ಕಿನ್ನಿಗೋಳಿ ಮಹಿಳಾ ದಿನಾಚರಣೆ

ಕಿನ್ನಿಗೋಳಿ: ಇಂದಿನ ಕಾಲದಲ್ಲಿ ಮಹಿಳೆಯರು ಆರ್ಥಿಕ ಹಾಗೂ ಮಾನಸಿಕರಾಗಿ ಸಧೃಡರಾಗುತ್ತಿದ್ದು ಸಮಾಜಮುಖಿ ಅಭಿವೃದಿಪರ ಚಿಂತನೆಗಳನ್ನು ಮೈಗೂಡಿಸಿ ಸುಂಸ್ಕೃತ ಸಮಾಜ ಕಟ್ಟಬೇಕು. ಎಂದು ಕಟೀಲು ಜಿಲ್ಲಾ ಪಂಚಾಯಿತಿ ಸದಸ್ಯೆ ಕಸ್ತೂರಿ ಪಂಜ ಹೇಳಿದರು.
ದ.ಕ. ಜಿಲ್ಲಾ ಪಂಚಾಯಿತಿ ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆ ಶಿಶು ಅಭಿವೃದ್ಧಿ ಯೋಜನೆ ಮಂಗಳೂರು(ಗ್ರಾಮಾಂತರ) ಇನ್ನರ್ ವೀಲ್ ಕ್ಲಬ್ ಕಿನ್ನಿಗೋಳಿ ಹಾಗೂ ಕಿನ್ನಿಗೋಳಿ ರೋಟರಿ ಕ್ಲಬ್ ಸಂಸ್ಥೆಗಳ ಜಂಟೀ ಆಶ್ರಯದಲ್ಲಿ ಕಟೀಲು ವಲಯದ ಸ್ತ್ರೀ ಶಕ್ತಿ ಗುಂಪುಗಳ ನೇತೃತ್ವದಲ್ಲಿ ಬುಧವಾರ ಕಿನ್ನಿಗೋಳಿ ರೋಟರಿ ರಜತ ಭವನದಲ್ಲಿ ನಡೆದ ಮಾಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಿನ್ನಿಗೋಳಿ ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್ ಬೊಳ್ಳೂರು, ತಾಲೂಕು ಪಂಚಾಯಿತಿ ಸದಸ್ಯರಾದ ದಿವಾಕರ ಕರ್ಕೇರ, ಶುಭಲತಾ ಶೆಟ್ಟಿ, ರಶ್ಮಿ ಆಚಾರ್ಯ, ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫಿಲೋಮಿನಾ ಸಿಕ್ವೇರಾ, ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರೋಜಿನಿ ಎಸ್., ಕಿನ್ನಿಗೋಳಿ ರೋಟರಿ ಅಧ್ಯಕ್ಷ ಎಂ. ಬಾಲಕೃಷ್ಣ ಶೆಟ್ಟಿ, ನಿಯೋಜಿತ ಅಧ್ಯಕ್ಷ ರಮಾನಂದ ಪೂಜಾರಿ, ವೈದ್ಯಾಧಿಕಾರಿಗಳಾದ ಬಾಸ್ಕರ, ವಿದ್ಯಾಲಕ್ಷ್ಮೀ, ಇನ್ನರ್ ವೀಲ್ ಕಾರ್ಯದರ್ಶಿ ವಿಮಲ ತ್ಯಾಗರಾಜ್, ಅಶ್ವಿನಿ ಉಪಸ್ಥಿತರಿದ್ದರು.
ಪದ್ಮಾವತಿ ಆಚಾರ್ಯ ಸ್ವಾಗತಿಸಿ ಭಾರತಿ ಕಾರ್ಯಕ್ರಮ ನಿರೂಪಿಸಿದರು.

Kinnigoli-07041609

Comments

comments

Comments are closed.

Read previous post:
Kinnigoli-07041608
ಪದ್ಮನೂರು ಚೆಕ್ ವಿತರಣೆ

ಕಿನ್ನಿಗೋಳಿ: ಕಿನ್ನಿಗೋಳಿ ಗ್ರಾಮ ಪಂಚಾಯಿತಿ ವತಿಯಿಂದ ಯುವಜನ ಕ್ರೀಡಾ ಚಟುವಟಿಕೆಗಳಿಗೆ ಪದ್ಮನೂರು ಹಿರಿಯ ಪ್ರಾಥಮಿಕ ಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಭವ್ಯಶ್ರೀ, ವರುಣ್, ಶ್ರೇಯಾ, ರೋಶನಿ ಹಾಗೂ ಧನುಷ್ ಕುಮಾರ್...

Close