ಐಕಳ: ಪ್ರತಿಭಾ ಪುರಸ್ಕಾರ

ಕಿನ್ನಿಗೋಳಿ : ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮಕ್ಕಳ ಪ್ರತಿಭೆಗೆ ತಕ್ಕ ಆಸಕ್ತಿ ಬೆಳೆಸಲು ಹೆತ್ತವರು ಮತ್ತು ಶಿಕ್ಷಕರು ಒತ್ತು ನೀಡಿದಾಗ ಆಂಗ್ಲ ಮಾಧ್ಯಮ ಶಿಕ್ಷಣಕ್ಕೆ ಸರಿಸಾಟಿಯಾಗಬಲ್ಲದು ಎಂದು ಕಿನ್ನಿಗೋಳಿ ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್ ಬೊಳ್ಳೂರು ಹೇಳಿದರು.
ಮಂಗಳವಾರ ಐಕಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಸಂದರ್ಭ ಉದಾರ ದಾನಿಗಳಾದ ಶಂಕರ್ ಶೆಟ್ಟಿ, ಪುಷ್ಪಾವತಿ ಶೆಟ್ಟಿ, ಕಾಂತಬಾರೆ ಬೂದ ಬಾರೆ ಸೇವಾ ಟ್ರಸ್ಟ್‌ನ ಕೃಷ್ಣ ಮಾರ್ಲ ಹಾಗೂ ಐಕಳ ಗ್ರಾ.ಪಂ ಸದಸ್ಯ ಕಿರಣ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು.
ಬಳ್ಕುಂಜೆ ತಾಲೂಕು ಪಂಚಾಯಿತಿ ಸದಸ್ಯೆ ಸದಸ್ಯೆ ರಶ್ಮಿ ಆಚಾರ್ಯ, ಐಕಳ ಗ್ರಾ. ಪಂ. ಸದಸ್ಯರಾದ ದಯಾವತಿ, ಸುಗುಣ, ಎಸ್.ಡಿ.ಎಮ್.ಸಿ ಅಧ್ಯಕ್ಷೆ ಹೇಮಲತ, ನಿವೃತ್ತ ಬ್ಯಾಂಕ್ ಉದ್ಯೋಗಿ ಮಹಾಬಲ ಶೆಟ್ಟಿ, ನಿವೃತ್ತ ಪೋಲಿಸ್ ಕಾನ್‌ಸ್ಟೇಬಲ್ ಸೂರ್ಯ, ಐಕಳ ಗ್ರಾ. ಪಂ. ಮಾಜಿ ಸದಸ್ಯ ಸುಧಾಮ ಶೆಟ್ಟಿ, ಉಪನ್ಯಾಸಕ ಡಿ.ಬಿ.ಸುರೇಶ್, ಜಗನ್ನಾಥ ಅಮೀನ್ ಮತ್ತಿತರರು ಉಪಸ್ಥಿತರಿದ್ದರು.
ರಾಜೇಶ್ ಸ್ವಾಗತಿಸಿ, ಪ್ರಭಾರ ಮುಖ್ಯ ಶಿಕ್ಷಕಿ ಜೂಲಿಯೆಟ್ ಶಾಲಾ ವಾರ್ಷಿಕ ವರದಿ ಮಂಡಿಸಿದರು. ಫೆಲ್ಸಿ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ವೀಡಾ ಮರಿಯಾ ಸೆರಾವೋ ಹಾಗೂ ಮಾದೇಶ್ ಕಾರ್ಯಕ್ರಮ ನಿರೂಪಿಸಿದರು.

Kinnigoli-07041606 Kinnigoli-07041607

Comments

comments

Comments are closed.

Read previous post:
Kinnigoli-07041605
ಕೇಶವ ಶೆಟ್ಟಿಗಾರ್

ಕಿನ್ನಿಗೋಳಿ : ಯಕ್ಷಗಾನ ಕಲಾವಿದ ಕೇಶವ ಶೆಟ್ಟಿಗಾರ್(53ವ.) ಮಂಗಳವಾರ ನಿಧನರಾದರು. ಕಟೀಲು 2ನೇ ಮೇಳದಲ್ಲಿ ಯಶೋಮತಿ, ಮಾಲಿನಿ, ನಂದಿನಿ, ಶಶಿಪ್ರಭೆಯಂತಹ ಪಾತ್ರಗಳನ್ನು ಅಭಿನಯಿಸುತ್ತಿದ್ದರು. ಪುಂಡು ವೇಷಗಳಾದ ಚಂಡಮುಂಡ, ಅಭಿಮನ್ಯು,...

Close