ಯುವ ಕೇಸರಿ ಸಂಗಮ

ಮೂಲ್ಕಿ: ವೀರಕೇಸರಿ ತರುಣ ವೃಂದ ಕೆ.ಎಸ್.ರಾವ್ ನಗರ ಇವರ ಆಶ್ರಯದಲ್ಲಿ ಯುಗಾದಿ ಉತ್ಸವದ ಪ್ರಯುಕ್ತ ನಡೆಯುವ ಯುವ ಕೇಸರಿ ಸಂಗಮ ಕಾರ್ಯಕ್ರಮದ ಪ್ರಯುಕ್ತ ಶನಿವಾರ ನಡೆದ ಬೈಕ್ ರ‍್ಯಾಲಿಯನ್ನು ಬಿಜೆಪಿ ನಾಯಕ ಉಮಾನಾಥ ಕೋಟ್ಯಾನ್ ಉದ್ಘಾಟಿಸಿದರು.
ಮೂಲ್ಕಿ ಮೂಡಬಿದ್ರೆ ಕ್ಷೇತ್ರ ಪ್ರಧಾನ ಕಾರ್ಯದರ್ಶಿ ದೇವಪ್ರಸಾದ್ ಪುನರೂರು.ವೀರ ಕೇಸರಿ ತರುಣ ವೃಂದದ ಅಧ್ಯಕ್ಷ ಬಸವಲಿಂಗಯ್ಯ, ಬಿಜೆಪಿ ಯುವ ಮೋರ್ಛಾ ಅಧ್ಯಕ್ಷ ಅಶೋಕ್,ಹಿಂದೂ ಜಾಗರಣ ವೇದಿಕೆಯ ಹಳೆಯಂಗಡಿ ಸಂಚಾಲಕ ಸನತ್ ಕುಮಾರ್, ಕೆಮ್ರಾಲ್ ಸಂಚಾಲಕ ದಿನೇಶ್, ಶಶಿಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಬೈಕ್ ರ‍್ಯಾಲಿಯು ಕೆ.ಎಸ್.ರಾವ್ ನಗರದಿಂದ ಪ್ರಾರಂಭಗೊಂಡು ಗಾಂಧಿ ಮೈದಾನ ,ಕಾರ್ನಾಡು ಮೂಲ್ಕಿ ಬಸ್ಸು ನಿಲ್ದಾಣ ,ಬಪ್ಪನಾಡು, ಪೋಲಿಸ್ ಸ್ಟೇಶನ್ ರಸ್ತೆಯಾಗಿ ಗೇರುಕಟ್ಟೆ ಮಾರ್ಗವಾಗಿ ನಡೆಯಿತು.

Kinnigoli-19041609

Comments

comments

Comments are closed.

Read previous post:
Kinnigoli-08041601
ಮೋಡದ ಮರೆಯಲ್ಲಿ

ಮೋಡದ ಮರೆಯಲ್ಲಿ ಪ್ರಕೃತಿ ಸೊಬಗು

Close