಪಾಲನಾಧಿಕಾರಿ ಪ್ರೊ.ಹೆಚ್.ಜಿ.ನಾಗರಾಜ ನಾಯಕ್, ವಿದ್ಯಾರ್ಥಿ ಸಂಘಗಳ ಅಧ್ಯಕ್ಷ ಶೋಧನ್ ಯು.ಶೆಟ್ಟಿ ಕಾರ್ಯದರ್ಶಿಗಳಾದ ಬೆನ್ಸನ್ ಡಿಸೋಜಾ (ನೇವಿ), ದರ್ಶನ್ ನಾಯ್ಕ್ (ಆರ್ಮಿ), ಕಾವ್ಯಾ(ಎನ್‌ಎಸ್‌ಎಸ್), ಶ್ವೇತಾ (ಕ್ರೀಡೆ), ಗರೇನ್ ಸಲ್ಡಾನಾ (ವಿಜ್ಞಾನ ಸಂಘ), ಧೀರಜ್ ಸುವರ್ಣ(ಕಂಪ್ಯೂಟರ್ ವಿಭಾಗ), ರಾಹುಲ್(ಲಿಟರರಿ), ವಿಜೇತಾ ಕಾಮತ್ (ಭಿತ್ತಿಪತ್ರ ವಿಭಾಗ),ಮುರಳಿ(ವಾಣಿಜ್ಯ ಸಂಘ),ಅಶ್ವಿನಿ (ಮಾನವಿಕ ಸಂಘ),ಶರತ್ ಉಪಾದ್ಯಾಯ(ಯಕ್ಷಗಾನ),ದುರ್ಗಾಪ್ರಸಾದ್((ಫೈನ್ ಆರ್ಟ್) ಉಪಸ್ಥಿತರಿದ್ದರು.
ಈ ಸಂದರ್ಭ ಸಾಧಕ ವಿದ್ಯಾರ್ಥಿಗಳಾದ ಕೆಡೆಟ್ ಕ್ಯಾಪ್ಟನ್ ಬೆನ್ಸನ್ ಡಿಸೋಜಾ, ಪಿಒ ಕ್ಯಾಡೆಟ್ ನೃಪೆನ್ ಶೆಣೈ, ಏಬಲ್ ಕ್ಯಾಡೆಟ್‌ಗಳಾದ ನಾಗರಾಜ್ ಮತ್ತು ಸಹರನ್. ಕ್ರೀಡಾ ಸಾಧಕರಾದ ಸ್ವರೂಪ್ ಎಸ್.ಬಂಗೇರಾಮದೇವೀ ಪ್ರಸಾದ್ ಶೆಟ್ಟಿ, ಶೈಲೇಶ್ ರವರನ್ನು ಸನ್ಮಾನಿಸಲಾಯಿತು.
ಶೋಧನ್ ಯು ಶೆಟ್ಟಿ ಸ್ವಾಗತಿಸಿದರು, ದೀಕ್ಷಾ ಅತಿಥಿಗಳನ್ನು ಪರಿಚಯಿಸಿದರು. ಕಿರಣ್ ಮತ್ತು ಹರ್ಷಿತಾ ನಿರೂಪಿಸಿದರು. ಮುರಳಿ ವಂದಿಸಿದರು.

Mulkli-05031605

Comments

comments

Comments are closed.

Read previous post:
Mulkli-05031604
ಜಾರಂದಾಯ ದೈವದ ವರ್ಷಾವಧಿ ನೇಮೋತ್ಸವ

ಮೂಲ್ಕಿ: ಮೂಲ್ಕಿಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಳದ ಆಡಳಿತಕ್ಕೊಳಪಟ್ಟ ಕೊಳಚಿಕಂಬಳದ ಶ್ರೀ ಜಾರಂದಾಯ ದೈವಸ್ಥಾನದಲ್ಲಿ ಜಾರಂದಾಯ ದೈವದ ವರ್ಷಾವಧಿ ನೇಮೋತ್ಸವ ಸಂದರ್ಭ ಬಂಡಿ ಉತ್ಸವವು ಜರಗಿತು.

Close