ಹೊನಲು ಬೆಳಕಿನ ಪ್ರೋ ಕಬಡ್ಡಿ ಪಂದ್ಯಾಟ

ಕಿನ್ನಿಗೋಳಿ:  ಕಬಡ್ಡಿ ಭಾರತದ ಗ್ರಾಮೀಣ ಪರಿಸರದಲ್ಲಿ ಪ್ರಚಲಿತ ಪ್ರಾಚೀನ ಕ್ರೀಡೆಯಾಗಿದ್ದು ಈ ಕ್ರೀಡೆಯಿಂದ ಆರೋಗ್ಯ ಸುದೃಡತೆ ಮತ್ತು ಮಾನಸಿಕ ಕ್ಷಮತೆ ಹೆಚ್ಚಾಗುತ್ತದೆ. ಎಂದು ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಉಮಾನಾಥ ಕೋಟ್ಯಾನ್ ಹೇಳಿದರು.
ಭಾನುವಾರ ಪಕ್ಷಿಕೆರೆ ಕೆಮ್ರಾಲ್ ಸರಕಾರಿ ಪ್ರೌಢಶಾಲಾ ಮೈದಾನದಲ್ಲಿ ಶ್ರೀ ಹರಿ ಸ್ಪೋm ಕ್ಲಬ್ (ರಿ) ಹರಿಪಾದ ಪಕ್ಷಿಕರೆ , ಮಂಗಳೂರು ಅಮೆಚೂರು ಕಬಡ್ಡಿ – ಅಸೋಸಿಯೇಶನ್, ದ. ಕ. ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಶನ್ ಸಹಯೋಗದಲ್ಲಿ ಅಂತರ್ ಜಿಲ್ಲಾ ಬಲಿಷ್ಠ ೮ ಆಹ್ವಾನಿತ ತಂಡಗಳ ಹೊನಲು ಬೆಳಕಿನ ಮುಕ್ತ ಮ್ಯಾಟ್ ಪ್ರೊ ಕಬಡ್ಡಿ ಪಂದ್ಯಾಟದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಮಾಜಿ ಜಿ. ಪಂ. ಸದಸ್ಯ ಈಶ್ವರ್ ಕಟೀಲು ಪಂದ್ಯಾಟ ಉದ್ಘಾಟಿಸಿದರು.
ಕಿನ್ನಿಗೋಳಿ ವಿವೇಕಾನಂದ ಟ್ರಸ್ಟ್ ಅಧ್ಯಕ್ಷ ನಿಡ್ಡೋಡಿ ಚಾವಡಿ ಮನೆ ಜಗನ್ನಾಥ ಶೆಟ್ಟಿ, ಜಿ. ಪಂ. ಸದಸ್ಯರಾದ ವಿನೋದ್ ಬೊಳ್ಳೂರು, ಕಸ್ತೂರಿ ಪಂಜ, ಮಾಜಿ ಜಿ. ಪಂ. ಸದಸ್ಯೆ ಶೈಲಾ ಸಿಕ್ವೇರಾ, ತಾ. ಪಂ. ಸದಸ್ಯರಾದ ದಿವಾಕರ ಕರ್ಕೇರ, ವಜ್ರಾಕ್ಷಿ ಪಿ. ಶೆಟ್ಟಿ ಕೆಮ್ರಾಲ್ ಗ್ರಾ. ಪಂ. ಅಧ್ಯಕ್ಷ ನಾಗೇಶ್ ಬೊಳ್ಳೂರು, ಕಿನ್ನಿಗೋಳಿ ಗ್ರಾ.ಪಂ. ಮಾಜಿ ಅಧ್ಯಕ್ಷ ದೇವಪ್ರಸಾದ್ ಪುನರೂರು, ದೇವದಾಸ ಕುಳಾಯಿ, ಕೆಮ್ರಾಲ್ ಗ್ರಾ. ಪಂ. ಪಿಡಿಒ ರಮೇಶ್ ರಾಥೋಡ್, ಶ್ರೀ ಹರಿ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಬಾಲಕೃಷ್ಣ ಉಪಸ್ಥಿತರಿದ್ದರು. ಹರೀಶ್ ದೇವಾಡಿಗ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Kinnigoli-13041608

Comments

comments

Comments are closed.

Read previous post:
Kinnigoli-13041607
ಹಿಂದಕ್ಕೆ ಚಲಿಸಿದ ಬಸ್ಸು ತಪ್ಪಿದ ದುರಂತ

ಕಿನ್ನಿಗೋಳಿ: ಬಸ್ಸು ನಿಲ್ದಾಣದಲ್ಲಿ ಚಾಲಕ ಬಸ್ಸು ನಿಲ್ಲಿಸಿ ಮದ್ಯಾಹ್ನದ ಊಟಕ್ಕೆ ತೆರಳಿದ ಸಮಯ ಬಾಲಕನೊಬ್ಬ ಆಯತಪ್ಪಿ ಗೇರ್ ಲಿವರ್‌ನ ಮೇಲೆ ಬಿದ್ದಾಗ ಬಸ್ಸು ಹಿಮ್ಮುಖವಾಗಿ ಚಲಿಸಿ ಮೂರು ದ್ವಿಚಕ್ರ...

Close