ಕೆಮ್ಮಡೆ ಧಾರ್ಮಿಕ ಸಭೆ

ಕಿನ್ನಿಗೋಳಿ: ದೈವ ದೇವರುಗಳ ಧಾರ್ಮಿಕ ಸಾಂಸ್ಕ್ರತಿಕ ಆಚರಣೆಗಳು ನಮ್ಮ ಕರಾವಳಿಯಲ್ಲಿ ಪ್ರಚಲಿತವಾಗಿದ್ದು ಇದರಿಂದ ಮಾನಸಿಕ ನೆಮ್ಮದಿ ಸಿಗುವುದು ಎಂದು ಲಯನ್ಸ್ ಕ್ಲಬ್ ಪ್ರಾಂತೀಯ ಅಧ್ಯಕ್ಷ ದೇವಪ್ರಸಾದ್ ಪುನರೂರು ಹೇಳಿದರು.
ಶನಿವಾರ ಮೂರುಕಾವೇರಿ ಕೆಮ್ಮಡೆಯ ಶ್ರೀ ವೈದ್ಯನಾಥ ದೈವಸ್ಥಾನದ ವಾರ್ಷಿಕ ನೇಮದ ಪ್ರಯುಕ್ತ ನಡೆದ ಧಾರ್ಮಿಕ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಸಂದರ್ಭ ಮೂವತ್ತು ವರ್ಷಗಳಿಂದ ದೈವಸ್ಥಾನದಲ್ಲಿ ನಾಗಸ್ವರ ವಾದಕರಾದ ಸೇವೆ ಸಲ್ಲಿಸುತ್ತಿರುವ ಲೋಕು ಶೇರಿಗಾರ ಅವರನ್ನು ಸನ್ಮಾನಿಸಲಾಯಿತು.
ಕಟೀಲು ಜಿ. ಪಂ. ಸದಸ್ಯೆ ಕಸ್ತೂರಿ ಪಂಜ, ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರೋಜಿನಿ ಸುಧಾಕರ್, ಕಿನ್ನಿಗೋಳಿ ವಿಶ್ವ ಬ್ರಾಹ್ಮಣ ಸಮಾಜ ಸೇವಾ ಸಂಘದ ಅಧ್ಯಕ್ಷ ಶಿವಪ್ರಸಾದ್ ಆಚಾರ್ಯ, ಕಟೀಲು ಮಕ್ಕಳ ಮೇಳದ ವಾಸುದೇವ ಶೆಣೈ , ಕೆಮ್ಮಡೆ ಶ್ರೀ ವೈದ್ಯನಾಥ ದೈವಸ್ಥಾನದ ಅಧ್ಯಕ್ಷ ತಾರಾನಾಥ ಶೆಟ್ಟಿ, ಅನಂತ ಪದ್ಮನಾಭ, ಅಶೋಕ್ ಉಪಸ್ಥಿತರಿದ್ದರು. ಕೆ. ಬಿ. ಸುರೇಶ್ ಸ್ವಾಗತಿಸಿದರು. ಪ್ರಜ್ವಲ್ ಕಾರ್ಯಕ್ರಮ ನಿರೂಪಿಸಿದರು.

Kinnigoli-13041609

Comments

comments

Comments are closed.

Read previous post:
Kinnigoli-13041608
ಹೊನಲು ಬೆಳಕಿನ ಪ್ರೋ ಕಬಡ್ಡಿ ಪಂದ್ಯಾಟ

ಕಿನ್ನಿಗೋಳಿ:  ಕಬಡ್ಡಿ ಭಾರತದ ಗ್ರಾಮೀಣ ಪರಿಸರದಲ್ಲಿ ಪ್ರಚಲಿತ ಪ್ರಾಚೀನ ಕ್ರೀಡೆಯಾಗಿದ್ದು ಈ ಕ್ರೀಡೆಯಿಂದ ಆರೋಗ್ಯ ಸುದೃಡತೆ ಮತ್ತು ಮಾನಸಿಕ ಕ್ಷಮತೆ ಹೆಚ್ಚಾಗುತ್ತದೆ. ಎಂದು ತುಳು ಸಾಹಿತ್ಯ ಅಕಾಡೆಮಿ...

Close