ಪ್ರತೀ ಗ್ರಾಮದಲ್ಲಿ ಆಯುಷ್ ಕೇಂದ್ರ ಸ್ಥಾಪನೆ

ಕಿನ್ನಿಗೋಳಿ: ಭಾರತೀಯ ವೈದ್ಯ ಪದ್ಧತಿಯಲ್ಲಿ ಅರ್ಯುವೇದ, ಯೋಗಗಳು ಜನಜನಿತವಾಗಿದ್ದು ಇತ್ತೀಚಿನ ದಿನಗಳಲ್ಲಿ ಇಡೀ ವಿಶ್ವಕ್ಕೆ ಮಾದರಿಯಾಗುತ್ತಿದೆ. ಕ್ಯಾನ್ಸ್‌ರ್‌ನಂತ ರೋಗಗಳಿಗೂ ರಾಮ ಬಾಣದಂತಿದ್ದು ವಿಶ್ವ ಆರೋಗ್ಯ ಸಂಸ್ಥೆಯು ಆರ್ಯುವೇದದ ಸಾರವನ್ನು ಅರಿತುಕೊಂಡಿದೆ ಎಂದು ಕೇಂದ್ರ ಸರಕಾರದ ಆಯುಷ್ ಸಚಿವ ಶ್ರೀಪಾದ್ ವೈ. ನಾಯಕ್ ಹೇಳಿದರು.
ಮಂಗಳವಾರ ಕಿನ್ನಿಗೋಳಿ ಎಳತ್ತೂರು ಶಕ್ತಿದರ್ಶನ ಯೋಗಾಶ್ರಮಕ್ಕೆ ಭೇಟಿ ನೀಡಿ ಮಾತನಾಡಿದರು.
ಆಯುಷ್ ಇಲಾಖೆಗೆ ಕಳೆದ ವರ್ಷದ ಕೇಂದ್ರ ಬಜೆಟ್‌ನಲ್ಲಿ 600ಕೋಟಿ ರೂ. ಮೀಸಲಾಗಿರಿಸಿದ್ದು ಈ ಬಾರಿ 1200ಕೋಟಿ ರೂ.ಗಳನ್ನು ಇಡಲಾಗಿದೆ. ದೇಶದ ಪ್ರತಿ ಗ್ರಾಮಗಳಲ್ಲಿ ಆಯುಷ್ ಕೇಂದ್ರ, ಯೋಗ ಕೇಂದ್ರ ಹಾಗೂ ಆಯುರ್ವೇದ ಆಸ್ಪತ್ರೆಗಳನ್ನು ತೆರೆಯಲು ಅನುದಾನ ನೀಡಲಾಗುವುದು. ಈಗಾಗಲೇ 14 ರಾಜ್ಯಗಳಿಂದ ಪ್ರಸ್ತಾವನೆ ಬಂದಿದ್ದು ಈ ವರ್ಷದಲ್ಲಿ ಹೆಚ್ಚಿನ ರಾಜ್ಯಗಳು ಆಸ್ಪತ್ರೆಗಳನ್ನು ತೆರೆಯುವ ಪ್ರಸ್ತಾವನೆ ಕಳುಹಿಸಬಹುದು. ಕಳೆದ ವರ್ಷದಲ್ಲಿ 62% ಯೋಜನೆ ಜಾರಿಯಾಗಿದ್ದರೆ ಈ ವರ್ಷ 92% ಗುರಿಸಾದಿಸುವ ಬರವಸೆ ಇದೆ ಎಂದು ತಿಳಿಸಿದರು.
ಶಕ್ತಿದರ್ಶನ ಯೋಗಾಶ್ರಮ, ಓಂಪ್ರಕೃತಿ ಧಾಮವು ಯೋಗ ಹಾಗೂ ಗೋಶಾಲೆಯ ಮೂಲಕ ಮಹತ್ತರ ಕಾರ್ಯ ಹಾಗೂ ಸೇವೆ ಮಾಡುತ್ತಿದೆ. ಸಾಮಾಜಿಕ ಸ್ವಯಂಸೇವಾ ಸಂಘಟನೆಗಳಿಗೂ ಆಯುಷ್ ಇಲಾಖೆ ಯೋಗ ಮತ್ತು ಆಯುರ್ವೇದದ ಬೆಳವಣಿಗೆಯ ಕಾರ್ಯಗಳಿಗೆ ಅನುದಾನ ನೀಡುವ ಯೋಚನೆಯಲ್ಲಿದೆ. ಗ್ರಾಮೀಣ ಪರಿಸರದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಕೊರತೆಗಳನ್ನು ಗಮನಿಸಿ ಗ್ರಾಮ ಮಟ್ಟದಲ್ಲಿ ಯುನಾನಿ ಆರ್ಯುವೇದ ವೈದ್ಯರನ್ನು ನೇಮಿಸುವ ಕಾರ್ಯ ನಡೆಯಲಿದೆ ಎಂದರು.
ಶಕ್ತಿದರ್ಶನ ಯೋಗಾಶ್ರಮದ ಮುಖ್ಯಸ್ಥ ಗುರೂಜಿ ದೇವದಾಸ್ ರಾವ್ ಮಾತನಾಡಿ ಯೋಗ ಪ್ರಾಣಯಾಮಗಳನ್ನು ನಮ್ಮ ಆಶ್ರಮದಲ್ಲಿ ಉಚಿತವಾಗಿ ಕಲಿಸುತ್ತಿದ್ದು ಮುಂದಿನ ದಿನಗಳಲ್ಲಿ ಐಪಿಎಸ್ ಐಎಎಸ್ ಅಧಿಕಾರಿಗಳಿಗೆ ಹಾಗೂ ಕಲಿಯುವವರಿಗೆ ಯೋಗ ಶಿಕ್ಷಣ ನೀಡಲಿದ್ದೇವೆ, ಸ್ವದೇಶೀ ಗೋವುಗಳ ರಕ್ಷಣೆ ನಮ್ಮ ಆದ್ಯತೆಯಾಗಬೇಕು, ನಮ್ಮ ಗೋಶಾಲೆಯಲ್ಲಿ 200ಕ್ಕೂ ಹೆಚ್ಚು ಗೋವುಗಳಿವೆ. ಸ್ವದೇಶಿ ಗೋವಿನ ಹಾಲು ವಿದೇಶಿ ಗೋವಿನ ಹಾಲಿಗಿಂತ ಶ್ರೇಷ್ಟವಾದದ್ದು ಎಂದು ಹಲವು ಪರೀಕ್ಷೆಗಳಲ್ಲಿ ತಿಳಿದು ಬಂದಿದೆ ಎಂದರು.

ಆಶ್ರಮದ ವಿದ್ಯಾರ್ಥಿಗಳು ಕೇಂದ್ರ ಸಚಿವ ಶ್ರೀಪಾದ ವೈ ನಾಯಕ್ ಅವರ ಎದುರು ಯೋಗಾಸನ ಪ್ರದರ್ಶಿಸಿದರು.

Kinnigoli-07041604

Comments

comments

Comments are closed.

Read previous post:
Kateel-07041601
ಕಟೀಲು ಸ್ವಚ್ಛತಾ ಅಭಿಯಾನ

ಕಿನ್ನಿಗೋಳಿ: ಕಟೀಲು ಸ್ವಚ್ಛತಾ ಅಭಿಯಾನದಡಿಯಲ್ಲಿ ಕಟೀಲು ಸಂತ ಜಾಕೋಬರ ಚರ್ಚ್ ಧರ್ಮ ಗುರು ಫಾ.ರೊನಾಲ್ಡ್ ಕುಟಿನ್ಹೊ ನೇತೃತ್ವದಲ್ಲಿ ಚರ್ಚ್ ವ್ಯಾಪ್ತಿಯ ಸಮಾಜ ಬಾಂಧವರಿಂದ ಮಾರಡ್ಕದಿಂದ ಕಟೀಲು ವರೆಗಿನ ರಾಜ್ಯ...

Close