ಹಿಂದಕ್ಕೆ ಚಲಿಸಿದ ಬಸ್ಸು ತಪ್ಪಿದ ದುರಂತ

ಕಿನ್ನಿಗೋಳಿ: ಬಸ್ಸು ನಿಲ್ದಾಣದಲ್ಲಿ ಚಾಲಕ ಬಸ್ಸು ನಿಲ್ಲಿಸಿ ಮದ್ಯಾಹ್ನದ ಊಟಕ್ಕೆ ತೆರಳಿದ ಸಮಯ ಬಾಲಕನೊಬ್ಬ ಆಯತಪ್ಪಿ ಗೇರ್ ಲಿವರ್‌ನ ಮೇಲೆ ಬಿದ್ದಾಗ ಬಸ್ಸು ಹಿಮ್ಮುಖವಾಗಿ ಚಲಿಸಿ ಮೂರು ದ್ವಿಚಕ್ರ ವಾಹನಗಳು ಹಾನಿಗೀಡಾದ ಘಟನೆ ಶನಿವಾರ ಕಿನ್ನಿಗೋಳಿಯಲ್ಲಿ ನಡೆಯಿತು. ಬಸ್ಸು ಹಿಮ್ಮಖವಾಗಿ ಚಲಿಸಿದ ಸಮಯ ಜನರು ಯಾರು ಇಲ್ಲದ ಕಾರಣ ದೊಡ್ಡ ಅನಾಹುತ ತಪ್ಪಿದೆ.
ಪಾರ್ಕಿಂಗ್ ಸಮಸ್ಯೆ
ಹಲವು ಗ್ರಾಮಾಂತರ ಪ್ರದೇಶಗಳಿಗೆ ಕಿನ್ನಿಗೋಳಿ ಮುಖ್ಯ ಸಂಪರ್ಕ ಪೇಟೆಯಾಗಿದ್ದು ವಾಹನ ಸಂಚಾರ ದಟ್ಟಣೆ ಹಾಗೂ ವೇಗವಾಗಿ ಬೆಳೆಯುತ್ತಿರುವ ಪೇಟೆಯು ಅಪಘಾತಗಳಿಗೆ ಕಾರಣವಾಗುತ್ತಿದೆ. ಕಿನ್ನಿಗೋಳಿ ಬಸ್ಸು ನಿಲ್ದಾಣದಲ್ಲಿ ಬಸ್ಸುಗಳು ನಿಲ್ಲಲು ಸಮರ್ಪಕ ಸ್ಥಳವಿಲ್ಲ. ಬಸ್ಸುಗಳು ಹೊರಡಲು ೧೦ ನಿಮಿಷಗಳಿರುವಾಗ ಬಂದರೂ ದ್ವಿಚಕ್ರ ವಾಹನಗಳ ಇಕ್ಕಟ್ಟಾದ ಪಾರ್ಕಿಂಗ್ ಸಮಸ್ಯೆ ಹಾಗೂ ಜನದಟ್ಟಣೆ ಸಮಸ್ಯೆಯಿಂದ ಇಂತಹ ಅವಘಡಗಳಿಗೆ ಪರೋಕ್ಷವಾಗಿ ಕಾರಣವಾಗುತ್ತಿವೆ. ಬಸ್ ನಿಲ್ದಾಣಕ್ಕೆ ಸ್ಥಳವಕಾಶದ ಕೊರತೆ, ಅಸಮರ್ಪಕ ಪಾರ್ಕಿಂಗ್, ನೋ-ಪಾರ್ಕಿಂಗ್ ನಾಮ ಫಲಕಗಳ ಹತ್ತಿರ ಕೂಡಾ ವಾಹನಗಳನ್ನು ನಿಲ್ಲಿಸುವುದರಿಂದ ಇಂತಹ ಸಮಸ್ಯೆಗಳು ಆಗಾಗ ನಡೆಯುತ್ತವೆ.

Kinnigoli-13041607

Comments

comments

Comments are closed.

Read previous post:
Kinnigoli-13041605
ನೂತನ ಬೋರ್‌ವೆಲ್ ಕಿಡಿಗೇಡಿಗಳಿಂದ ಹಾನಿ

ಕಿನ್ನಿಗೋಳಿ: ಮುಲ್ಕಿ ಹೋಬಳಿಯ ಪಡುಪಣಂಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೋಕೂರು ಸುಬ್ರಹ್ಮಣ್ಯ ಹಿರಿಯ ಪ್ರಾಥಮಿಕ ಶಾಲೆಯ ಪರಿಸರ ಹೊಸದಾಗಿ ನಿರ್ಮಿಸಿದ ಬೋರ್ ವೆಲ್ ಗೆ ದುಷ್ಕರ್ಮಿಗಳು ಹಾನಿಯನ್ನುಂಟು ಮಾಡಿದ...

Close