ಕಟೀಲು ಜಾತ್ರೆ

Kateel-Durga-Parameshwari-Temple-View3
ಕಟೀಲು : ಪುರಾಣ ಪ್ರಸಿದ್ಧ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದಲ್ಲಿ ತಾ. 13ರಂದು ಧ್ವಜಾರೋಹಣದೊಂದಿಗೆ ಉತ್ಸವ ಆರಂಭವಾಗಲಿದೆ. ದಿನಂಪ್ರತಿ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು ತಾ. 13ರಂದು  ವಿನಯಾ ಪದ್ಯಾಣ ಬಳಗ, ಉಜಿರೆ ಹಾಗೂ ಸಂಧ್ಯಾ ಪ್ರಸನ್ನ ಭಟ್ ನೆಲ್ಲಿತೀರ್ಥ ಇವರಿಂದ ಶಾಸ್ತ್ರೀಯ ಸಂಗೀತ.
ತಾ. 14ರಂದು ಯುಗಾದಿ ದೀಪದ ಬಲಿ ರಾತ್ರಿ ಉತ್ಸವ ಬಲಿ, ಶೋಭಿತಾ ಭಟ್ ಮತ್ತು ಆಶ್ವೀಜಾ ಉಡುಪ ಹಾಗೂ  ವಿಭು ಭಟ್ಟ ಎಳತ್ತೂರು ಇವರಿಂದ ಶಾಸ್ತ್ರೀಯ ಸಂಗೀತ.
ತಾ. 15ರಂದು ಶುಕ್ರವಾರ ಹಗಲು ಭ್ರಾಮರೀವನದಲ್ಲಿ ಪ್ರತಿಷ್ಠಾವರ್ಧಂತಿ ರಾತ್ರಿ ಉತ್ಸವ ಬಲಿ, ಮೂಡುಸವಾರಿ, ಶ್ರೀ ದುರ್ಗಾಂಬಾ ಮಹಿಳಾ ಯಕ್ಷಗಾನ ಮಂಡಳಿ ತಡಂಬೈಲು ಇವರಿಂದ ಯಕ್ಷಗಾನ : ಗಿರಿಜಾ ಕಲ್ಯಾಣ – ಕುಮಾರ ವಿಜಯ ನಡೆಯಲಿದೆ.
ತಾ. 16ಕ್ಕೆ ಪ್ರಾತಃ ದೀಪ ಬಲಿ, ರಾತ್ರಿ ಉತ್ಸವ ಬಲಿ, ರಾಧಾ ಮುರಲೀಧರ ರಾವ್ ಕಾಸರಗೋಡು ಇವರಿಂದ ಶಾಸ್ತ್ರೀಯಸಂಗೀತ  ಶ್ರೀವಿದ್ಯಾ ಶಶಿಧರ ರಾವ್ ಮೈಸೂರು ಇವರಿಂದ ಭರತನಾಟ್ಯ.
ತಾ. 17ಕ್ಕೆ ರಾತ್ರಿ ಉತ್ಸವ ಬಲಿ, ಬೆಳ್ಳಿ ರಥೋತ್ಸವ, ಮಧ್ಯಾಹ್ನ ಖ್ಯಾತ ಭಾಗವತರಿಂದ ಯಕ್ಷಗಾನ ಗಾನಾರಾಧನೆ, ಸಂಜೆ ಬಾಲಯಕ್ಷಕೂಟ ಕದ್ರಿಯವರಿಂದ ಯಕ್ಷಗಾನ ಅಗಜಾ ವಿವಾಹ.
ತಾ. 18ರಂದು ಹಗಲು ಬ್ರಹ್ಮಸನ್ನಿಧಿಯಲ್ಲಿ ಪರ್ವ ರಾತ್ರಿ ಉತ್ಸವ ಬಲಿ, ಪಡುಸವಾರಿ, ಜಿಲ್ಲೆಯ ಪ್ರಸಿದ್ಧ ಕಲಾವಿದರಿಂದ ತಾಳಮದ್ದಲೆ ಸಂಧಾನತ್ರಯ ನಡೆಯಲಿದೆ.
ತಾ. 19ರಂದು ಹಗಲು ಬ್ರಹ್ಮರಥೋತ್ಸವ ರಾತ್ರಿ ಉತ್ಸವ ಬಲಿ, ಶಯನ ಶ್ರೀ ದುರ್ಗಾ ಮಕ್ಕಳ ಮೇಳ(ರಿ) ಕಟೀಲು ಇವರಿಂದ ಯಕ್ಷಗಾನ ರಾಣಿ ಶಶಿಪ್ರಭೆ ಜರಗಲಿದೆ.
ತಾ. 20ಕ್ಕೆ ಪ್ರಾತಃ ಕವಾಟೋದ್ಘಾಟನೆ ರಾತ್ರಿ ಅವಭೃತೋತ್ಸವ ರಾತ್ರಿ ಗಂಟೆ 8.00ರಿಂದ ನಾಟ್ಯಾರಾಧನಾ ಕಲಾಕೇಂದ್ರ ಉರ್ವ ಮಂಗಳೂರು ಭಾರತೀಯ ನೃತ್ಯಕಲಾವೈಭವ ಮತ್ತು ನೃತ್ಯರೂಪಕವಿದೆ. ಉತ್ಸವದ ದಿನಗಳಲ್ಲಿ ದಿನಂಪ್ರತಿ ಚಿನ್ನದ ರಥೋತ್ಸವವಿದೆ.
katil-advt

Comments

comments

Comments are closed.

Read previous post:
Kinnigoli-19041609
ಯುವ ಕೇಸರಿ ಸಂಗಮ

ಮೂಲ್ಕಿ: ವೀರಕೇಸರಿ ತರುಣ ವೃಂದ ಕೆ.ಎಸ್.ರಾವ್ ನಗರ ಇವರ ಆಶ್ರಯದಲ್ಲಿ ಯುಗಾದಿ ಉತ್ಸವದ ಪ್ರಯುಕ್ತ ನಡೆಯುವ ಯುವ ಕೇಸರಿ ಸಂಗಮ ಕಾರ್ಯಕ್ರಮದ ಪ್ರಯುಕ್ತ ಶನಿವಾರ ನಡೆದ ಬೈಕ್...

Close