ಕಿನ್ನಿಗೋಳಿ ಬಹುಗ್ರಾಮ – ಈಶ್ವರಪ್ಪ ಭೇಟಿ

ಕಿನ್ನಿಗೋಳಿ: ರಾಜ್ಯದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ ಸರ್ಕಾರ ಕಳೆದ ೩ ವರ್ಷದಿಂದ ಶುದ್ಧ ಕುಡಿಯುವ ನೀರಿನ ಯೋಜನೆಯಲ್ಲಿ 7000 ಘಟಕಗಳು ಮಾರ್ಚ್ ೧೬ರ ಒಳಗೆ ಪೂರ್ತಿಯಾಗುವುದು ಎಂದು ವಿಧಾನ ಸಭೆ ಪರಿಷತ್ ಗಳಲ್ಲಿ ಗೋಷಣೆ ಮಾಡಿ ಇದೀಗ ಕೇವಲ 1400 ಘಟಕಗಳು ಪೂರ್ತಿಯಾಗಿವೆ. ಇಂತಹ ಅವೈಜ್ಞಾನಿಕ ಕಾರ್ಯವೈಖರಿಗೆ ಕುಂಟುತ್ತಾ ಸಾಗುತ್ತಿರುವ ಕಿನ್ನಿಗೋಳಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಸ್ಪಷ್ಟ ನಿದರ್ಶನ. ಈ ಎಲ್ಲಾ ಅವಾಂತರಗಳಿಗೆ ಸರ್ಕಾರವೇ ನೇರ ಹೊಣೆಯಾಗಿದೆ. ಕಳಪೆ ಕಾಮಗಾರಿ, ತಾಂತ್ರಿಕ ವೈಫಲ್ಯ, ಸ್ಥಳೀಯ ಶಾಸಕರ ನಿರ್ಲಕ್ಷ ಎತ್ತಿ ತೋರುತ್ತದೆ. ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ಆರೋಪಿಸಿದರು.
ಕಿನ್ನಿಗೋಳಿ ಸಮೀಪದ ಬಳ್ಕುಂಜೆ ಗಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಕಿನ್ನಿಗೋಳಿ ಬಹುಗ್ರಾಮ ಯೋಜನಾ ಘಟಕಕ್ಕೆ ಮಂಗಳವಾರ ಪರಿಶೀಲನೆ ನಡೆಸಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

ಬಿಜೆಪಿಯು ಎಲ್ಲಾ ಜಿಲ್ಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ. ಕೇಂದ್ರ ಸರಕಾರ ರೈತರಿಗಾಗಿ 1540 ಕೋಟಿ ರೂಪಾಯಿ ಬಿಡುಗಡೆಗೊಳಿಸಿದರೂ ಅದನ್ನು ಸರಿಯಾಗಿ ಕಾರ್ಯಗೊಳಿಸಿಲ್ಲ ರಾಜ್ಯದ 136 ತಾಲೂಕುಗಳು ಬರ ಪೀಡಿತ ಪ್ರದೇಶಗಳೆಂದು ಸ್ವತ: ಘೋಷಿಸಿದ ರಾಜ್ಯಸರಕಾರ, ಕೇವಲ ಭ್ರಷ್ಟರಿಗೆ ರಕ್ಷಣೆ ನೀಡುವಲ್ಲಿ ಕಾರ್ಯನಿರತವಾಗಿದೆ. ಕಾಂಗ್ರೇಸ್ ನಲ್ಲಿ ಗುಂಪುಗಾರಿಕೆ ಇದ್ದು ಅಸಮರ್ಥ ಮಂತ್ರಿಗಳಿದ್ದಾರೆಂದು ಸ್ವಪಕ್ಷೀಯರೇ ಆರೋಪಿಸಿತ್ತದ್ದಾರೆ. ಕೆಡಿಪಿ ಸಭೆಗಳು ಸರಿಯಾಗಿ ನಡೆಯುತ್ತಿಲ್ಲ ಎಂದರು.

ಕಿನ್ನಿಗೋಳಿಯ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ನಮ್ಮ ಸರ್ಕಾರ ಇರುವಾಗಲೇ ಪ್ರಾರಂಭವಾಗಿದ್ದರು ನಮ್ಮ ಆಡಳಿತದ ಕೊನೆದಿನದಲ್ಲಾದ ಗೊಂದಲಗಳಿಂದ ವಿರೋಧ ಪಕ್ಷವಾಗಬೇಕಾದ ಪ್ರಮೇಯ ಬಂತು ಎಂದು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಈಶ್ವರಪ್ಪ, ಮೂರು ವರ್ಷವಾಗುತ್ತ ಬಂದಿರುವ ಕಾಂಗ್ರೇಸ್ ಸರ್ಕಾರ ಎಚ್ಚೆತ್ತುಕೊಳ್ಳಬೇಕಿತ್ತು. ನಾವು ಕುಡಿಯುವ ನೀರಿನಲ್ಲಿ ರಾಜಕೀಯ ಮಾಡುತ್ತಿಲ್ಲ ಎಂದರು.

ಈ ಸಂದರ್ಭ ವಿಪಕ್ಷದ ಮುಖ್ಯ ಸಚೇತಕ ಶಾಸಕ ಸುನೀಲ್ ಕುಮಾರ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಉಮಾನಾಥ ಕೋಟ್ಯಾನ್, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಸುಚರಿತ ಶೆಟ್ಟಿ, ಕಸ್ತೂರಿ ಪಂಜ, ವಿನೋದ್ ಬೊಳ್ಳೂರು, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಈಶ್ವರ್ ಕಟೀಲ್, ತಾಲೂಕು ಪಂಚಾಯಿತಿ ಸದಸ್ಯರಾದ ದಿವಾಕರ ಕರ್ಕೇರ, ಶರತ್ ಕುಬೆವೂರು, ರಶ್ಮಿ ಆಚಾರ್ಯ, ಬಿಜೆಪಿ ಮುಖಂಡರಾದ ಕೆ.ಆರ್ ಪಂಡಿತ್, ದೇವಪ್ರಸಾದ್ ಪುನರೂರು, ಬಾಹುಬಲಿ ಪ್ರಸಾದ್, ದೀಪಕ್ ಶೆಟ್ಟಿ, ಕಿಶೋರ್ ಕುಮಾರ್ ಮತ್ತಿತರರು ಇದ್ದರು.

Kinnigoli-130416010 Kinnigoli-130416011

Comments

comments

Comments are closed.

Read previous post:
Kinnigoli-13041609
ಕೆಮ್ಮಡೆ ಧಾರ್ಮಿಕ ಸಭೆ

ಕಿನ್ನಿಗೋಳಿ: ದೈವ ದೇವರುಗಳ ಧಾರ್ಮಿಕ ಸಾಂಸ್ಕ್ರತಿಕ ಆಚರಣೆಗಳು ನಮ್ಮ ಕರಾವಳಿಯಲ್ಲಿ ಪ್ರಚಲಿತವಾಗಿದ್ದು ಇದರಿಂದ ಮಾನಸಿಕ ನೆಮ್ಮದಿ ಸಿಗುವುದು ಎಂದು ಲಯನ್ಸ್ ಕ್ಲಬ್ ಪ್ರಾಂತೀಯ ಅಧ್ಯಕ್ಷ ದೇವಪ್ರಸಾದ್ ಪುನರೂರು ಹೇಳಿದರು....

Close