ಬಳ್ಕುಂಜೆ ಶಾಲೆ ಶತಮಾನೋತ್ಸವ ಸಮಿತಿ ಸಭೆ

ಕಿನ್ನಿಗೋಳಿ: ಬಳ್ಕುಂಜೆ ಅನುದಾನಿತ ಸಂತ ಪೌಲರ ಹಿರಿಯ ಪ್ರಾಥಮಿಕ ಶಾಲೆ ಶತಮಾನೋತ್ಸವ ಸಂಭ್ರಮದಲ್ಲಿದ್ದು ೨೦೧೬ ಡಿಸೆಂಬರ್ ತಿಂಗಳಿನಲ್ಲಿ ಆಚರಣೆ ನಡೆಯಲಿದೆ. ಆ ಪ್ರಯುಕ್ತ ಪ್ರಸಕ್ತ ಸಾಲಿನಲ್ಲಿ ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದ್ದು ವಿವಿಧ ಸಮಿತಿ ರಚನೆ ಮಾಡಲಾಗಿದೆ ಎಂದು ಶತಮಾನೋತ್ಸವ ಸಮಿತಿ ಕೋಶಾಧಿಕಾರಿ ನೆಲ್ಸನ್ ಲೋಬೋ ಹೇಳಿದರು.
ಗುರುವಾರ ಬಳ್ಕುಂಜೆ ಚರ್ಚ್ ಸಭಾಂಗಣದಲ್ಲಿ ನಡೆದ ಶತಮಾನೋತ್ಸವ ಸಮಿತಿ ಸಭೆಯಲ್ಲಿ ತಿಳಿಸಿದರು.
ಮಂಗಳೂರು ತಾಲೂಕಿನ ಗ್ರಾಮೀಣ ಪ್ರದೇಶ ಬಳ್ಕುಂಜೆ ಯಲ್ಲಿ ಫಾ. ಇಮ್ಯಾನುವೆಲ್ ರೆಬೆಲ್ಲೋ ಅವರ ಸಂಚಾಲಕತ್ವದಲ್ಲಿ 1 ಸೆಪ್ಟೆಂಬರ್ 1916 ರಲ್ಲಿ ಪ್ರಾರಂಭವಾಗಿತ್ತು. ಪ್ರಸ್ತುತ ಶಾಲೆಯ ದುರಸ್ತಿ ಕಾರ್ಯ ಆಗಬೇಕಾಗಿದೆ. ಸುಮಾರು 70 ಲಕ್ಷರೂ ವೆಚ್ಚದಲ್ಲಿ ಶಾಲಾ ಕಟ್ಟಡ ದುರಸ್ತಿ, ಸುಣ್ಣ ಬಣ್ಣ, ಬಾಲಕರ ಶೌಚಾಲಯ, ನೀರಿನ ವ್ಯವಸ್ಥೆ, ಪಂಪು , ಗೌರವಶಿಕ್ಷಕರ ಸಂಭಾವನಾ ನಿಧಿ, ಕಂಪ್ಯೂಟರ್, ಸಿ.ಸಿ. ಕ್ಯಾಮರ ಅಳವಡಿಕೆ, ಸ್ಮರಣ ಸಂಚಿಕೆ ಮಾಡಲಾಗುವುದು ಎಂದು ಸಭೆಯಲ್ಲಿ ನಿರ್ಣಯಿಸಲಾಯಿತು.
ಈ ಸಂದರ್ಭ ಶಾಲಾ ಸಂಚಾಲಕ, ಬಳ್ಕುಂಜೆ ಚರ್ಚ್ ಧರ್ಮಗುರು ಫಾ. ಮೈಕಲ್ ಡಿಸಿಲ್ವ, ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಫ್ರೆಡಿಕ್ ಪಿಂಟೋ, ಕಾರ್ಯದರ್ಶಿ ಹೆಲೆನ್ ಡಿಸೋಜ, ಶತಮಾನೋತ್ಸವ ಸಮಿತಿ ಅಧ್ಯಕ್ಷ ಡೆನಿಸ್ ಡಿಸೋಜ, ಹಳೇವಿದ್ಯಾರ್ಥಿಸಂಘದ ಮುಂಬಯಿ ಸಮಿತಿ ಅಧ್ಯಕ್ಷ ಕರುಣಾಕರ ಶೆಟ್ಟಿ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಉದಯ ರಾವ್, ದಿನಕರ ಶೆಟ್ಟಿ, ಲೂಯಿಸ್ ಡಿಸೋಜ, ಮುಖ್ಯ ಶಿಕ್ಷಕಿ ಸಿ. ಹಿಲ್ಡಾ ಡಿಸೋಜ, ಸುಕುಮಾರ್, ಸಾವಿತ್ರಿ, ವೇದ, ರೇಷ್ಮಾ, ಅನಿತಾ ಮತ್ತಿತರರು ಉಪಸ್ಥಿತರಿದ್ದರು.

Kinnigoli-13041602

Comments

comments

Comments are closed.

Read previous post:
Kinnigoli-13041601
ಕಿನ್ನಿಗೋಳಿ ಶೃದ್ಧಾಂಜಲಿ ಸಭೆ

ಕಿನ್ನಿಗೋಳಿ: ಸಂದರ್ಭಕ್ಕೆ ತಕ್ಕುದಾದ ಹಾಸ್ಯ, ಹಿರಿಕಿರಿಯ ಕಲಾವಿದರೊಂದಿಗೆ ಹೊಂದಿಕೊಂಡು ಹೋಗುವ ಚಾತುರ್ಯ, ತುಳು ಮತ್ತು ಪೌರಣಿಕ ಕಥೆಗಳ ಜ್ಞಾನದಿಂದಾಗಿ ಯಕ್ಷಗಾನ ಕ್ಞೇತ್ರವನ್ನು ಶ್ರೀಮಂತವಾಗಿಸಿದ್ದಾರೆ. ಅತ್ಯಂತ ಬಡಕುಟುಂಬ ಕುಡುಬಿ ಜನಾಂಗದಲ್ಲಿ...

Close