ಕೇಶವ ಶೆಟ್ಟಿಗಾರ್

ಕಿನ್ನಿಗೋಳಿ : ಯಕ್ಷಗಾನ ಕಲಾವಿದ ಕೇಶವ ಶೆಟ್ಟಿಗಾರ್(53ವ.) ಮಂಗಳವಾರ ನಿಧನರಾದರು.
ಕಟೀಲು 2ನೇ ಮೇಳದಲ್ಲಿ ಯಶೋಮತಿ, ಮಾಲಿನಿ, ನಂದಿನಿ, ಶಶಿಪ್ರಭೆಯಂತಹ ಪಾತ್ರಗಳನ್ನು ಅಭಿನಯಿಸುತ್ತಿದ್ದರು. ಪುಂಡು ವೇಷಗಳಾದ ಚಂಡಮುಂಡ, ಅಭಿಮನ್ಯು, ಬ್ರಹ್ಮ ವಿಷ್ಣು, ಲವಕುಶ ಪಾತ್ರಗಳಲ್ಲಿ ಪ್ರಸಿದ್ಧರಾಗಿದ್ದು 13ನೇ ಎಳೆಯ ವಯಸ್ಸಿನಲ್ಲಿ ಪಡ್ರೆ ಚಂದು ಅವರಿಂದ ಯಕ್ಷಗಾನ ನಾಟ್ಯಾಭ್ಯಾಸ ಕಲಿತರು. 13 ವರ್ಷಗಳ ಕಾಲ ಕಟೀಲು ಮೇಳದಲ್ಲಿ ಸತತ ತಿರುಗಾಟ ಮಾಡಿದ್ದರು. ಬಳಿಕ ಉದ್ಯೋಗ ಕಾರ್ಯನಿಮಿತ್ತ ಮುಂಬಾಯಿಗೆ ತೆರಳಿದ ಅವರು ಮುಂಬಾಯಿ ಗೀತಾಂಬಿಕ ಯಕ್ಷಗಾನ ಮಂಡಳಿಯಲ್ಲಿ ಕ್ರಿಯಾಶೀಲರಾಗಿದ್ದರು. ಅವರಿಗೆ ಪತ್ನಿ, ಮೂವರು ಮಕ್ಕಳನ್ನು ಇದ್ದಾರೆ.

Kinnigoli-07041605

Comments

comments

Comments are closed.

Read previous post:
Kinnigoli-07041604
ಪ್ರತೀ ಗ್ರಾಮದಲ್ಲಿ ಆಯುಷ್ ಕೇಂದ್ರ ಸ್ಥಾಪನೆ

ಕಿನ್ನಿಗೋಳಿ: ಭಾರತೀಯ ವೈದ್ಯ ಪದ್ಧತಿಯಲ್ಲಿ ಅರ್ಯುವೇದ, ಯೋಗಗಳು ಜನಜನಿತವಾಗಿದ್ದು ಇತ್ತೀಚಿನ ದಿನಗಳಲ್ಲಿ ಇಡೀ ವಿಶ್ವಕ್ಕೆ ಮಾದರಿಯಾಗುತ್ತಿದೆ. ಕ್ಯಾನ್ಸ್‌ರ್‌ನಂತ ರೋಗಗಳಿಗೂ ರಾಮ ಬಾಣದಂತಿದ್ದು ವಿಶ್ವ ಆರೋಗ್ಯ ಸಂಸ್ಥೆಯು ಆರ್ಯುವೇದದ ಸಾರವನ್ನು...

Close